Daali Dhananjay: ಡಾಲಿ ಬರೆದ ‘ಟಗರು’ ಹಾಡು ಫುಲ್ ವೈರಲ್!

ಡಾಲಿ ಧನಂಜಯ್ ಬರೀ ನಟನೆ ಮಾತ್ರವಲ್ಲ, ನಿರ್ಮಾಣ ಕಾರ್ಯದಲ್ಲೂ ತಮ್ಮ ತಾಕತ್ ತೋರಿಸಿದ್ದಾರೆ. ಇಷ್ಟೇ ಇದ್ದರೆ ಸಾಕಾ? ಈಗ ತಮ್ಮ ಬರವಣಿಗೆ ಶಕ್ತಿ ಏನು ಅನ್ನೋದನ್ನೂ 'ಟಗರು ಪಲ್ಯ' ಹಾಡಿನ ಮೂಲಕ ಡಾಲಿ ಧನು ಸಿನಿ ಪ್ರಿಯರಿಗೆ ಸ್ಯಾಂಪಲ್ ಕೊಟ್ಟಿದ್ದಾರೆ. ಹಾಗಾದರೆ ಹೇಗಿದೆ ಡಾಲಿ ಬರೆದ 'ಟಗರು ಪಲ್ಯ' ಹಾಡು? ಡಾಲಿ ಬರೆದ ಹಾಡಿನ ಸಾಲಿಗೆ ಸಿನಿ ಪ್ರಿಯರು ಕೊಟ್ಟ ರಿಯಾಕ್ಷನ್ ಏನು? ಬನ್ನಿ ತಿಳಿಯೋಣ.

ಅಷ್ಟಕ್ಕೂ ಈಗಾಗಲೇ ರಿಲೀಸ್ ಆಗಿರುವ 'ಟಗರು ಪಲ್ಯ' ಚಿತ್ರದ ಟೈಟಲ್ ಟ್ರ್ಯಾಕ್‌ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈಗ ಚಿತ್ರತಂಡ 'ಸೂರ್ಯಕಾಂತಿ ನಾನು..' ಎಂಬ ಮೆಲೋಡಿ ಹಾಡನ್ನು ರಿಲೀಸ್ ಮಾಡಿದೆ. ಸ್ವತಃ ಡಾಲಿ ಧನಂಜಯ್ ಈ ಹಾಡಿಗೆ ಕ್ಯಾಚಿ‌ ಮ್ಯಾಚಿ ಪದವನ್ನ ಪೊಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಕುಣಿಸಿದ್ದು ವಾಸುಕಿ ವೈಭವ್ ಟ್ಯೂನ್ ಕೂಡ ಅದ್ಭುತವಾಗಿದೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಸಾಂಗ್‌ಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ.

tagaru-palya-kannada-movie-2nd-song-released

ಕವಿಯಾದ ನಟ ಡಾಲಿ ಧನು!

ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ 3ನೇ ಚಿತ್ರ 'ಟಗರು ಪಲ್ಯ'. ಹೀಗೆ ಫಸ್ಟ್ ಲುಕ್‌ನಿಂದಲೇ ಹವಾ ಎಬ್ಬಿಸಿರುವ 'ಟಗರು ಪಲ್ಯ' ಸಿನಿಮಾ ಈಗಾಗಲೇ ಕನ್ನಡಿಗರ ಕುತೂಹಲವನ್ನು ಕೆರಳಿಸಿದೆ. ಡಾಲಿ ಅಭಿನಯದ ಹೆಡ್ & ಬುಷ್ ಚಿತ್ರದ ರಿಲೀಸ್‌ಗೆ ಮೊದಲು ಟಗರು ಪಲ್ಯ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದೀಗ ಶೂಟ್ ಮುಗಿಸಿ, ಬಿಡುಗಡೆಗೂ ಸಜ್ಜಾಗುತ್ತಿದೆ. ಇದೇ ಹೊತ್ತಲ್ಲಿ ಟೈಟಲ್ ಟ್ರ್ಯಾಕ್ ನಂತರ ಈಗ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ಅದರಲ್ಲೂ ಡಾಲಿ ಬರೆದ 2ನೇ ಹಾಡು ಅನ್ನೋದು ಮತ್ತೊಂದು ವಿಶೇಷ. ಈ ಮೂಲಕ ಪದೇ ಪದೆ ತಮ್ಮೊಳಗಿನ ಕವಿಯನ್ನು ಹೊರತರುತ್ತಿದ್ದಾರೆ ನಟ ಧನಂಜಯ್.

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸ್ಪೆಷಲ್?

'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದಲೇ ಕನ್ನಡಿಗರ ಗಮನ ಸೆಳೆದಿತ್ತು.

tagaru-palya-kannada-movie-2nd-song-released

ಅದ್ಭುತ ತಾರಾಬಳಗ ಸಿನಿಮಾದಲ್ಲಿದೆ

'ಟಗರು ಪಲ್ಯ'ದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಟಗರು ಪಲ್ಯ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.

ಒಟ್ನಲ್ಲಿ ಡಾಲಿ ಧನಂಜಯ್ ಮತ್ತೊಂದು ಸ್ಪೆಷಲ್ ಸಿನಿಮಾವನ್ನ ಈಗ ಕನ್ನಡಿಗರ ಎದುರು ಇಡಲು ಸಜ್ಜಾಗಿದ್ದಾರೆ. ಹೀಗಾಗಿ ಅಭಿಮಾನಿಗಳ ಕುತೂಹಲ ಕೂಡ ದುಪ್ಪಟ್ಟಾಗಿದೆ. ಹೀಗೆ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಸ್ಪೆಷಲ್ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶವೂ ಒದಗಿ ಬರಲಿದೆ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಚಿತ್ರ ತಂಡ ಸಿನಿಮಾ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆ ನಡೆಸುತ್ತಿದೆ. ಇನ್ನೇನು ಟೀಸರ್ ರಿಲೀಸ್‌ಗೂ ಕೌಂಟ್‌ಡೌನ್ ಶುರು ಆಗಿದ್ದು, ಕೆಲವೇ ದಿನದಲ್ಲಿ ಅಭಿಮಾನಿಗಳಿಗೆ ಟೀಸರ್ ಕಣ್ತುಂಬಿಕೊಳ್ಳುವ ಅವಕಾಶ ಕೂಡ ಒದಗಿ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+