Ramya: ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು: ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ರಮ್ಯಾ!
Ramya Instagram Post: ದೇಶದಲ್ಲಿ ಕಳೆದ ಎರಡು ವಾರಗಳಿಂದ ಬೀದಿ ನಾಯಿಗಳ ವಿಚಾರವು ಆಂದೋಲನ ಸ್ವರೂಪವನ್ನು ಪಡೆದುಕೊಂಡಿದೆ. ಇದೀಗ ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದ ಬೀದಿ ನಾಯಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ಈ ಬಗ್ಗೆ ನಟಿ ರಮ್ಯಾ ಅವರು ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ವಿಷಯವಾಗಿ ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
1. ಬೀದಿ ನಾಯಿಗಳ ವಿಚಾರವಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೆಹಲಿ - ಎನ್‌ಸಿಆರ್‌ನ ಬೀದಿಗಳಿಂದ ಬೀದಿ ನಾಯಿಗಳನ್ನು ಪ್ರಾಣಿಗಳ ಶೆಲ್ಟರ್ ಇರುವ ಪ್ರದೇಶಕ್ಕೆ ಸ್ಥಳಾಂತರಿಸುವ ವಿಷಯದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಬೀದಿ ನಾಯಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಕೊಡಲಾಗಿರುವ ಸೂಚನೆಗಳನ್ನು ಪಾಲಿಕೆಯ ಅಧಿಕಾರಿಗಳು ಪಾಲನೆ ಮಾಡುವುದನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ಏತನ್ಮಧ್ಯೆ ಬೀದಿ ನಾಯಿಗಳನ್ನು ಅನಿರ್ದಿಷ್ಟಾವಧಿಗೆ ನಾಯಿಗಳ ಆಶ್ರಯ ತಾಣಗಳಲ್ಲಿ ಬಿಡಲಾಗುವುದು ಎನ್ನುವ ಷರತ್ತನ್ನು ತಿದ್ದುಪಡಿ ಮಾಡಿದೆ. ಲಸಿಕೆ ಹಾಕಿದನಂತರವೇ ಅವುಗಳನ್ನು ತೆಗೆದುಕೊಂಡು ಹೋದ ಅಥವಾ ಕರೆದುಕೊಂಡು ಹೋಗಿರುವ ಸ್ಥಳದಲ್ಲೇ ಮತ್ತೆ ತೆಗೆದುಕೊಂಡು ಬಂದು ಬಿಡಬೇಕು ಎಂದು ನ್ಯಾಯಾಲಯ ಹೇಳಿದೆ.

2. ಬೀದಿ ನಾಯಿಗಳ ಕುರಿತು ತನ್ನ ತೀರ್ಪು ನೀಡುವಾಗ, ನ್ಯಾಯಾಲಯವು ಇದು ಮಧ್ಯಂತರ ಆದೇಶವಾಗಿದೆ ಆದ್ದರಿಂದ ಇದನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ನಾವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಕ್ಷಗಳನ್ನಾಗಿ ಮಾಡಿದ್ದೇವೆ (ಪರಿಪಾಲನೆ ಅಥವಾ ಅಭಿವೃದ್ಧಿಪಡಿಸಬೇಕು) ಎಂದು ನ್ಯಾಯಾಲಯ ಹೇಳಿದೆ.
3. ಸಾರ್ವಜನಿಕವಾಗಿ ಬೀದಿ ನಾಯಿಗಳಿಗೆ ಆಹಾರ ಕೊಡುವುದಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಬೀದಿ ನಾಯಿಗಳಿಗೆ ಪ್ರತ್ಯೇಕ ಆಹಾರ ಸ್ಥಳಗಳನ್ನು ಮಾಡಲಾಗುವುದು. ಈ ರೀತಿಯ ಆಹಾರದಿಂದಾಗಿ ಅನೇಕ ಘಟನೆಗಳು ಸಂಭವಿಸಿವೆ. ನಾಯಿ ಕಡಿತದಿಂದಾಗಿ, ಜನರು ರೇಬೀಸ್ ಕಾಯಿಲೆಗೆ ತುತ್ತಾಗಿದ್ದಾರೆ ಮತ್ತು ಅನೇಕ ಚಿಕ್ಕ ಮಕ್ಕಳು ಸಾವನ್ನಪ್ಪಿದರು ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
4. ಬೀದಿನಾಯಿಗಳಿಗೆ ಪ್ರತ್ಯೇಕ ಆಹಾರ ಸ್ಥಳಗಳನ್ನು ಮಾಡಬೇಕು. ನಾಯಿಗಳನ್ನು ದತ್ತು ಪಡೆಯಲು ದೆಹಲಿ ಮಹಾನಗರ ಪಾಲಿಕೆಗೆ (MCD) ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಹೇಳಲಾಗಿದೆ.
5. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಾಗೂ ಕಚ್ಚುವ ನಾಯಿಗಳನ್ನು ಇದೇ ರೀತಿ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೆ, ಇದೇ ಸಮಯದಲ್ಲಿ ಸಾರ್ವಜನಿಕವಾಗಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಸಮಯದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಎಲ್ಲಾ ರಾಜ್ಯಗಳಿಗೆ ಆದೇಶಗಳನ್ನು ನೀಡಿದ್ದು, ಈ ವಿಚಾರವನ್ನು ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ನಾಯಿಗಳ ವಿಚಾರವಾಗಿ ವಿಡಿಯೋಗಳನ್ನೂ ಅವರು ಶೇರ್ ಮಾಡಿದ್ದಾರೆ.
ಅಲ್ಲದೇ ಈ ಪೋಸ್ಟ್‌ನಲ್ಲಿ ನಟಿ ರಮ್ಯಾ ಅವರು, Win for the dogs and compassion! Love always wins ಎಂದು ಬರೆದುಕೊಂಡಿದ್ದಾರೆ.












Click it and Unblock the Notifications