Bigg Boss: ನಾಯಿತರ ನಿಂತ್ಕೊಂಡಿರ್ತಿನಲ್ಲ! ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸಖತ್ ಕ್ಲಾಸ್
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ದಿನೇ ದಿನೇ ರೋಚಕವಾಗುತ್ತಿದೆ. ಸ್ಪರ್ಧಿಗಳ ನಡುವೆ ಹಣಾಹಣಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇತ್ತೀಚೆಗೆ ಶೋಭಾ ಶೆಟ್ಟಿ ತನಗೆ ಆಟ ಮುಂದುವರೆಸಲು ಆಗಲ್ಲ ಎಂದು ಮನೆಯಿಂದ ಹೊರಬಂದಿದ್ದರು. ಅಂದು ಸುದೀಪ್ ಶೋಭಾ ಶೆಟ್ಟಿಗೆ ಮನೆಯಿಂದ ಹೊರ ಹೋಗದಂತೆ ಮನವೊಲಿಸಲು ಪ್ರಯತ್ನಿಸಿದ್ದರು, ಆದರೆ ಒಂದೇ ಕ್ಷಣದಲ್ಲಿ ಎರಡು ರೀತಿ ಮಾತನಾಡಿದ್ದು ಸುದೀಪ್ ಕೋಪಕ್ಕೆ ಕಾರಣವಾಗಿತ್ತು. ಅವರನ್ನು ಮನೆಯಿಂದ ಹೊರಹೋಗುವಂತೆ ಸೂಚನೆ ಕೊಟ್ಟಿದ್ದರು.
ಅದಾದ ಬಳಿಕ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಶೋಭಾ ಶೆಟ್ಟಿ ಪರವಾಗಿ ಮಾತನಾಡಿದ್ದು, ಶಿಶಿರ್ ನನ್ನು ಮನೆಯಲ್ಲಿ ಉಳಿಸಲು ಶೋಭಾ ಶೆಟ್ಟಿಯನ್ನು ಮನೆಯಿಂದ ಹೊರ ಕಳಿಸಲಾಗಿದೆ ಎನ್ನುವ ರೀತಿ ಮಾತನಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ತ್ರಿವಿಕ್ರಮ್‌ಗೆ ಕ್ಲಾಸ್ ತೆಗೆದುಕೊಂಡಿದ್ದರು.

ಕಿಚ್ಚನ ಪಂಚಾಯಿತಿ ಆರಂಭವಾಗುತ್ತಿದ್ದಂತೆ ಸುದೀಪ್ ತ್ರಿವಿಕ್ರಮ್ ಮಾತನಾಡಿರುವ ವಿಡಿಯೋ ಪ್ಲೇ ಮಾಡಲು ಹೇಳಿದರು. ಬಳಿಕ ಮಾತನಾಡಿದ ಸುದೀಪ್, ಶಿಶಿರ್ ಹೊರಗೆ ಕಳಿಸಬೇಕು ಎನ್ನುವುದಿದ್ದರೆ ಅವರನ್ನು ಹೊರಗೆ ಕಳಿಸಿ ಎಂದು ತ್ರಿವಿಕ್ರಂಗೆ ಹೇಳಿದರು.
ಸಿಟ್ಟಾದ ಸುದೀಪ್
ಶಿಶಿರ್ ನ ಉಳಿಸಲು ಶೋಭಾ ಶೆಟ್ಟಿಯನ್ನು ಹೊರಗಡೆ ಕಳಿಸಿಲ್ಲ, ಅಂದು ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನೇ 45 ನಿಮಿಷ ಅವರ ಜೊತೆ ಮಾತನಾಡಿ ಮನೆಯಲ್ಲೇ ಇರುವಂತೆ ಮನವೊಲಿಸಿದೆ. ಅಷ್ಟೆಲ್ಲಾ ಹೇಳಿದ ಮೇಲೂ ಅವರು ಮತ್ತೆ ನಾನು ಹೊರಗಡೆ ಹೋಗುತ್ತೇನೆ ಎಂದು, ಅದಕ್ಕೆ ಅವರನ್ನು ಹೊರಗೆ ಕಳಿಸಿದೆ, ಇದು ಬಿಗ್ ಬಾಸ್ ನಿರ್ಧಾರವಲ್ಲ ನನ್ನ ನಿರ್ಧಾರ ಎಂದು ಖಡಕ್ಕಾಗಿ ಹೇಳಿದರು.
ಸುದೀಪ್ ಇಡೀ ಕಾರ್ಯಕ್ರಮ ನಿಂತು ಸುಸ್ತಾಗಿದ್ದರು, ಅವರಿಗೆ ಬೆನ್ನು ನೋವು ಬಂದಿತ್ತು. ಶೋಭಾ ಶೆಟ್ಟಿಗೆ ಅಷ್ಟು ಹೇಳಿದರೂ ಅವರ ಮಾತು ಕೇಳಲಿಲ್ಲ ಎಂದು ಕೋಪಬಂದಿತ್ತು ಎನ್ನುವ ರೀತಿ ಸ್ಪರ್ಧಿಗಳು ಮಾತನಾಡಿದ್ದು ಸುದೀಪ್‌ಗೆ ಕೋಪ ಬರಿಸಿದೆ. ಎಲ್ಲಾ ಸ್ಪರ್ಧಿಗಳನ್ನು ನಿಲ್ಲಿಸಿಯೇ ಮಾತನಾಡಿದ ಅವರು, ನಾಯಿತರ ನಿಂತ್ಕೊಂಡಿರ್ತಿನಲ್ಲ ಅದಕ್ಕೆ ನಿಮಗೆ ಅಹಂ ಅನಿಸುತ್ತದೆ ಎಂದು ಸಿಟ್ಟಾದರು.
11 ಸೀಸನ್‌ಗಳಲ್ಲೂ ಗಂಟೆಗಟ್ಟಲೆ ನಿಂತುಕೊಂಡೇ ಈ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅದಕ್ಕೆಲ್ಲಾ ಕೋಪ ಮಾಡಿಕೊಂಡು ಅದನ್ನು ಸ್ಪರ್ಧಿ ಮೇಲೆ ತೋರಿಸಲು ಆಗುತ್ತದಾ? ನಿಮಗೆ ಆಟ ಅರ್ಥವಾಗಿಲ್ಲ ಎಂದರೆ ನಾನೇನು ಮಾಡಲಿ ಎಂದು ಕ್ಲಾಸ್ ತೆಗೆದುಕೊಂಡರು.
ಈ ವಾರ ಎಲಿಮೇಷನ್ ಇದೆಯಾ ಇಲ್ಲವಾ ಎನ್ನುವ ಕುತೂಹಲ ಕೂಡ ಇದ್ದು, ರಜತ್, ಗೌತಮಿ ಸೇಫ್ ಆಗಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಯಾರು ಉಳಿಯುತ್ತಾರೆ ಯಾರು ಮನೆಗೆ ಹೋಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.












Click it and Unblock the Notifications