Janhvi Kapoor: ದಕ್ಷಿಣ ಭಾರತೀಯರಿಂದ "ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್" ಟ್ರೋಲ್!
Janhvi Kapoor: ನಟಿ ದಿ. ಶ್ರೀದೇಶಿ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಮಲಯಾಳಿಗಳು ಹಾಗೂ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಕನ್ನಡಿಗರೂ ಸಹ ಜಾಹ್ನವಿ ಕಪೂರ್ ಅವರ ಹೊಸ ಸಿನಿಮಾದ ಒಂದು ನಿರ್ದಿಷ್ಟ ಡೈಲಾಗ್‌ಗೆ ಅಸಮಾಧಾನ ಹೊರ ಹಾಕಿದ್ದಾರೆ. Param Sundari / ಪರಮಸುಂದರಿ ಎನ್ನುವ ಇವರ ಹೊಸ ಸಿನಿಮಾ ಕೇರಳದಲ್ಲಿ ಭಾರೀ ಟ್ರೋಲ್ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಿನಿಮಾದ ವಿಚಾರವಾಗಿ ದಕ್ಷಿಣ ಭಾರತೀಯರು ಹಾಗೂ ಕನ್ನಡಿಗರು ಸಹ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬದಲಿಗೆ ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹೆಸರು ಉಲ್ಲೇಖಿಸಬೇಕಿತ್ತು ಎಂದೂ ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ. Param Sundari ಎನ್ನುವ ಹಿಂದಿ ಸಿನಿಮಾ ಹಿಂದಿ ಭಾಷೆಯ ಪ್ರೀತಿ ಮತ್ತು ಹಾಸ್ಯದ ಸಿನಿಮಾ. ಈ ಸಿನಿಮಾವನ್ನು ತುಷಾರ್ ಜಲೋಟಾ ನಿರ್ದೇಶಿಸಿದ್ದಾರೆ ಮತ್ತು ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ದಿನೇಶ್ ವಿಜನ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ದಿ. ಶ್ರೀದೇಶಿ ಅವರ ಪುತ್ರಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಜುಲೈ 25, 2025 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾವನ್ನು ಆಗಸ್ಟ್ 29ಕ್ಕೆ ಮುಂದೂಡಲಾಗಿದೆ. ಈ ನಡುವೆ ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯರನ್ನು ಚಿತ್ರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.

ಹಿಂದಿ ಸಿನಿಮಾಗಳಲ್ಲಿ ಹಾಗೂ ಹಲವು ಉತ್ತರ ಭಾರತೀಯರಿಗೆ ದಕ್ಷಿಣ ಭಾರತೀಯರ ಬಗ್ಗೆ ಹಲವು ತಪ್ಪು ಕಲ್ಪನೆಗಳು ಇವೆ. ಅಲ್ಲದೇ ಯಾವುದೇ ನಿದಿರ್ಷ್ಟ ಪ್ರದೇಶವನ್ನು ತೋರಿಸುವಾಗಲಾದರೂ ಆಯಾ ಪ್ರದೇಶದ ಭಾಷೆ ಮತ್ತು ಸಂಸ್ಕಾರಕ್ಕೆ ಆದ್ಯತೆ ಕೊಡಬೇಕು ಎನ್ನುವುದನ್ನು ಕನ್ನಡಿಗರೂ ಸೇರಿದಂತೆ ದಕ್ಷಿಣ ಭಾರತೀಯರು ಆಸೆಪಡುವುದು ಸಹಜ ಕೂಡ. ಇನ್ನು ಕನ್ನಡದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಸು ಫ್ರಮ್ ಸೋ ಅತ್ಯುತ್ತಮ ಉದಾ. ಒಂದು ನಿರ್ದಿಷ್ಟ ಪ್ರದೇಶದ ನುಡಿ ಮತ್ತು ಆಚಾರ - ವಿಚಾರಗಳನ್ನು ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಿರ್ದೇಶಿಸಲಾಗಿದೆ. ಆದರೆ, ಉತ್ತರ ಭಾರತೀಯರಲ್ಲಿ ಇರುವ ದಕ್ಷಿಣ ಭಾರತೀಯರೆಲ್ಲರೂ ಮದ್ರಾಸಿಗಳು ಎನ್ನುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದಕ್ಕೆ Param Sundari ಸಿನಿಮಾದಲ್ಲಿ ಪ್ರಯತ್ನಿಸಲಾಗಿದೆಯಾದರೂ ಅದೊಂದು ಎಡವಟ್ಟು ಸೃಷ್ಟಿ ಮಾಡಿದೆ.
Param Sundari ಸಿನಿಮಾದಲ್ಲಿ ಜಾಹ್ನವಿ ಕಪೂರ್ ಅವರು Thekkeppatta Sundari Damodaran Pillai ಎನ್ನುವ ಡೈಲಾಗ್ ಭಾರೀ ಟ್ರೋಲ್‌ಗೆ ಕಾರಣವಾಗಿದೆ. 'ತೆಕ್ಕಪೆಟ್ಟ ಸುಂದರಿ' ಎನ್ನುವ ಡೈಲಾಗ್ ಅನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಅಲ್ಲದೇ ತೆಕ್ಕಾ ಅಂದರೆ ಮಲಯಾಳಂ ಭಾಷೆಯಲ್ಲಿ ತಿಕ್ಕು ಅಥವಾ ಉಜ್ಜುವುದು ಎಂಬರ್ಥವೂ ಇದೆ. ಇನ್ನು ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಮಾತನಾಡುವ ಅತಿಶಯೋಕ್ತಿಯಾಗಿ ತೋರಿಸಲಾಗಿದೆ. ಇದು ಹಿಂದಿ ಸಿನಿಮಾಗಳು ಮೊದಲಿನಿಂದಲೂ ಮಾಡಿಕೊಂಡು ಬಂದ ಎಡವಟ್ಟು ಎಂದೇ ಹೇಳಲಾಗುತ್ತಿದೆ.
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಮೀಮ್ಸ್, ಟ್ರೋಲ್‌ಗಳು ಹಾಗೂ ವೀಡಿಯೊಗಳು ಪರಮ ಸುಂದರಿಯನ್ನ (ಸಿನಿಮಾವನ್ನು) ಟೀಕಿಸಿವೆ.
ರಾಜ್‌ಕುಮಾರ್ ಅವರ ಹೆಸರು ಉಲ್ಲೇಖಿಸಬೇಕಿತ್ತು !
ಇನ್ನು ಈ ಸಿನಿಮಾದಲ್ಲಿ ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಗಳಿವೆ. ಮಲಯಾಳಂ ಮೋಹನ್‌ಲಾಲ್, ತಮಿಳುನಾಡು ರಜನಿಕಾಂತ್, ಆಂಧ್ರ ಅಲ್ಲು ಅರ್ಜುನ್ ಹಾಗೂ ಕರ್ನಾಟಕ ಕನ್ನಡ ಯಶ್ ಎಂದು ನಟಿ ಜಾಹ್ನವಿ ಅವರ ಡೈಲಾಗ್ ಇದೆ. ಇದರಲ್ಲಿ ಮೊದಲ ಎರಡು ಚಿತ್ರರಂಗದ ಬಗ್ಗೆ ಅಲ್ಲಿನ ಸೂಪರ್ ಸ್ಟಾರ್ ಹೆಸರು ತೆಗೆದುಕೊಳ್ಳಲಾಗಿದೆ. ನಟ ಯಶ್ ಅವರು ಸಹ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಇಡೀ ಚಿತ್ರರಂಗದ ಬಗ್ಗೆ & ಕನ್ನಡದ ಬಗ್ಗೆ ಹೇಳುವಾಗ ಡಾ. ರಾಜ್‌ಕುಮಾರ್ ಅವರ ಹೆಸರು ಸೂಕ್ತವಾಗಿತ್ತು ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications