Darshan Thoogudeepa: ಪೌಡರ್ ಹಾಕ್ಕೊಳ್ಳಿ, ತಲೆ ಬಾಚ್ಕೊಳ್ಳಿ; ಡೈಲಾಗ್ ಮೂಲಕ ನಟ ದರ್ಶನ್‌ ಪರ ವಕೀಲರಿಗೆ ಎಸ್‌ಪಿಪಿ ಟಾಂಗ್

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಎ2, ಪವಿತ್ರಾ ಗೌಡ ಎ1 ಆರೋಪಿಗಳಾಗಿದ್ದಾರೆ. ಬೆನ್ನು ನೋವು ಹಿನ್ನೆಲೆ ದರ್ಶನಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಇದರ ನಡುವೆಯೇ ಹೋಕೋರ್ಟ್‌ನಲ್ಲಿ ನಿನ್ನೆ (ಡಿಸೆಂಬರ್ 06) ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದರ್ಶನ್‌ ಪರ ವಕೀಲದ ವಾದಕ್ಕೆ ಎಪಿಪಿ ಪ್ರಸನ್ನ ಕುಮಾರ್ ಖಡಲ್‌ ಪ್ರತಿವಾದ ಮಾಡಿ ಗಮನ ಸೆಳೆದಿದ್ದಾರೆ.

ಬೆನ್ನು ನೋವು ಹಿನ್ನೆಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್‌ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇದ್ದರೆ, ಎ1 ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನು ಡಿಸೆಂಬರ್ 6ರಂದು ಹೈಕೋರ್ಟ್‌ನಲ್ಲಿ ಇವರಿಬ್ಬರು ಸೇರಿದಂತೆ ಕೆಲವು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.

SPP Prasanna Kumar counter to Actor Darshan s Lawyer

ನಟ ದರ್ಶನ್ ಹಾಗೂ ಪವಿತ್ರಾ ಗೌಡ, ಇತರ ಕೆಲವ ಆರೋಪಿಗಳ ವಾದ ಮುಕ್ತಾಯವಾದ ಬಳಿಕ ಸರ್ಕಾರಿ ಪರ ವಕೀಲರಾದ ಎಸ್‌ಪಿಪಿ ಪ್ರಸನ್ನ ಕುಮಾರ್​ ಅವರು​ ಪ್ರತಿವಾದ ಮಂಡಿಸಿದ್ದು, ಈ ವೇಳೆ ನಟ ದರ್ಶನ್ ಸರ್ಜರಿ ವಿಳಂಬವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ದರ್ಶನ್‌​ಗೆ ಮೆಡಿಕಲ್ ಗ್ರೌಂಡ್ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಈವರೆಗೆ 2 ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.

ವರದಿಯಲ್ಲಿ ವೈದ್ಯರು ಬಿಪಿ ನಾರ್ಮಲ್‌ಗೆ ಬಂದಿಲ್ಲ ಎಂದು ಹೇಳಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಆಪರೇಷನ್ ವಿಳಂಬವಾಗಲು ಬಿಪಿ ವ್ಯತ್ಯಾಸವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ನಾನು ಈ ಹಿಂದೆಯೇ ತಜ್ಞ ವೈದ್ಯರ ವರದಿ ಬಂದ ಮೇಲೆ ಜಾಮೀನು ನೀಡಿ ಎಂದಿದ್ದೆ ಅಂತಾ ಎಪಿಪಿ ಪ್ರತಿವಾದ ಮಂಡನೆ ಮಾಡಿದರು.

ಅಮ್ಲಾ ಮಾತ್ರೆ ಎರಡೂವರೆ ರೂಪಾಯಿ, ಬಿಪಿಗೆ ತೆಗೆದುಕೊಳ್ಳುತ್ತಾರೆ. ಆಪರೇಷನ್‌ಗೆ ತಯಾರು ಮಾಡಿದ್ದೇವೆ ಅಂತಿದ್ದಾರೆ. ಇದೆಲ್ಲಾ ಒಂದು ಸಿನಿಮಾ ಡೈಲಾಗ್ ರೀತಿ ಇದ್ದು, ಪೌಡರ್ ಹಾಕ್ಕೊಳ್ಳಿ, ತಲೆ ಬಾಚ್ಕೊಳ್ಳಿ ಅನ್ನುವ ಹಾಗೇ ಮಾತಾಡುತ್ತಿದ್ದಾರೆ. ಆದ್ದರಿಂದ ಆರೋಪಿ ನಟ ದರ್ಶನ್​ ಮಧ್ಯಂತರ ಜಾಮೀನು ವಿಸ್ತರಣೆ ಮಾಡಬಾರದು ಎಂದು ಎಸ್‌ಪಿಪಿ ಪ್ರಸನ್ನಕುಮಾರ್‌ ಮನವಿ ಮಾಡಿದರು.

ಮಮಧ್ಯಂತರ ಜಾಮೀನು ರದ್ದುಪಡಿಸಬೇಕು. ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು. ಇಲ್ಲಿವರೆಗೂ ಅವರನ್ನು ಶಸ್ತ್ರಚಿಕಿತ್ಸೆ ಸಿದ್ಧಗೊಳಿಸಲಾಗುತ್ತಿದೆ ಅಂತಲೇ ಹೇಳಿದ್ದಾರೆ. ಮಧ್ಯಂತರ ವೈದ್ಯಕೀಯ ಬೇಲ್​ ರದ್ದುಗೊಳಿಸಿ ಎಂದು ಮನವಿ ಮಾಡಿದರು. ಇನ್ನು ವಾದ ಪ್ರತಿವಾದ ಆಲಿಸಿದ ಹೈಕೋರ್ಟ್‌ ಜಾಮೀನು ಸರ್ಜಿ ವಿಚಾರಣೆಯನ್ನು ಮತ್ತೆ ಸೋಮವಾರ ಅಂದರೆ ಡಿಸೆಂಬರ್ 9ಕ್ಕೆ ಮುಂದೂಡಿಕೆ ಮಾಡಿದೆ. ಈ ಮೂಲಕ ನಟ ದರ್ಶನ್‌ಗೆ ಮತ್ತೆ ಶಾಕ್‌ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+