‘ಕಾಂತಾರ’ ರಿಷಬ್ ಶೆಟ್ಟಿ ಬದಲು ಲೂಸ್ ಮಾದ ಯೋಗಿ ಮಿಂಚಿಂಗ್!
ರಿಷಬ್ ಶೆಟ್ಟಿ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಕಳೆದ ವರ್ಷ ಅಂದ್ರೆ 2022ರಲ್ಲಿ ರಿಲೀಸ್ ಆಗಿದ್ದ 'ಕಾಂತಾರ' ಮೂಲಕ ರಿಷಬ್ ಶೆಟ್ಟಿ ದೊಡ್ಡ ಹವಾ ಸೃಷ್ಟಿಸಿದ್ದರು. ಹೀಗಿದ್ದಾಗಲೇ ರಿಷಬ್ ಶೆಟ್ಟಿ ಖದರ್ ಕೂಡ ಬದಲಾಗಿ ಹೋಗಿತ್ತು. ತಮ್ಮ ಕೈಯಲ್ಲಿ ಇದ್ದ ಹಲವು ಸಿನಿಮಾ ಬಿಟ್ಟು 'ಕಾಂತಾರ-2'ಗಾಗಿ ಹೊರಟಿದ್ದರು ರಿಷಬ್ ಶೆಟ್ಟಿ. ಹೀಗೆ ರಿಷಬ್ ಬಿಟ್ಟು ಹೋಗಿದ್ದ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ಒಂದು ಇದೀಗ ರಿಲೀಸ್‌ಗೆ ರೆಡಿಯಾಗಿದೆ.
'ಬ್ಯಾಚುಲರ್ ಪಾರ್ಟಿ' ಟೈಟಲ್‌ನಡಿ ರಿಲೀಸ್ ಆಗಿದ್ದ ಸಿನಿಮಾ ಒಂದರ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿತ್ತು. ಅದರಲ್ಲೂ 'ಬ್ಯಾಚುಲರ್ ಪಾರ್ಟಿ' ಫಸ್ಟ್ ಲುಕ್ ನೋಡಿದ್ದ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಜೊತೆ ಅಚ್ಯುತ್ ಕುಮಾರ್ ಮತ್ತು ದಿಗಂತ್ ಅವರು ನಟಿಸೋದು ಗ್ಯಾರಂಟಿ ಆಗಿತ್ತು. ಆದರೆ 'ಕಾಂತಾರ'ದ ಅಬ್ಬರದ ಎದುರು ಎಲ್ಲವೂ ಬದಲಾಗಿ ಹೋಗಿತ್ತು. ರಿಷಬ್ ಶೆಟ್ಟಿ ಅವರು ತಮ್ಮ ಪೂರ್ಣ ಗಮನವನ್ನು 'ಕಾಂತಾರ-2' ಮೇಲೆ ಕೇಂದ್ರೀಕರಿಸಿದ ಕಾರಣ 'ಬ್ಯಾಚುಲರ್ ಪಾರ್ಟಿ'ಯನ್ನ ಬಿಟ್ಟುಕೊಟ್ಟರು. ಆದರೂ ಈ ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ.

ರಿಷಬ್ ಜಾಗಕ್ಕೆ ಲೂಸ್ ಮಾದ ಯೋಗಿ!
ಅಂದಹಾಗೆ ಸಿಂಪಲ್ ಸ್ಟಾರ್ ಬಿರುದಾಂಕಿತ ರಕ್ಷಿತ್ ಶೆಟ್ಟಿ ನಿರ್ಮಾಣದ, ಅಬಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ'ಗೆ ಭರ್ಜರಿ ಸರ್ಜರಿ ನಡೆದಿತ್ತು. ನಟ & ನಿರ್ದೇಶಕರಾದ ರಿಷಬ್ ಶೆಟ್ಟಿ ಅವರು 'ಬ್ಯಾಚುಲರ್ ಪಾರ್ಟಿ' ಬಿಟ್ಟು ಹೋದ ನಂತರ, ಅವರ ಸ್ಥಾನಕ್ಕಾಗಿ ಬೇರೆ ನಟನನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಕೊನೆಗೆ ನಟ ಲೂಸ್ ಮಾದ ಯೋಗಿ ಅವರನ್ನು ರಿಷಬ್ ಶೆಟ್ಟಿ ಅವರ ಜಾಗಕ್ಕೆ ರೀಪ್ಲೇಸ್ ಮಾಡಲಾಗಿತ್ತು. ಇದೀಗ ಸಿನಿಮಾದಲ್ಲಿ ಯೋಗಿ ಫುಲ್ ಮಿಂಚು ಹರಿಸಿದ್ದು, ಟೀಸರ್ ರಿಲೀಸ್ ಮಾಡಿದೆ ಸಿನಿಮಾ ತಂಡ. ಜೊತೆಗೆ ರಿಲೀಸ್ ಡೇಟ್ ಕೂಡ ಪಕ್ಕಾ ಆಗಿದೆ.
ಕಾಮಿಡಿ ಕಚಗುಳಿ ಗ್ಯಾರಂಟಿ!
ಇನ್ನ 'ಬ್ಯಾಚುಲರ್ ಪಾರ್ಟಿ' ಚಿತ್ರದ ಟೀಸರ್ ಬಿಡುಗಡೆ ಮಾಡಿರುವ ಪರಂವಃ ಸ್ಟುಡಿಯೋಸ್ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಹೊಸ ವರ್ಷಕ್ಕೆ ಅಂದ್ರೆ 2024 ಜ. 26ಕ್ಕೆ 'ಬ್ಯಾಚುಲರ್ ಪಾರ್ಟಿ' ಭರ್ಜರಿಯಾಗಿ ರಿಲೀಸ್ ಆಗಲಿದೆ. ಇದೀಗ ಟೀಸರ್ ಅನ್ನ ರಿಲೀಸ್ ಮಾಡಿರುವ ಪರಂವಃ ಸ್ಟುಡಿಯೋಸ್, ಎಲ್ರೂ ಇಲ್ ಕೇಳಿ, ಇಲ್ ಕೇಳಿ! ಒಂದ್ ನಿಮಿಷ.. ಸೈಲೆನ್ಸ್.. ಒಂದ್ ನಿಮಿಷ!! ಅಂತಾ ಬರೆದುಕೊಂಡಿದೆ. ಟೀಸರ್ ನೋಡಿದರೆ ಈ ಸಿನಿಮಾದಲ್ಲಿ ಕಾಮಿಡಿ ಕಚಗುಳಿ ಗ್ಯಾರಂಟಿ ಎನ್ನಬಹುದು.

ದೊಡ್ಡ ಮಟ್ಟದಲ್ಲಿ ರೆಡಿಯಾಗ್ತಿದೆ ಕಾಂತಾರ
ಈಗಾಗಲೇ ಕಾಂತಾರ ಸಿನಿಮಾ ಮೂಲಕ ಕಮಾಲ್ ಮಾಡಿರುವ ನಟ ಕಂ ನಿರ್ದೇಶಕರಾದ ರಿಷಬ್ ಶೆಟ್ಟ, ಭರ್ಜರಿಯಾಗಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾದ ಮುಂದುವರಿದ ಭಾಗ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ ಸಿನಿಮಾ ತಂಡ. ಈ ಮೂಲಕ ಕನ್ನಡಿಗರ ಸಿನಿಮಾಗಾಗಿ ಇಡೀ ದೇಶವೇ ಕಾಯುತ್ತಿದೆ.
ಕೆಜಿಎಫ್ & ಕಾಂತಾರ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರ್‌ನ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯ ಗತ್ತನ್ನೇ ಬದಲಿಸಿವೆ. ಅದ್ರಲ್ಲೂ ಮುಂದಿನ ಕೆಲವು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿ ಜಾಗತಿಕವಾಗಿ ಮಿಂಚುವುದು ಪಕ್ಕಾ, ಎನ್ನುವ ಮಾತು ಅಭಿಮಾನಿಗಳ ಬಾಯಿಂದ ಕೇಳಿಬರುತ್ತಿದೆ. ಇನ್ನು ಹಿಂದಿ ಭಾಷಿಕರಿರುವ ಜಾಗದಲ್ಲೂ ಕನ್ನಡಿಗರ ಸಿನಿಮಾಗಳು ಅಬ್ಬರಿಸುತ್ತಿದೆ.












Click it and Unblock the Notifications