Darshan Thoogudeepa: ದರ್ಶನ್‌ಗೆ ಬಿಗ್ ಶಾಕ್- ಗನ್ ಸೆರಂಡರ್ ಮಾಡಲು ನೋಟೀಸ್
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಗಿಯುವವರೆಗೂ ಗನ್ ಸೆರಂಡರ್ ಮಾಡಲು ನೋಟೀಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ಆರ್‌ಆರ್ ನಗರ ಪೊಲೀಸರು ದರ್ಶನ್‌ಗೆ ನೋಟೀಸ್ ಜಾರಿ ಮಾಡಿದ್ದಾರೆ.
ದರ್ಶನ್‌ಗೆ ಜಾಮೀನು ಮಂಜೂರು ಮಾಡಿದ್ದರೂ ಕೂಡ ನಾನಾ ಷರತ್ತುಗಳನ್ನು ವಿಧಿಸಲಾಗಿದೆ. ಗನ್ ಲೈಸೆನ್ಸ್ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ ದರ್ಶನ್ ಅವರಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ನಟ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತಾಗಿದೆ. ಹೀಗಾಗಿ ಪ್ರಕರಣ ಮುಗಿಯುವವರೆಗೂ ಡಿ-ಬಾಸ್ ಗನ್ ಬಳಸುವಂತಿಲ್ಲ.

ಸ್ಯಾಂಡಲ್‌ವುಡ್ ನಟ ದರ್ಶನ್ ಬಳಿ ಇರುವ ಗನ್ ಸೆರಂಡರ್ ಮಾಡುವಂತೆ ಆರ್.ಆರ್ ನಗರ ಪೊಲೀಸರು ದರ್ಶನ್‌ಗೆ ನೋಟೀಸ್ ಜಾರಿ ಮಾಡಿದ್ದರು. ಕೊಲೆ ಪ್ರಕರಣ ಇತ್ಯಾರ್ಥ ಆಗುವವರೆಗೂ ಗನ್ ತಮ್ಮ ಬಳಿ ಇಟ್ಟುಕೊಳ್ಳದಿರಲು ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಆದರೆ ಇದಕ್ಕೆ ದರ್ಶನ್ ತಮಗೆ ಗನ್ ಬೇಕು ಎನ್ನುವ ಮನವಿಯನ್ನು ಮಾಡಿದ್ದರು.
ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಗೆ ದರ್ಶನ್ ಪತ್ರ ಪರೆದು ತಮ್ಮ ಆತ್ಮ ರಕ್ಷಣೆಗೆ ಗನ್ ಬೇಕು ಎಂದು ಮನವಿ ಮಾಡಿದ್ದರು. ನಾನೊಬ್ಬ ಸೆಲೆಬ್ರಿಟಿ. ನಾನು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಜನ ಸೇರಿರುತ್ತಾರೆ. ಹೀಗಾಗಿ ನನ್ನ ಆತ್ಮ ರಕ್ಷಣೆಗೆ ನನಗೆ ಗನ್ ಬೇಕು ಎಂದು ದರ್ಶನ್ ಪತ್ರದಲ್ಲಿ ತಿಳಿಸಿದ್ದರು. ಆದರೆ ಇದು ಪ್ರಯೋಜವಾಗಿಲ್ಲ. ದರ್ಶನ್ ಒಬ್ಬ ಆರೋಪಿ ಆಗಿರುವುದರಿಂದ ಪ್ರಕರಣ ಮುಗಿಯುವವರೆಗೂ ಗನ್ ಸೆರಂಡರ್ ಮಾಡುವಂತೆ ತಿಳಿಸಿಲಾಗಿದೆ.
ಹೀಗಾಗಿ ದರ್ಶನ್ ಅವರ ಬಳಿ ಇರುವ ಎರಡು ಗನ್‌ಗಳನ್ನು ಸೆರಂಡರ್ ಮಾಡಲು ನಗರದ ಆರ್‌ಆರ್ ನಗರ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.












Click it and Unblock the Notifications