ರಾಘಣ್ಣಗೆ ನಟ ದರ್ಶನ್ ಹೀಗೆ ಹೇಳಿದ್ರಾ.? ಪೋಸ್ಟರ್ ಭಾರೀ ವೈರಲ್.!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ನಟ ದರ್ಶನ್ ಅವರ ಅಸಲಿ ಸತ್ಯಗಳು ಒಂದೊಂದೇ ಬಟಾ ಬಯಲಾಗುತ್ತಿವೆ. ಅಷ್ಟೇ ಅಲ್ಲದೆ ಕೆಲವೊಂದು ಒಳ್ಳೆ ವಿಚಾರಗಳ ಪೋಸ್ಟ್‌ಗಳು ಕೂಡ ಹೊರಗಡೆ ಬರುತ್ತಿವೆ. ಹಾಗೆಯೇ ಇದೀಗ ರಾವೇಂದ್ರ ರಾಜ್‌ಕುಮಾರ್ ಹಾಗೂ ದರ್ಶನ್ ನಡುವೆ ನಡೆದ ಸಂಭಾಷಣೆ ಎನ್ನಲಾದ ಪೋಸ್ಟರ್‌ವೊಂದು ವೈರಲ್ ಆಗುತ್ತಿದೆ.
ಅಪ್ಪು ನಟನೆ ಮಾಡಿರುವ ಅರಸು ಸಿನಿಮಾದಲ್ಲಿ ನಟ ದರ್ಶನ್ ಗೆಸ್ಟ್ ರೋಲ್ ಮಾಡಿದ್ದು, ಬಳಿಕ ಆ ಬಗ್ಗೆ ಕೇಳಿ ರಾಘವೇಂದ್ರ ರಾಜ್‌ಕುಮಾರ್ ಅವರು ಕಾಲ್ ಮಾಡಿದಾಗ ನಟ ದರ್ಶನ್ ಆಡಿದ್ದ ಮಾತುಗಳನ್ನು ಸ್ವತಃ ರಾಘಣ್ಣ ಅವರೇ ಒಮ್ಮೆ ಹೇಳಿಕೊಂಡಿದ್ದಾರೆ ಎನ್ನಲಾದ ಪೋಸ್ಟ್‌ರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇನ್ನು ಪೋಸ್ಟರ್‌ನಲ್ಲಿ "ರಾಘಣ್ಣಾ, ನೀವು ನನಗೆ ರಿಕ್ವೆಸ್ಟ್ ಮಾಡುವ ಅವಶ್ಯಕತೆಯಿಲ್ಲ. ನೀವು ಬಂದು ಮಾಡಿಕೊಡು ಅನ್ನಬೇಕು ಅಷ್ಟೇ. ನಮ್ಮ ಅಪ್ಪಾಜಿನೇ ನಿಮ್ಮ ಜೊತೆ ನಟನೆ ಮಾಡುವಾಗ ಕಥೆ ಕೇಳಿಲ್ಲ. ಇನ್ನು ನಾನು ಕೇಳುತ್ತೀನಾ?," ಎಂದಿದ್ದರಂತೆ. ಅಲ್ಲದೆ, ಸಂಭಾವನೆ ಕೊಟ್ಟರೆ ನಾನು ಮಾಡುವುದಿಲ್ಲ," ಎಂದಿದ್ದರಂತೆ. ಈ ಫೋಟೋ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾರೆ. ಮತ್ತೊಂದೆಡೆ ನಟ ಪುನೀತ್ ರಾಜ್‌ಕುಮಾರ್ ಅಗಲಿದ್ದಾರೆ. ಆದರೂ, ಪುನೀತ್ ರಾಜ್‌ಕುಮಾರ್ ಅವರು ಇಂದಿಗೂ ಎಂದೆಂದಿಗೂ ಅಭಿಮಾನಿಗಳು ಹಾಗೂ ಕರುನಾಡ ಜನರ ಮನಸ್ಸಲ್ಲಿ ಅವರ ಉತ್ತಮ ಕಾರ್ಯಗಳ ಮೂಲಕ ಸದಾ ನೆನಪಿನಲ್ಲಿರುತ್ತಾರೆ.
ಹೇಳಬೇಕೆಂದರೆ ಮಾಹಿತಿಯ ಪ್ರಕಾರ, ನಟ ದರ್ಶನ್ ಹಾಗೂ ಡಾ.ರಾಜ್‌ಕುಮಾರ್ ಕುಟುಂಬದ ನಡುವೆ ಸಂಬಂಧ ಮೊದಲು ತುಂಬಾ ಚೆನ್ನಾಗಿತ್ತು. ರಾಜ್‌ಕುಮಾರ್-ಪಾರ್ವತಮ್ಮ ಹಾಗೂ ತೂಗುದೀಪ ಶ್ರೀನಿವಾಸ್-ಮೀನಾ ಅವರೆಲ್ಲರೂ ತುಂಬಾ ಅನ್ಯೋನ್ಯವಾಗಿ ಇದ್ದರು. ಆದ್ದರಿಂದ ಮೈಸೂರಿನಲ್ಲಿ ನಟ ತೂಗುದೀಪ ಶ್ರೀನಿವಾಸ್ ಅವರು ತಾವು ಕಟ್ಟಿರುವ ಮನೆಗೆ ಮುಪಾ ಕೃಪಾ ಅಂದರೆ ಮತ್ತುರಾಜ್-ಪಾರ್ವತಮ್ಮ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ದರ್ಶನ್ ಅವರು ಕೂಡ ದೊಡ್ಮನೆ ಕುಟುಂಬದ ಜೊತೆ ಚೆನ್ನಾಗಿಯೇ ಇದ್ದರು. ಅದ್ಯಾಕೋ ಗೊತ್ತಿನ ಇತ್ತೀಚೆಗೆ ಅವರ ನಡುವೆ ಏನೋ ತುಸು ವೈಮನಸ್ಸು ಇದೆ ಎನ್ನಲಾಗುತ್ತಿದೆ. ಆದರೆ ಇದು ಸತ್ಯವೋ ಸೊಳ್ಳೋ ಎಂಬುದು ಗೊತ್ತಿಲ್ಲ.
ಆಗ ಪುನೀತ್ ರಾಜ್‌ಕುಮಾರ್ ನಟನೆಯ ಅರಸು ಸಿನಿಮಾದಲ್ಲಿ ನಟ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಂದು ಅವರೆಲ್ಲರೂ ಚೆನ್ನಾಗಿದ್ದರು ಇದರಿಂದಲೇ ಗೊತ್ತಾಗುತ್ತದೆ. ಆದರೆ ಇದೀಗ ಆ ಎರಡು ಕುಟುಂಬಗಳ ನಡುವೆ ಇರುವ ಸಂಬಂಧ ಸರಿಯಿಲ್ಲ ಎನ್ನುವುದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ. ಒಟ್ಟಿನಲ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಕಾರ್ಡ್ ಇವರ ಮಧ್ಯೆ ಸಂಬಂಧ ಸರಿಯಾಗಿಯೇ ಇದೆ ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ.











Click it and Unblock the Notifications