"ಸುದೀಪ್‌ನ ಹಾಕೊಂಡ್ರೆ ಆ ಸಿನಿಮಾ ಓಡಲ್ಲ, ದರ್ಶನ್ ಇದ್ರೆ ಓಡುತ್ತೆ"
ನಟ ದರ್ಶನ್ ತೂಗುದೀಪ ಅವರಿಗೆ ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ ಎಂಬ ಹೆಸರಿದೆ. ಆದರೆ ಈಗ ದರ್ಶನ್ ಕೊಲೆ ಕೇಸ್‌ನಲ್ಲಿ ಮತ್ತೆ ಜೈಲು ಸೇರಿರುವುದರಿಂದ ಮುಂದೆ ಚಿತ್ರರಂಗದ ಕಥೆ ಏನು? ಎಂದು ಹಲವು ನಿರ್ಮಾಪಕರು ಆತಂಕದಲ್ಲಿದ್ದಾರೆ. ನಿರ್ಮಾಪಕರ ಪಾಲಿಗೆ ದರ್ಶನ್ ಅವರ ಸಿನಿಮಾ ಅಂದ್ರೆ ಅದೃಷ್ಟಲಕ್ಷಿ ಇದ್ದಂತೆ ಎನ್ನುವ ಮಾತಿದೆ. ಒಂದು ವೇಳೆ ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಜೈಲಿನಲ್ಲೇ ಇದ್ದರೆ, ಮುಂದೆ ಯಾರು ಆ ಸ್ಥಾನ ತುಂಬುತ್ತಾರೆ ಎನ್ನುವುದು ಈಗ ನಿರ್ಮಾಪಕರ ದೊಡ್ಡ ಚಿಂತೆ. ಇನ್ನು ಸುದೀಪ್ ಇದ್ದಾರಲ್ಲ? ಎಂಬ ಪ್ರಶ್ನೆಗೆ 'ಸುದೀಪ್‌ನ ಹಾಕೊಂಡ್ರೆ ಆ ಸಿನಿಮಾ ಓಡಲ್ಲ, ದರ್ಶನ್ ಇದ್ದರೆ ಸಿನಿಮಾ ಓಡುತ್ತೆ' ಎಂದು ಖ್ಯಾತ ನಿರ್ಮಾಪಕರೊಬ್ಬರು ಹೇಳಿದ್ದಾರೆ.
ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರು ಸಮಕಾಲೀನ ಹೀರೋಗಳು. ಇಬ್ಬರ ಸಿನಿ ಜರ್ನಿ ಬೇರೆ ಬೇರೆ ಹಾದಿಯಲ್ಲಿ ಸಾಗಿದರೂ ತಮ್ಮದೇ ಆದ ಅಭಿಮಾನಿಗಳೊಂದಿಗೆ ಹವಾ ಇಟ್ಟಿದ್ದಾರೆ. ಒಂದು ಕಾಲದಲ್ಲಿ ಇಬ್ಬರೂ ಕುಚಿಕುಗಳಂತೆಯೂ ಇದ್ದ ಕಿಚ್ಚ-ದಚ್ಚು ಕಾರಣಾಂತರಗಳಿಂದ ದೂರವಾಗಿದ್ದರು. ಈಗ ದರ್ಶನ್ ಜೈಲಿನಲ್ಲೇ ಇದ್ದರೆ ಕನ್ನಡ ಚಿತ್ರರಂಗಕ್ಕೆ ಭಾರಿ ನಷ್ಟ ಎನ್ನುವ ಆತಂಕದ ನಡುವೆ ಕಿಚ್ಚ ಸುದೀಪ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಸ್ಯಾಂಡಲ್‌ವುಡ್‌ನ ನಿರ್ಮಾಪಕರೊಬ್ಬರು ಸುದೀಪ್ ಜೊತೆ ಸಿನಿಮಾ ಮಾಡಿದರೆ ಅದು ಚೆನ್ನಾಗಿ ಓಡಲ್ಲ ಎಂದು ಹೇಳಿದ್ದಾರಂತೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಲಾಯರ್ ಜಗದೀಶ್ ಅವರು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ್ದಾರೆ. ದರ್ಶನ್ ಅವರು ಜೈಲಿನಲ್ಲೇ ಉಳಿದರೆ ಕನ್ನಡ ಚಿತ್ರರಂಗದ ಮೇಲೆ ಏನೆಲ್ಲ ಪರಿಣಾಮ ಬೀರುತ್ತೆ? ಎನ್ನುವ ಪ್ರಶ್ನೆಗೆ ಜಗದೀಶ್ ಪ್ರತಿಕ್ರಿಯಿಸಿದ್ದಾರೆ. 'ನನಗೆ ಖ್ಯಾತ ನಿರ್ಮಾಪಕ ಸಿಕ್ಕಿದ್ರು. ಅವರಿಗೆ ನಾನು ಸುದೀಪ್ ಅವರನ್ನ ಹಾಕೊಂಡು ಸಿನಿಮಾ ಮಾಡಬಹುದಲ್ಲಾ? ಎಂದು ಕೇಳಿದೆ. ಆಗ ಅವರು ಸುದೀಪ್‌ನ ಹಾಕೊಂಡ್ರೆ ಎಲ್ಲಿ ಓಡುತ್ತೆ? ಆದ್ರೆ ದರ್ಶನ್‌ನ ಹಾಕೊಂಡು ಸಿನಿಮಾ ಮಾಡಿದ್ರೆ ಓಡುತ್ತೆ ಅಂದ್ರು' ಎಂದು ಜಗದೀಶ್ ಹೇಳಿದ್ದಾರೆ.
'ಇದು ನಿರ್ಮಾಪಕರ ಅಭಿಪ್ರಾಯ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವರು ಸುದೀಪ್ ಅವರ ಬಗ್ಗೆ ನೆಗೆಟಿವ್ ಆಗಿ ಹೇಳಿದ್ರು. ದರ್ಶನ್ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಇಂತಹ ದೊಡ್ಡ ಕೇಸ್‌ನಲ್ಲಿ ದರ್ಶನ್ ಅವಂತವರು ಸಿಕ್ಕಾಕೊಂಡಾಗ ನಿರ್ಮಾಪಕರ ಕಥೆ ಹೇಗಿರುತ್ತೆ ಗೊತ್ತಲ್ವಾ? ಎಂದಿದ್ದಾರೆ. ನಾವು ಯಾರ ಸಿನಿಮಾನೂ ಸೋಲಲಿ ಎಂದು ಹೇಳಲ್ಲ. ನಾವು ಇಲ್ಲಿ ಜೀವನ ಮಾಡಬೇಕು ಅಂದ್ರೆ ಡಾನ್, ರೌಡಿ, ಬಾಸ್‌ಗಳಂತೆ ಇರೋಕೆ ಆಗಲ್ಲ' ಎಂದು ಟಾಂಗ್ ನೀಡಿದ್ದಾರೆ.
'ದರ್ಶನ್ ಪಾಠ ಕಲಿತಿಲ್ಲ'
'ನನ್ನ ಪ್ರಕಾರ ದರ್ಶನ್ ಅವರು ಹಿಂದಿನ ಘಟನೆಗಳಿಂದ ಪಾಠ ಕಲಿತಿಲ್ಲ. ಅವರು ನಿಜವಾಗಿ ಕಲಿತಿದ್ದರೆ ಇಂತಹ ಅನಾಹುತಗಳು ಆಗುತ್ತಿರಲಿಲ್ಲ. ದರ್ಶನ್ ಅವರು ಅನಾಹುತಗಳ ಮೇಲೆ ಅನಾಹುತಗಳನ್ನ ಮಾಡಿಕೊಂಡಿದ್ದಾರೆ. ಬಡತನದಿಂದ ದೊಡ್ಡ ಸ್ಟಾರ್ ಆದ ಅವರಿಗೆ ಕರ್ನಾಟಕದ ಜನ ಸಾಕಷ್ಟು ಪ್ರೀತಿ, ಅಭಿಮಾನ ಕೊಟ್ಟಿದ್ರು. ಅದನ್ನು ಅವರು ಉಳಿಸಿಕೊಳ್ಳಬಹುದಿತ್ತು. ಯಾಕೆ ಅವರು ಹೀಗೆ ಮಾಡಿಕೊಂಡ್ರೋ ಗೊತ್ತಿಲ್ಲ' ಎಂದಿದ್ದಾರೆ ಜಗದೀಶ್.












Click it and Unblock the Notifications