Pavithra Gowda: ನಟ ದರ್ಶನ್‌ ಬರ್ತ್‌ ಡೇ ದಿನನೇ ಹೊಸ ಪೋಸ್ಟರ್ ಹಂಚಿಕೊಂಡ ಪವಿತ್ರಾ ಗೌಡ

Pavithra Gowda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನೂ ಇಂದು (ಫೆಬ್ರವರಿ 16) ನಟ ದರ್ಶನ್‌ ಬರ್ತ್‌ ಡೇ ಇದ್ದು, ರಾಜ್ಯಾದ್ಯಂತ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಹಾಗೆಯೇ ಪವಿತ್ರಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಪವಿತ್ರಾ ಗೌಡ ಅವರು ಬಿಡುಗಡೆಯಾಗಿದ್ದಾರೆ. ಅವರು ದೈವ ಭಕ್ತೆಯಾಗಿದ್ದು, ಇದೀಗ ದೇವಸ್ಥಾನಗಳ ಮೊರೆ ಹೋಗುವುದು ಹೆಚ್ಚಾಗಿಬಿಟ್ಟಿದೆ. ಅಲ್ಲದೆ, ಮತ್ತೆ ತಮ್ಮ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಓಪನ್ ಮಾಡಿದ ಖುಷಿಯಲ್ಲಿದ್ದಾರೆ. ಇನ್ನು ಇಂದು ದರ್ಶನ್‌ ಬರ್ತ್‌ ಡೇ ದಿನದಂದೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

Pavithra Gowda Shares a New Poster on Actor Darshan s Birthday

ಜೈಲಿನಿಂದ ಬಿಡುಗಡೆಯಾದ ಬಳಿಕ ಪವಿತ್ರಾ ಗೌಡ ಅವರಯ ಬದಲಾವಣೆಯತ್ತ ಮುಖ ಮಾಡಿದ್ದಾರೆ. ಇದೀಗ ಅವರು ಆಯ್ತು. ಅವರ ಕೆಲ್ಸ ಆಯ್ತು ಎನ್ನುವ ರೀತಿಯಲ್ಲಿ ತಮ್ಮ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಬೆಂಗಳೂರಿನ ಆರ್‌ ಆರ್​ ನಗರದಲ್ಲಿ ಅವರ ಮಾಲೀಕತ್ವದ ರೆಡ್ ಕಾರ್ಪೆಟ್​ ಸ್ಟುಡಿಯೋ ಇದ್ದಿ, ಫೆಬ್ರವರಿ 14ರಂದೇ ಈ ಶಾಪ್ ರೀಲಾಂಚ್ ಮಾಡಿದ್ದು, ಇದೇ ಸಂತಸದಲ್ಲಿದ್ದಾರೆ.

ಜೈಲಿನಿಂದ ಬಿಡುಗಡೆಯದ ಬಳಿಕ ಅವರು ತಮ್ಮ ಕೆಲಸದಲ್ಲಿ ಕಾರ್ಯನಿರತರಾಗುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲೀ ಸಖತ್‌ ಆಕ್ಟೀವ್‌ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಹೊಸ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಇಂದು ದರ್ಶನ್ ಹುಟ್ಟು ಹಬ್ಬದ ದಿನದಂದೇ ಲವ್ ಯೂ ಅಂತ ಪೋಸ್ಟರ್‌ನಲ್ಲಿ ಬಡೆದುಕೊಂಡಿದ್ದಾರೆ. ಹೀಗೆ ಬರೆದುಕೊಂಡಿರುವುದು ಬೇರೆ ಯಾರಿಗೂ ಅಲ್ಲ, ಅವರ ಅಮ್ಮಗೆ. ಐ ಲವ್‌ ಯು ಅಮ್ಮ ಎಂದು ಬರೆದುಕೊಂಡಿದ್ದಾರೆ.

ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲು ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಬಿಡುಗಡೆಯಾದ ಮೇಲೆ ಅವರಿಬ್ಬರು ಹೊರಗಡೆ ಭೇಟಿ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ, ಇಂದಿನ ಪವಿತ್ರಾ ಗೌಡ ಪೋಸ್ಟರ್ ಮಾತ್ರ ಭಾರೀ ಸಖತ್‌ ಸದ್ದು ಮಾಡುತ್ತಿದೆ. ಪವಿತ್ರಾ ಗೌಡ ಅವರು ಇಂದು ಅವರ ಅಮ್ಮನ ಜೊತೆಗಿನ ರೀಲ್ಸ್ ಶೇರ್ ಮಾಡಿದ್ದಾರೆ. ಜೀವ ಹೂವಾಗಿದೆ ಹಾಡಿಗೆ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟರ್‌ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕೆ ನಟ ದರ್ಶನ್‌ & ಗ್ಯಾಂಗ್‌ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಹಲ್ಲೆಗೈದು ಭೀಕರವಾಗಿ ಹತ್ಯೆ ಮಾಡಿತ್ತು ಎನ್ನುವುದು ಪೊಲೀಸ್‌ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಇನ್ನೂ ಇತ್ತೀಚೆಗಷ್ಟೇ ನಟ ದರ್ಶನ್‌ ಬೆನ್ನು ನೋವು ಹಿನ್ನೆಲೆ ಜೈಲಿನಿಂದ ಹೊರಗಡೆ ಬಂದಿದ್ದರು. ಅಲ್ಲದೆ, ಜಾಮೀನಿಗೆ ಅರ್ಜಿಯನ್ನು ಸಹ ಸಲ್ಲಿಸಿದ್ದರು. ಬಳಿಕ ಜಾಮೀನು ದೊರೆತಿದ್ದು, ಇದೀಗ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎನ್ನುವ ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+