Pavithra Gowda: ಜೈಲಿನಿಂದ ಹೊರಬಂದ ಪವಿತ್ರಾ- ಮುನೇಶ್ವರನಿಗೆ ತಾಯಿ ಪೂಜೆ- ಆರತಿಗಾಗಿ ಮಗಳ ಸಿದ್ಧತೆ

ಚಿತ್ರದುರ್ಗಾ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎ1 ಆರೋಪಿಯಾದ ಪವಿತ್ರಾ ಗೌಡ ಇಂದು ಜೈಲಿನಿಂದ ಹೊರಬಂದಿದ್ದಾರೆ. ಇದರಿಂದಾಗಿ ಪವಿತ್ರಾ ತಾಯಿ ಹಾಗೂ ಮಗಳು ತುಂಬಾನೇ ಖುಷಿಯಾಗಿದ್ದಾರೆ. ಅಲ್ಲದೆ ಮನೆಯಲ್ಲಿರುವ ಮಗಳು ಪವಿತ್ರಾರನ್ನು ಮನೆಗೆ ವೆಲ್‌ಕಮ್ ಮಾಡಲು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ತೆರಳುವ ಮೊದಲು ಪವಿತ್ರಾ ದೇವರ ಮೊರೆ ಹೋಗಿರುವುದು ಕಂಡು ಬಂದಿದೆ.

ಹೌದು... ಸುಮಾರು ಆರು ತಿಂಗಳ ಕಾಲ ಜೈಲಿನಲ್ಲಿದ್ದ ಪವಿತ್ರಾ ಅವರಿಗೆ ಶುಕ್ರವಾರ ಜಾಮೀನು ಸಿಕ್ಕಿತ್ತು. ಆದರೆ ವಾರಾಂತ್ಯವಾದ್ದರಿಂದ ಅವರು ಬಿಡುಗಡೆಯಾಗಿರಲಿಲ್ಲ. ಆದರೆ ಇಂದು ಅವರು ಜೈಲಿನಿಂದ ಹೊರಬಂದಿದ್ದಾರೆ. ಮಗಳು ಜೈಲಿನಿಂದ ಹೊರಬರುತ್ತಿದ್ದಂತೆ ಖುಷಿಯಾದ ತಾಯಿ ಭಾಗ್ಯ ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಇರುವ ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಆರತಿ ಬೆಳಗಿಸಿ, ಹೂವಿನ ಹಾರ ಹಾಕಿ, ಹಣ್ಣುಗಳನ್ನು ಇಟ್ಟು, ಪೂಜೆ ಮಾಡಿ ಕುಂಕುಮ ತಂದು ಪವಿತ್ರಾಗೆ ಹಚ್ಚಿದ್ದಾರೆ.

pavithra gowda released from jail and puja for Muneshwar

ಆರತಿಗಾಗಿ ಮಗಳ ಸಿದ್ಧತೆ

ಇನ್ನೂ ಪವಿತ್ರಾ ಜೈಲಿನಿಂದ ಹೊರಬರುತ್ತಿದ್ದಂತೆ ಅವರ ಮಗಳು ಕೂಡ ಸಂತೋಷವಾಗಿದ್ದು ಮನೆಯಲ್ಲಿ ಆರತಿ ಮಾಡಲು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. ತಾಯಿಯನ್ನು ನೋಡಲು ಪವಿತ್ರಾ ಮಗಳೂ ಕೂಡ ಕಾತುರರಾಗಿದ್ದಾರೆನ್ನುವ ವಿಚಾರ ಗೊತ್ತಾಗಿದೆ. ಸದ್ಯ ಪವಿತ್ರಾ ಅವರು ಆರ್‌. ಆರ್‌ ನಗರಕ್ಕೆ ಹೋಗುತ್ತಿಲ್ಲ ಬದಲಾಗಿ ಕನಕಪುರ ರಸ್ತೆಯ ತಲಘಟ್ಟಪುರದಲ್ಲಿರುವ ತಾಯಿ ಮನೆಗೆ ಹೋಗುತ್ತಿದ್ದಾರೆಂದು ತಿಳಿದು ಬಂದಿದೆ. ಇದೇ ಮನೆಯಲ್ಲಿ ಪವಿತ್ರಾ ಅವರ ಮಗಳು ಕೂಡ ಇದ್ದಾಳೆ ಎನ್ನಲಾಗುತ್ತಿದೆ.

ಪವಿತ್ರಾ ಪೂಜೆ

ಇನ್ನೂ ಜೈಲಿನಿಂದ ಹೊರಬರುತ್ತಿದ್ದಂತೆ ಪವಿತ್ರಾ ನೇರವಾಗಿ ತಲಘಟ್ಟಪುರದಲ್ಲಿರುವ ಮನೆ ದೇವರು ವಜ್ರಮುನೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ. ಪೂಜೆ ಮಾಡುವ ಮೊದಲು ಪವಿತ್ರಾ ಅವರಿಗೆ ತೀರ್ಥ ಸ್ನಾನವನ್ನು ಮಾಡಿಸಲಾಯಿತು. ಬಳಿಕ ಆರತಿ ಮಾಡಿದ ಪವಿತ್ರಾ ದೇವಸ್ಥಾನದ ಸುತ್ತ ಏಳು ಸುತ್ತು ಹಾಕಿದರು. ಶಕ್ತಿ ದೇವರಾದ ಮುನೇಶ್ವರನಿಗೆ ಪೂಜೆ ಮಾಡಿ ಪಾಪ ವಿಮೋಚನೆಗೆ ಬೇಡಿಕೊಂಡರು. ಪವಿತ್ರಾ ಬಿಡುಗಡೆಗಾಗಿ ತಾಯಿ ಭಾಗ್ಯ ಹರಕೆ ಹೊತ್ತಿದ್ದರು ಎಂದು ತಿಳಿದು ಬಂದಿದೆ. ಹರಕೆ ತೀರಿಸಿದ ಬಳಿಕ ತಾಯಿ ಭಾಗ್ಯ ಪವಿತ್ರಾ ಅವರನ್ನು ಕರೆದುಕೊಂಡು ಮನೆಕಡೆಗೆ ತೆರಳಿದ್ದಾರೆ.

ಬದಲಾಗದ ಪವಿತ್ರಾ

ಜೈಲಿನಿಂದ ಹೊರಬಂದ ಪವಿತ್ರಾ ಗೌಡ ಅವರ ಮುಖದಲ್ಲಿ ಒಂದು ಚೂರು ಕೂಡ ಪಶ್ಚಾತ್ತಾಪ ಕಂಡು ಬಂದಿಲ್ಲ. ಜೈಲಿಗೆ ಹೋಗುವಾಗ ಹೇಗೆ ಇದ್ದರೋ ಹಾಗೇ ಹೊರಬಂದಿದ್ದಾರೆ ಪವಿತ್ರಾ. ಆಕೆಯ ಡ್ರೆಸ್ ಸೆನ್ಸ್, ಮೇಕಪ್, ಹೇರ್‌ಸ್ಟೈಲ್ ಯಾವುದೂ ಕೂಡ ಚೇಂಜ್ ಆಗಿಲ್ಲ. ನಗು ನಗುತ್ತಲೇ ಪವಿತ್ರಾ ಜೈಲಿನಿಂದ ಹೊರಬಂದಿದ್ದಾರೆ.

ಇನ್ನೂ ಆರ್‌ಆರ್‌ ನಗರದ ನಿವಾಸದ ಬಾಗಿಲಿಗೆ ಹೂವಿನ ತೋರಣ ಕಟ್ಟಿ ಮನೆಯ ಮುಂದೆ ರಂಗೋಲಿ ಬಿಟ್ಟಿರುವುದು ಕಂಡು ಬಂತು. ಇದೇ ಮನೆಗೆ ಪವಿತ್ರಾ ತೆರಳುತ್ತಾರೆ ಎನ್ನಲಾಗಿತ್ತು. ಆದರೆ ಪವಿತ್ರಾ ಈ ಮನೆಗೆ ಹೋಗದೆ ನೇರವಾಗಿ ತನ್ನ ತಾಯಿಯ ಮನೆಗೆ ತೆರಳಿದ್ದಾರೆ. ಒಟ್ಟಿನಲ್ಲಿ ಪವಿತ್ರಾ ಗೌಡ ಜೈಲಿನಿಂದ ಹೊರಬರುವಾಗ ಮೇಲ್ನೋಟಕ್ಕೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದರೆ ಅವರ ಜೀವನ ಬದಲಾಗುತ್ತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+