Pavithra Gowda: ನಾನು ಮಾತಾಡ್ಬೇಕು ಅಂದ್ರೆ 3 ಸಾವಿರ ಕೊಡಿ: ಪವಿತ್ರಾ ಗೌಡ ಮಾಜಿ ಪತಿಯ ಡಿಮ್ಯಾಂಡ್
ಬೆಂಗಳೂರು, ಡಿಸೆಂಬರ್ 19: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿ ಆರು ತಿಂಗಳು ಕಳೆದಿರುವ ಪವಿತ್ರ ಗೌಡಗೆ ಹೈಕೋರ್ಟ್ ಜಾಮೀನು ನೀಡಿದೆ. ಅತ್ತ ಪವಿತ್ರಾ ಗೌಡ ಬಿಡುಗಡೆಯಾಗುತ್ತಿದ್ದಂತೆ ಇತ್ತ ಆಕೆಯ ಮಾಜಿ ಪತಿ ಕೂಡ ಪ್ರತ್ಯಕ್ಷ ಆಗಿದ್ದು ಎಲ್ಲೆಡೆ ಅವರ ಸಂದರ್ಶನವೇ ವೈರಲ್ ಆಗುತ್ತಿದೆ.
ಪವಿತ್ರ ಗೌಡ ಬಂಧನವಾಗುತ್ತಿದೆ ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿದ್ದ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಇದೀಗ ಪವಿತ್ರ ಗೌಡ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅವರ ಹಳೆಯ ಸಂಬಂಧದ ಬಗ್ಗೆ ಮಾತನಾಡುತ್ತಾ ಎಲ್ಲೆಡೆ ಸಂದರ್ಶನ ನೀಡುತ್ತಿದ್ದಾರೆ. ಆದರೆ ಈ ಸಂದರ್ಶನಗಳನ್ನು ನೀಡಲು ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ವಾಹಿನಿಗಳ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಪವಿತ್ರಾ ಗೌಡ ಬಗ್ಗೆ ಮಾತನಾಡಲು ಸಂಜಯ್ ಸಿಂಗ್ ಮಾಧ್ಯಮಗಳ ಬಳಿ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಸಂಜಯ್ ಸಿಂಗ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
'ನಾನು ಹಣ ಚಾರ್ಜ್ ಮಾಡುತ್ತೇನೆ. ಹಣ ಇಲ್ಲದೇ ನಾನು ಯಾವ ಸಂದರ್ಶನ ಕೂಡ ಕೊಡಲು ಆಗುವುದಿಲ್ಲ. ನಾನು ಈವರೆಗೂ ಎಷ್ಟು ಸಂದರ್ಶನ ಕೊಟ್ಟಿದ್ದೇನೋ, ಅಷ್ಟಕ್ಕೂ ನಾನು ಹಣ ಪಡೆದುಕೊಂಡಿದ್ದೇನೆ. ನಾನೇನು ಲಕ್ಷಾಂತರ ರೂಪಾಯಿ ಹಣ ಕೇಳುವುದಿಲ್ಲ. ಅರ್ಧ ಗಂಟೆಯ ಸಂದರ್ಶನಕ್ಕೆ ಮೂರು ಸಾವಿರ ಕೊಡಿ ಸಾಕು'.

'ಈ ಹಿಂದೆ ನಾನು ಫ್ರೀಯಾಗಿ ಮಾಡಿ ನನಗೆ ತುಂಬಾ ಕಷ್ಟ ಬಂದಿತ್ತು. ನನ್ನ ಕಷ್ಟವನ್ನು ಯಾರೂ ನೋಡಿಲ್ಲ. ನಾನೇಷ್ಟು ಕಷ್ಟದಲ್ಲಿ ಇದ್ದೇನೆ ಎನ್ನುವುದನ್ನು ಯಾರೂ ನೋಡಿಲ್ಲ. ಹೀಗಾಗಿ ಈಗ ಹಣ ಕೊಟ್ಟರೆ ಸಂದರ್ಶನ ಕೊಡುತ್ತೇನೆ ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಡಿ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.
ಪವಿತ್ರಾ ಗೌಡ ಜೈಲಿಗೆ ಹೋದ ಸಂದರ್ಭದಲ್ಲಿ ಆಡಿದಂತೆ ಮಾತನಾಡುತ್ತೇನೆ. ನೀವು ಏನು ಕೇಳಬೇಕೋ ಕೇಳಿ. ನನ್ನ ಮಗಳ ಬಗ್ಗೆ ಬಿಟ್ಟು ಬೇರೆ ಮಾತನಾಡುತ್ತೇನೆ. ಆದರೆ ಹಣ ಕೊಟ್ಟರೆ ಮಾತ್ರ ಸಂದರ್ಶನ ಕೊಡುವುದು. ನೀವು ಹಣ ಕೊಟ್ಟರೆ ಬರುತ್ತೇನೆ. ಇಲ್ಲವಾದರೆ ಬರುವುದಿಲ್ಲ. ನನಗೇನು ಸಮಸ್ಯೆ ಇಲ್ಲ ಎಂದು ಪವಿತ್ರ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications