Pavithra Gowda: ನಟ ದರ್ಶನ್‌ ಬಳ್ಳಾರಿ ಜೈಲು ಸೇರಿದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ ಜೀವನ ಹೇಗಿದೆ?

Pavithra Gowda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಪಟಾಲಂ ಗ್ಯಾಗ್‌ ಜೈಲು ಸೇರಿದ್ದಾರೆ. ಇನ್ನು ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿರುವ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಳ ಜೀವನ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಪ್ರಕರಣದ ಎ2 ಆರೋಪಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲೇ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಸೇರಿ ರೆಸಾರ್ಟ್‌ ರೀತಿ ರೌಂಡ್‌ ಟೇಬಲ್‌ ಪಾರ್ಟಿ ಮಾಡಿದ್ದ. ಈ ವೇಳೆ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌, ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದುಕೊಂಡು ಹರಟೆ ಹೊಡೆಯುತ್ತಿರುವ ಫೋಟೋ ಭಾರೀ ವೈರಲ್‌ ಆಗಿತ್ತು.

Pavithra Gowda Alone without Actor darshan in Parappana Agrahara Jail

ಇದರ ಬೆನ್ನಲ್ಲೇ ದರ್ಶನ್‌ ವಿಐಪಿ ಸೆಲ್‌ನಿಂದ ವಿಡಿಯೋ ಕಾಲ್‌ ಮಾಡಿ ರೌಡಿಶೀಟರ್‌ಗಳ ಜೊತೆ ಮಾತನಾಡಿರುವ ವಿಡಿಯೋ ಕೂಡ ವೈರಲ್‌ ಆಗಿದ್ದು, ಇದಕ್ಕೆ ವ್ಯಾಪಕ ಅಕ್ರೋಶಗಳು ವ್ಯಕ್ತವಾಗಿದ್ದವು. ಬಳಿಕ ಎಚ್ಚೆತ್ತ ಸರ್ಕಾರ ಪರಪ್ಪನ ಅಗ್ರಹಾರ ಜೈಲಿನ 9 ಜೈಲಾಧಿಕರಿಗಳನ್ನು ಅಮಾನತು ಮಾಡಿತ್ತು. ಅಲ್ಲದೆ, ಕೋರ್ಟ್‌ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಪೊಲೀಸರು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶಿಫ್ಟ್‌ ಮಾಡಿದರು. ಅಲ್ಲಿಂದ ಪವಿತ್ರಾಗೆ ಕಾಡಲು ಶುರುವಾಯ್ತು ನೋಡಿ ಒಂಟಿತನ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವಾಗ ಕೋರ್ಟ್‌, ಆಸ್ಪತ್ರೆಗೆ ಹೋಗುವುವಾಗ ಪರಸ್ಪರ ಇಬ್ಬರ ಮುಖ ದರ್ಶನವಾಗುತ್ತಿತ್ತು. ಆದರೆ ಇದೀಗ ಜೈಲುಗಳು ಬೇರೆ ಆಗಿದ್ದು, ನಾನೊಂದು ತೀರ.. ನೀನೊಂದು ತೀರ ಎನ್ನುವಂತಾಗಿದೆ ದರ್ಶನ್‌ ಹಾಗೂ ಪವಿತ್ರಾ ಗೌಡಳ ಜೀವನ. ಇನ್ನು ಪವಿತ್ರಾ ಗೌಡಗೆ ಇದೀಗ ಒಂಟಿತನ ಕಾಡುತ್ತಿದೆಯಂತೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲು ಸೇರಿ 120 ದಿನಗಳು ಆಗಿದ್ದು, ಸೆಂಟ್ರಲ್​ ಜೈಲಿನಲ್ಲಿ ಅವರಿಗೆ ಒಂಟಿತನ ಕಾಡುತ್ತಿದೆ. ಇನ್ನು ಪವಿತ್ರಾ ಗೌಡಗೆ ಜೈಲಿನ ಕಠಿಣ ನಿಯಮಗಳು ನುಂಗಲಾರದ ತುತ್ತಾಗಿವೆ. ಮತ್ತೊಂದೆಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಲ್ಲಾ ಆರೋಪಿಗಳನ್ನು ರಾಜ್ಯದ ಬೇರೆ-ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ನಟ ದರ್ಶನ್‌ನನ್ನು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಘಟನೆ ನಡೆದ ಮೇಲೆ ದರ್ಶನ್ ಅಂತರ ಕಾಯ್ದುಕೊಂಡಿರುವ ಬಗ್ಗೆ ಪವಿತ್ರಾ ಗೌಡಗೆ ಒಂಟಿತನದ ಬೇಸರ ಕಾಡುತ್ತಿದೆ ಎಂದು ಹೇಳಲಾಗಿದೆ. ಮೊದಲು ಆಗಾಗ ಕೋರ್ಟ್ ವಿಸಿ ಇದ್ದಾಗ ದರ್ಶನ್, ಪವಿತ್ರಾಗೌಡ ಮುಖಾಮುಖಿಯಾಗುತ್ತಿದ್ದರು.

ಆದರೆ ಬಳ್ಳಾರಿ ಜೈಲಿಗೆ ಹೋದ ಮೇಲೆ ದರ್ಶನ್‌ ನೋಡಲು ಸಾಧ್ಯವಾಗದಂತಾಗಿದೆ. ದರ್ಶನ್ ರಾಜಾತಿಥ್ಯ ಕೇಸ್‌ ಆದ ಬಳಿಕ ತುಂಬಾ ಕಠಿಣ ನಿಯಮಗಳು ಜೈಲಿನಲ್ಲಿ ಪಾಲನೆ ಮಾಡಲಾಗುತ್ತಿದೆ. ಆದ್ದರಿಂದ ಪವಿತ್ರಾ ಗೌಡ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎನ್ನಲಾಗಿದೆ. ಇನ್ನು ಅಕ್ಟೋಬರ್ 14ರಂದು ಜಾಮೀನು ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಅಂದು ಏನಾಗುತ್ತೋ ಎನ್ನುವ ಟೆನ್ಷನ್​ನಲ್ಲಿ ಪವಿತ್ರಾ ಇದ್ದಾರೆ. ಇತ್ತೀಚೆಗೆ ಪವಿತ್ರಾಗೌಡ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+