Darshan Thoogudeepa: ದರ್ಶನ್ ತೂಗುದೀಪ್ ರೀತಿಯೇ ದಲಿತರು & ಮಹಿಳೆಯರ ಬಗ್ಗೆ ಮುನಿರತ್ನ ನಾಯ್ಡು ಕೆಟ್ಟ ಮಾತು?
ದರ್ಶನ್ ತೂಗುದೀಪ್ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಂಬಿ ಎಣಿಸುವ ವೇಳೆ, ಮುನಿರತ್ನ ನಾಯ್ಡು ಕೆಟ್ಟ ಕೆಟ್ಟದಾಗಿ ದಲಿತರು & ಮಹಿಳೆಯರ ಬಗ್ಗೆ ಮಾತನಾಡಿದ್ದಾರೆಂದು ಆರೋಪ ಮಾಡಲಾಗಿರುವ ಆಡಿಯೋ ಕೂಡ ವೈರಲ್ ಆಗುತ್ತಿದೆ. ಅದರಲ್ಲೂ ದಲಿತರನ್ನು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ತುಂಬಾ ಕೆಟ್ಟ ಪದಗಳಿಂದ ನಿಂದಿಸಿ, ಒಕ್ಕಲಿಗರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕೂಡ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಆಡಿಯೋಗಳ ಜೊತೆ ಮುನಿರತ್ನ ನಾಯ್ಡು ಹೋಲಿಕೆ ಮಾಡುತ್ತಿದ್ದಾರೆ ನೆಟ್ಟಿಗರು!
ಮುನಿರತ್ನ ನಾಯ್ಡು ಲಂಚದ ಬೇಡಿಕೆ ಇಟ್ಟು, ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು. ಮುನಿರತ್ನ ನಾಯ್ಡು ಹೀಗೆ ಬೆದರಿಕೆ ಹಾಕುವ ಸಮಯದಲ್ಲಿ, ಕರ್ನಾಟಕದ ದಲಿತರು & ಒಕ್ಕಲಿಗರು, ಮಹಿಳೆಯರ ಬಗ್ಗೆ ನಿಂದನೆ ಮಾಡಿರುವ ಆರೋಪ ಇರುವ ಆಡಿಯೋ ಕೂಡ ಬಯಲು ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಇದೀಗ ರೊಚ್ಚಿಗೆದ್ದಿದ್ದು, ಮುನಿರತ್ನ ನಾಯ್ಡು ವಿರುದ್ಧ ಕ್ರಮಕ್ಕೆ ಆಗ್ರಹ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದಲಿತರ ಬಗ್ಗೆ ಕೂಡ ಬಾಯಿಗೆ ಬಂದಂತೆ ಹೇಳಿಕೆ ನಿಡಿರುವ ಆರೋಪ ಹೊತ್ತಿರುವ, ಆರ್‌ಆರ್ ನಗರ ಶಾಸಕ ಮುನಿರತ್ನ ನಾಯ್ಡು ವಿರುದ್ಧ ದಲಿತ ಸಂಘಟನೆಗಳು...

ದಲಿತ ಸಂಘಟನೆಗಳಿಂದ ಹೋರಾಟ?
ಮುನಿರತ್ನ ನಾಯ್ಡು ವಿರುದ್ಧ ಹಲವು ತಿಂಗಳಿಂದ ಸಾಲು ಸಾಲು ಆರೋಪ ಕೇಳಿಬಂದಿವೆ. ಅದರಲ್ಲೂ ಮುನಿರತ್ನ ನಾಯ್ಡು ಪದೇ ಪದೇ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು BBMP ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಕಸದ ಟೆಂಡರ್ ಪಡೆದು BBMPಗೆ ಗುತ್ತಿಗೆ ಸೇವೆ ನೀಡುತ್ತಿದ್ದ ಮಾಗಡಿ ಮೂಲದ & ಹಲವು ವರ್ಷಗಳಿಂದ ಆರ್‌ಆರ್ ನಗರದಲ್ಲಿ ನೆಲೆಸಿರುವ ಚಲುವರಾಜುಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ ಶಾಸಕ ಮುನಿರತ್ನ ನಾಯ್ಡು & ಜೊತೆಗಾರರು ಚಲುವರಾಜುಗೆ ಸುಮಾರು 30 ಲಕ್ಷ ರೂಪಾಯಿಗೂ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ ಎಂಬ ಆರೋಪ ಮಾಡಲಾಗಿದ್ದು, ಇದರ ಜೊತೆ ಚಲುವರಾಜು ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೂಡ ಕೆಟ್ಟ ಕೆಟ್ಟ ಪದಗಳನ್ನು ಬಳಕೆ ಮಾಡಿರುವ ಆರೋಪ ಕೇಳಿಬಂದಿದ್ದು. ಹೀಗಾಗಿ ಆರ್‌ಆರ್ ನಗರ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಆಕ್ರೋಶ ಮೊಳಗುತ್ತಿದೆ. ಮತ್ತೊಂದು ಕಡೆ ದಲಿತ ಸಂಘಟನೆಗಳು ಕೂಡಲೇ ಬೃಹತ್ ಹೋರಾಟ ಮಾಡಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ ನೆಟ್ಟಿಗರು.
ಚಲುವರಾಜು ಹೆಂಡತಿ ಬಗ್ಗೆ ಮುನಿರತ್ನ..?
ಮುನಿರತ್ನ ನಾಯ್ಡು ವಿರುದ್ಧ ಇದೀಗ, ಬಿಬಿಎಂಪಿ ಕಸದ ಗುತ್ತಿಗೆ ಪಡೆದ ಮಾಗಡಿ ಮೂಲದ ಚಲುವರಾಜು ಅವರಿಗೆ ಬಾಯಿಗೆ ಬಂದಂತೆ ಮಾತನಾಡಿರುವ ಆರೋಪ ಕೇಳಿಬಂದಿದೆ. ಈ ನಡುವೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರನ್ನ ನೀನು ಗೌಡನಾ? ನೀನು ಗೌಡನಾ? ಎಂದು ಪ್ರಶ್ನೆ ಮಾಡುವ ಮುನಿರತ್ನ ನಾಯ್ಡು, ಚಲುವರಾಜು ಅವರ ತಾಯಿ & ಹೆಂಡತಿಯ ಬಗ್ಗೆ ಮಂಚದ ಮಾತುಗಳನ್ನ ಕೂಡ ಆಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಪಕ್ಕೆ ಸಂಬಂಧಿಸಿದಂತೆ, ಮುನಿರತ್ನ ನಾಯ್ಡು ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆರೋಪ ಮಾಡಿರುವ ಆಡಿಯೋ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆಡಿಯೋ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದೆ. ಅಲ್ಲದೆ, ದಲಿತ ಸಂಘಟನೆಗಳು ಈ ವಿಚಾರದಲ್ಲಿ ದೊಡ್ಡ ಹೋರಾಟ ಆರಂಭಿಸಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications