Mokshitha Pai: ಗೌತಮಿ ಮಂಜು ಜಗಳ ನೋಡಿ ಮಜಾ ತಗೊಂಡ್ರಾ ಮೋಕ್ಷಿತಾ ಪೈ?
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ತುಂಬಾ ಆತ್ಮೀಯ ಸ್ನೇಹಿತರು ಎನಿಸಿಕೊಂಡಿದ್ದ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ದೂರವಾಗಿದ್ದಾರೆ. ಒಬ್ಬರನೊಬ್ಬರು ನೋಡಿದರೆ ಮುಖ ತಿರುಗಿಸಿಕೊಳ್ಳುವಷ್ಟು ಕೋಪ ಮಾಡಿಕೊಂಡಿದ್ದಾರೆ. ನಾಮಿನೇಟ್ ಮಾಡುವ ವಿಚಾರದಲ್ಲಿ ಪರಸ್ಪರ ಬಿಟ್ಟುಕೊಡದೇ ಇದ್ದವರು ಈಗ ಪರಸ್ಪರ ನಾಮಿನೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ತಂಡದ ನಾಯಕಿ ಮೋಕ್ಷಿತಾ ಈಗ ಮಂಜು ಹಾಗೂ ಗೌತಮಿ ಬೇರೆಯಾಗಿರುವುದನ್ನು ಕಂಡು ಖುಷಿ ಪಡುತ್ತಿರುವಂತೆ ಕಾಣಿಸುತ್ತಿದೆ.
ಹೌದು... ಬಿಗ್ ಬಾಸ್ ಮನೆಯಲ್ಲಿ ಗೌತಮಿ ಕ್ಯಾಪ್ಟನ್ ಆದ ಬಳಿಕ ಮೋಕ್ಷಿತಾಗೆ ಢವ ಢವ ಶುರುವಾಗಿದೆ. ಯಾಕೆಂದರೆ ಮಂಜು ಹಾಗೂ ಗೌತಮಿ ಸೇರಿಕೊಂಡು ತನ್ನನ್ನು ಟಾರ್ಗೇಟ್ ಮಾಡಬಹುದು ಎನ್ನುವ ಅನುಮಾನದ ಮೇಲೆ ಅವರಿಬ್ಬರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಮೋಕ್ಷಿತಾ ಎನ್ನುವುದು ಬಿಗ್‌ಬಾಸ್ ನೋಡುಗರ ಅಭಿಪ್ರಾಯ.

'ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಗೌತಮಿ ಧ್ವನಿಗಿಂತ ಮಂಜು ಅವರ ಧ್ವನಿಯೇ ಹೆಚ್ಚಾಗಿದೆ ಎನ್ನುವ ಮಾತನ್ನು ಮೋಕ್ಷಿತಾ ಹೇಳಿದರು, ಇದು ನನಗೂ ಕೂಡ ನಿಜ ಎನಿಸುತ್ತಿದೆ' ಎಂದು ಗೌತಮಿ ಮಂಜು ಬಳಿ ಹೇಳಿದ್ದಾರೆ. ಇದೊಂದು ವಿಚಾರಕ್ಕೆ ಗೌತಮಿ ಮಂಜು ಅವರೊಂದಿಗಿನ ಸ್ನೇಹಕ್ಕೆ ಬ್ರೇಕ್ ಹಾಕಿದ್ದಾರೆ. ಕ್ಯಾಪ್ಟನ್ ಆದ ಬಳಿಕ ಗೌತಮಿ ಚೇಂಜ್ ಆದರಾ ಅಥವಾ ಗೌತಮಿ ಚೇಂಜ್ ಆಗುವಂತೆ ಮೋಕ್ಷಿತಾ ಮಾತನಾಡಿದ್ರಾ? ಇದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇಂದು ಬಿಡುಗಡೆಯಾದ ವೀಡಿಯೋದಲ್ಲಿ ಗೌತಮಿ ಹಾಗೂ ಮಂಜು ನಡುವೆ ಮನಸ್ತಾಪ ಉಂಟಾಗಿ ಗೌತಮಿ ಅವರು ಮಂಜು ಅವರೊಂದಿಗಿನ ಸ್ನೇಹಕ್ಕೆ ಬ್ರೇಕ್ ಹಾಕಿದ್ದಾರೆ. ಇದನ್ನು ಕಂಡು ಮೋಕ್ಷಿತಾ ಮಜಾ ತೆಗೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಮೋಕ್ಷಿತಾಗೆ ಮಂಜು ಹಾಗೂ ಗೌತಮಿ ಒಂದಾಗಿರುವುದು ಇಷ್ಟವಿರಲಿಲ್ಲ. ಯಾಕೆಂದರೆ ಮಹಾರಾಜಾ ಟಾಸ್ಕ್‌ನಲ್ಲಿ ಮಂಜು ಗೌತಮಿ ಫೇವರ್ ಆಗಿ ಆಟ ಆಡಿದ್ದರು. ಈ ಆಟದಲ್ಲಿ ಮೋಕ್ಷಿತಾ ಟಾಸ್ಕ್ ಅಲ್ಲೇ ಮಂಜು ಅವರಿಗೆ ವಿಲನ್ ಆಗಿದ್ದರು. ಈ ಟಾಸ್ಕ್‌ನ ಪ್ರಭಾವವೋ ಏನೋ ಗೊತ್ತಿಲ್ಲ ಅಲ್ಲಿಂದ ಮೋಕ್ಷಿತಾ ಹಾಗೂ ಮಂಜು ಶತ್ರುಗಳಾದರು.
ಈಗ ಗೌತಮಿ ಕ್ಯಾಪ್ಟನ್ ಆದ ಮೇಲೆ ತಮ್ಮ ಫೇವರ್ ಆಗಿ ಆಡುತ್ತಾರೆ ಅಂದುಕೊಂಡಿದ್ದ ಮಂಜು ಯೋಚನೆ ಸುಳ್ಳಾಗಿದೆ. ಗೌತಮಿ ನೇರವಾಗಿ ಮಂಜು ಅವರನ್ನು ಕ್ಯಾಪ್ಟನ್ಸಿ ಆಟದಿಂದ ನಾಮಿನೇಟ್ ಮಾಡಿದ್ದಾರೆ. ಅಲ್ಲದೇ ಟಾಸ್ಕ್ ವಿಚಾರದಲ್ಲಿ ಸಲಹೆ ಕೊಡದಂತೆ ಎಚ್ಚರಿಕೆ ಕೂಡ ನೀಡಿದ್ದಾರೆ. ಇದು ಮಂಜು ಅವರಿಗೆ ಅನಿರೀಕ್ಷಿತ ಬೆಳವಣಿಗೆ ಆಗಿದ್ದು ಮೋಕ್ಷಿತಾ ಇದರ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಮೋಕ್ಷಿತಾ ಅವರ ಮೇಲೆ ಕಪ್ಪು ನೀರು ಹಾಕುವ ಮೂಲಕ ಗೌತಮಿ ನಾಮಿನೇಟ್ ಮಾಡಿದ್ದರು. ಇದರಿಂದ ಮೋಕ್ಷಿತಾ ಹಾಗೂ ಗೌತಮಿ ನಡುವಿನ ಕೋಪದ ಜ್ವಾಲೆ ಉಕ್ಕಿ ಹರಿಯುತ್ತಿದೆ. ಇದೇ ಕಾರಣಕ್ಕೆ ಮೋಕ್ಷಿತಾ ಅವರು ಗೌತಮಿ ಹಾಗೂ ಮಂಜು ನಡುವೆ ತಂದಿಡುವ ಕೆಲಸ ಮಾಡಿದ್ದಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಒಂದಾಗಿದ್ದ ಸ್ನೇಹಿತರ ನಿಜವಾದ ಬಣ್ಣ ಎಲ್ಲವೂ ಬಯಲಾಗಿದ್ದು ಮುಂದೆ ಇದು ಯಾವ ಹಂತಕ್ಕೆ ತಂದು ನಿಲ್ಲಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications