Kangana Ranaut wins: ಚೊಚ್ಚಲ ಚುನಾವಣೆಯಲ್ಲಿಯೇ ದಾಖಲೆ ಬರೆದ ಬಾಲಿವುಡ್ ನಟಿ ಕಂಗನಾ ರನೌತ್
ಶಿಮ್ಲಾ, ಜೂನ್. 04: ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಸಹಜ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಚೊಚ್ಚಲ ಚುನಾವಣೆಯಲ್ಲಿ 74,755 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿ ಪರ ಮಾತನಾಡುತ್ತಾ, ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ವಿವಾದಗಳಿಗೆ ಈಡಾಗುತ್ತಿದ್ದ ನಟಿ ಕಂಗನಾ ರನೌತ್ ತಮ್ಮ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಮಂಡಿ ಲೋಕಸಭಾ ಸ್ಥಾನವನ್ನು ಭಾರತೀಯ ಜನತಾ ಪಕ್ಷದ ರಾಮ್ ಸ್ವರೂಪ್ ಶರ್ಮಾ ಅವರು 2014 ಮತ್ತು 2019 ರಲ್ಲಿ ಪ್ರತಿನಿಧಿಸಿದ್ದಾರೆ. ಅ ಸಮಯದಲ್ಲಿ 49.97% ಮತ್ತು 68.75% ಮತಗಳನ್ನು ಗಳಿಸಿದ್ದರು. ಮಾರ್ಚ್ 17, 2021 ರಂದು ರಾಮ್ ಸ್ವರೂ ಶರ್ಮಾ ಅವರ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಆಗ ವಿಕ್ರಮಾದಿತ್ಯ ಸಿಂಗ್ ಅವರ ತಾಯಿ ಪ್ರತಿಭಾ ಸಿಂಗ್ ಅವರು ನವೆಂಬರ್‌ನಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಕ್ಷೇತ್ರವನ್ನು ಗೆದ್ದಿದ್ದರು.
ನಟಿ ಕಂಗನಾ ರನೌತ್ ಅವರು ಹಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಬೆಂಬಲಿಗರಾಗಿದ್ದಾರೆ. ಆದರೆ ಈ ವರ್ಷದ ಆರಂಭದಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಘೋಷಿಸಿದಾಗ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರಿದರು. "ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವಾಗಲೂ ನನ್ನ ಬೇಷರತ್ ಬೆಂಬಲವನ್ನು ಹೊಂದಿದೆ, ಇಂದು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ನನ್ನ ಜನ್ಮಸ್ಥಳವಾದ ಹಿಮಾಚಲ ಪ್ರದೇಶ, ಮಂಡಿ (ಕ್ಷೇತ್ರ) ದಿಂದ ತಮ್ಮ ಲೋಕಸಭಾ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದೆ" ಎಂದು ತಿಳಿಸಿದ್ದರು.

"ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಗೌರವ ಮತ್ತು ಹರ್ಷವಿದೆ. ನಾನು ಯೋಗ್ಯ ಕಾರ್ಯಕರ್ತ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸೇವಕನಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು" ಎಂದು ಕಂಗನಾ ರನೌತ್ ಮಾರ್ಚ್ 24 ರಂದು ತನ್ನ ಅಭ್ಯರ್ಥಿಯನ್ನು ಘೋಷಿಸಿದ ನಂತರ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಕಂಗನಾ ರಾಣಾವತ್ ಅವರ ಮುತ್ತಜ್ಜ ಸರ್ಜೂ ಸಿಂಗ್ ರನೌತ್ ಶಾಸಕರಾಗಿದ್ದರು. ಆಕೆಯ ತಾಯಿ, ಆಶಾ ರನೌತ್, ಮಂಡಿಯಿಂದ ಶಾಲಾ ಶಿಕ್ಷಕಿಯಾಗಿ ನಿವೃತ್ತರಾಗಿದ್ದಾರೆ ಮತ್ತು ಆಕೆಯ ತಂದೆ ಅಮರದೀಪ್ ರನೌತ್ ಒಬ್ಬ ಉದ್ಯಮಿ. ಕುಟುಂಬವು ಆರಂಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿತು. ಆದರೆ ಕಂಗನಾ ರನೌತ್ ಬರು ಬರುತ್ತಾ ಬಿಜೆಪಿ ಕಡೆ ವಾಲಿದರು. ಈ ಬಗ್ಗೆ ಅವರ ತಾಯಿ ಆಶಾ ರನೌತ್ ಒಮ್ಮೆ ಹೇಳಿದ್ದರು.












Click it and Unblock the Notifications