Bigg Boss: ಬಿಗ್ ಸ್ಪರ್ಧಿ ಗೌತಮಿ ಜಾದವ್ ಮದುವೆಯಲ್ಲಿ ಕಿಚ್ಚ ಸುದೀಪ- ಇದರ ಹಿಂದಿನ ರಹಸ್ಯವೇನು ಗೊತ್ತಾ?
ಬಿಗ್‌ಬಾಸ್ ಮನೆಯ ಸ್ಪರ್ಧಿ ಗೌತಮಿ ಜಾದವ್ ಅವರು ಸದ್ಯ ದೊಡ್ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅನಿರೀಕ್ಷಿತವಾಗಿ ಕ್ಯಾಪ್ಟನ್ ಆದ ಗೌತಮಿ ಕಂಡು ಮೋಕ್ಷಿತಾ ಮುಖ ಊದಿಸಿಕೊಂಡಿದೆ. ಕ್ಯಾಪ್ಟನ್ಸಿ ಆಟದ ರೇಸ್‌ನಲ್ಲಿ ಇಲ್ಲದ ಗೌತಮಿ ಕ್ಯಾಪ್ಟನ್ ಆಗಿದ್ದು ಮನೆಯ ಸದಸ್ಯರಿಗೆ ಮಾತ್ರವಲ್ಲ ಬಿಗ್‌ಬಾಸ್ ವೀಕ್ಷಕರಿಗೂ ಅಚ್ಚರಿ ತಂದಿದೆ. ಈ ನಡುವೆ ಬಿಗ್ ಸ್ಪರ್ಧಿ ಗೌತಮಿ ಜಾದವ್ ಮದುವೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಫೋಟೋ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕಿಚ್ಚ ಸುದೀಪ್ ಅವರಿಗೆ ಗೌತಮಿ ಈ ಹಿಂದೆ ಪರಿಚಯನಾ? ಗೌತಮಿ ಮದುವೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಯಾಕೆ?
ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ದೊಡ್ಡ ದೊಡ್ಡ ಸ್ಟಾರ್‌ಗಳಿಂದ ಹಿಡಿದು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವವರ ಪರಿಚಯ ಕೂಡ ಇದೆ. ಅಲ್ಲದೆ ಅವರಿಗೆ ಲಕ್ಷಾಂತರ ಜನ ಫ್ಯಾನ್ಸ್ ಕೂಡ ಇದ್ದಾರೆ. ಹಾಗಂತ ಕಿಚ್ಚ ಸುದೀಪ್ ಆಹ್ವಾನಿತರೆಲ್ಲರ ಕಾರ್ಯಕ್ರಮಗಳಿಗೂ ಹೋಗುವುದಿಲ್ಲ.

ನಿತ್ಯ ಸಿನಿಮಾ ಶೂಟಿಂಗ್ ಅಲ್ಲಿ ಬ್ಯೂಸಿ ಆಗಿರುವ ಸುದೀಪ್ ಅವರು ಪರಿಚಯ ಇರುವ ಎಲ್ಲರ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಆಹ್ವಾನಿತರು ತಮಗೆ ತುಂಬಾ ವಿಶೇಷವಾದ ವ್ಯಕ್ತಿಯಾಗಿದ್ದರೆ ಮಾತ್ರ ಸುದೀಪ್ ಕೊಂಚ ಬಿಡುವು ಮಾಡಿಕೊಂಡು ಕಾರ್ಯಕ್ರಮಗಳಿಗೆ ಹೋಗಿರುವುದಿದೆ. ಹೀಗಿರುವಾಗ ಗೌತಮಿ ಅವರು ಸುದೀಪ್ ಅವರಿಗೆ ವಿಶೇಷ ವ್ಯಕ್ತಿನಾ? ಗೌತಮಿ ಅವರ ಮದುವೆಯಲ್ಲಿ ಕಿಚ್ಚಾ ಸುದೀಪ್ ಕಾಣಿಸಿಕೊಂಡಿದ್ದು ಹೇಗೆ?
ಗೌತಮಿ ಜಾದವ್ ಯಾರು?
ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ. 2018ರಲ್ಲಿ ತೆರೆಕಂಡ ಕಿನಾರೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಗೌತಮಿ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. 2020ರಲ್ಲಿ ಕಿರುತೆರೆಯಲ್ಲಿ ನಟಿಸಲು ಆರಂಭಿಸಿ ವೀಕ್ಷಕರ ಮನಗೆದ್ದಿದ್ದಾರೆ. ಪ್ರಸ್ತುತ ಅವರು ಬಿಗ್‌ಬಾಸ್ ಮನೆಗೆ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಪತಿ ಅಭಿಷೇಕ್ ಕಾಸರಗೋಡ್ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕರಾಗಿದ್ದಾರೆ.
ಅಂದಹಾಗೆ ಬಿಗ್‌ಬಾಸ್ ಮನೆಯ ಕೆಲ ಸದಸ್ಯರ ಪರಿಚಯ ಸುದೀಪ್ ಅವರಿಗೆ ಇದೆ. ಆ ಸ್ಪರ್ಧಿಗಳಲ್ಲಿ ಗೌತಮಿ ಕೂಡ ಒಬ್ಬರು. ಗೌತಮಿ ನೇರವಾಗಿ ಸುದೀಪ್ ಅವರಿಗೆ ಪರಿಚಯ ಇಲ್ಲದೇ ಇದ್ದರೂ ಕೂಡ ಅವರ ಪತಿಯ ತಂದೆಗೆ ಸುದೀಪ್ ತುಂಬಾ ಆತ್ಮೀಯರಾಗಿದ್ದಾರೆ. ಹೀಗಾಗಿ ಅವರು ಗೌತಮಿ ಅವರ ಮದುವೆಯಲ್ಲಿ ಕಾಣಿಸಿಕೊಂಡಿದ್ದು. ಹಾಗಾದರೆ ಗೌತಮಿ ಮಾವ ಯಾರು ಅವರಿಗೆ ಸುದೀಪ್ ಹೇಗೆ ಪರಿಚಯ?
ಕಿಚ್ಚ ಸುದೀಪ್ ಗೌತಮಿ ಮದುವೆಗೆ ಹೋಗಲು ಕಾರಣ ಇದು..
ಕಿಚ್ಚ ಸುದೀಪ್ ಗೌತಮಿ ಮದುವೆಗೆ ಹೋಗೋಕೆ ಕಾರಣ ಹಿರಿಯ ಸಿನೆಮಾ ಪತ್ರಕರ್ತ ಗಣೇಶ ಕಾಸರಗೋಡು. ಗಣೇಶ ಕಾಸರಗೋಡು ಮಗನೇ ಗೌತಮಿ ಜಾಧವ್ ಪತಿ ಅಭಿಷೇಕ ಕಾಸರಗೋಡು. ಗಣೇಶ ಕಾಸರಗೋಡು ಸುದೀಪ್ ಅವರು ತುಂಬಾ ವರ್ಷಗಳಿಂದ ಪರಿಚಯಸ್ಥರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ ಎನ್ನಲಾಗುತ್ತದೆ. ಹೀಗಾಗಿ ಗಣೇಶ್ ಕಾಸರಗೋಡು ಅವರ ಆಹ್ವಾನಕ್ಕೆ ನಿರಾಕರಿಸದ ಕಿಚ್ಚ ಸುದೀಪ್ ಬಿಗ್‌ಬಾಸ್ ಸ್ಪರ್ಧಿ ಗೌತಮಿ ಜಾಧವ್ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತದೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ಕಿಚ್ಚನ ಚಪ್ಪಾಳೆಗಾಗಿ ಗೌತಮಿ ಪ್ರಯತ್ನ
ಈ ವಾರ ಗೌತಮಿ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ಬಾರಿ ಕಿಚ್ಚನ ಚಪ್ಪಾಳೆ ಪಡೆಯಲು ಗೌತಮಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಹೌದು... ಕಳೆದ ಬಾರಿ ಫೇವರಿಸಂ ಗೇಮ್ ವಿಚಾರದಲ್ಲಿ ಗೌತಮಿ ಹಾಗೂ ಮಂಜು ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಾರಿ ಅನಿರೀಕ್ಷಿತವಾಗಿ ಮನೆಯ ಕ್ಯಾಪ್ಟನ್ ಆದ ಗೌತಮಿ ಸದ್ಯ ಮನೆಯಲ್ಲಿ ಹವಾ ಸೃಷ್ಟಿಸಲು ಆರಂಭಿಸಿದ್ದಾರೆ. ವಿಶೇಷವಾಗಿ ಮಂಜು ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ಯಿಂದ ಗೌತಮಿ ಅವರು ಮಂಜು ಅವರನ್ನು ಹೊರಗಿಟ್ಟಿದ್ದಾರೆ. ಜೊತೆಗೆ ಮಂಜು ಮಾತುಗಳನ್ನು ಗೌತಮಿ ಕೇಳುತ್ತಲೇ ಇಲ್ಲ. ಸ್ನೇಹಕ್ಕೆ ನಾನು ಬ್ರೇಕ್ ಹಾಕಿದಿನಿ ಅಂತ ನೇರವಾಗಿ ಮಂಜು ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಮನಸ್ಸುಗಳು ಒಡೆದು ಹೋಗಿವೆ.
ಮಹಾರಾಜ ಟಾಸ್ಕ್‌ನಲ್ಲಿ ಮಂಜು ಗೌತಮಿ ಮಾತುಗಳನ್ನು ಕೇಳಿದ್ದರು. ಅಂದರೆ ಗೌತಮಿ ತಪ್ಪು ಮಾಡಿದ್ದರೂ ಮಂಜು ಅದನ್ನು ಗುರುತಿಸದೇ ನಿರ್ಲಕ್ಷಿಸಿದ್ದರು. ಮಂಜು ಮಹಾರಾಜ ಆಗಿದ್ದಾಗ ಅವರ ಗೆಳೆತನ ಬಯಸಿದ ಗೌತಮಿಗೆ ಈಗ ಅವರ ಮಾತುಗಳು ಬೇಡವಾಗಿ ಹೋಗಿದೆ. ಇದರಿಂದ ಬಿಗ್‌ಬಾಸ್ ವೀಕ್ಷಕರು ಗೌತಮಿ ನಡುವಳಿಕೆಗೆ ಬೇಸರಗೊಂಡಿದ್ದಾರೆ.












Click it and Unblock the Notifications