ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಅಪ್ಪು ಜಾಗಕ್ಕೆ ಎಂಟ್ರಿ ಕೊಡಲಿರುವ ಕನ್ನಡ ಇಂಡಸ್ಟ್ರಿಯ.... Kannada Kotyadhipathi

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಕನ್ನಡ ಟಿವಿ ಲೋಕದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮೀರಿಸುವ ಮತ್ತೊಂದು ಪ್ರೋಗ್ರಾಂ ಇಲ್ಲ ಎನ್ನಬಹುದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು, ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು. ಇಂತಹ ಸಮಯದಲ್ಲೇ ಪುನೀತ್ ರಾಜ್‌ಕುಮಾರ್ ಅವರು ನಿಧನರಾದರು. ಹೀಗಾಗಿ 'ಕನ್ನಡದ ಕೋಟ್ಯಾಧಿಪತಿ' ನಿಂತು ಹೋಗಿದ್ದು, ಇದೀಗ ಕನ್ನಡದ ಬಹುದೊಡ್ಡ ಸ್ಟಾರ್, ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಬರ್ತಿದ್ದಾರಂತೆ!

1 ಕೋಟಿ ರೂಪಾಯಿ... ಅಂದಹಾಗೆ ಇಷ್ಟು ಹಣ ಮಧ್ಯಮ ವರ್ಗ ಅಥವಾ ಜನ ಸಾಮಾನ್ಯರಿಗೆ ಸಿಕ್ಕರೆ ಅದು ದೊಡ್ಡ ಮೊತ್ತವೇ ಸರಿ. ಯಾಕೆ ಅಂದ್ರೆ 1 ಕೋಟಿ ರೂಪಾಯಿ ಬಡವರ ಪಾಲಿಗೆ ದೊಡ್ಡ ಹಣ. ಸಾಮಾನ್ಯ ಜನರಿಗೆ ಕೂಡ ಕೋಟಿ ಕೋಟಿ ರೂಪಾಯಿ ಗಳಿಸುವ ಆಸೆ ಇರುತ್ತದೆ. ಆದರೆ ಈ ರೀತಿ ಕೋಟ್ಯಂತರ ರೂಪಾಯಿ ಗಳಿಸುವುದು ಎಲ್ಲರಿಗೂ ಸಾಧ್ಯ ಆಗುವುದಿಲ್ಲ, ಆದರೆ ಈ ಆಸೆ ಸುಲಭವಾಗಿದ್ದು ಮೊದಲಿಗೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೂಲಕ!

Kannada Kotyadhipathi Darshan Thoogudeepa Fans Saying He Will Take Over Puneeth Rajkumar s Place

ಕೋಟಿ ಕೋಟಿ ರೂಪಾಯಿ ಹಣ....

ಹೌದು, ಹೀಗೆ ಕೋಟಿ ಕೋಟಿ ರೂಪಾಯಿ ಹಣ ಗಳಿಸುವ ಆಸೆಯ ಕನಸು ನನಸು ಮಾಡಿದ್ದು 'ಕನ್ನಡದ ಕೋಟ್ಯಾಧಿಪತಿ' ಮತ್ತು ಪುನೀತ್ ರಾಜ್‌ಕುಮಾರ್ ಅವರು. ಈಗ ಮತ್ತೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಟಿವಿ ಪರದೆ ಮೇಲೆ ಅಬ್ಬರಿಸಲು ಸಜ್ಜಾಗುತ್ತಿದೆ. ಆದರೆ ಈ ಬಾರಿ ಡಾ. ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬರ್ತಾರೆ ಅಂತಾ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ!

ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ?

ಹೌದು, 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಹೊಸ ಆಂಕರ್ ಅನ್ನೋ ಸುದ್ದಿ ದೊಡ್ಡ ಸದ್ದು ಮಾಡುವಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬರ್ತಾರೆ ಅಂತಾನೂ ಇದೀಗ ಸುದ್ದಿ ಹಬ್ಬಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಈ ರೀತಿ 'ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ ಮುಂದಿನ ಹೊಸ ಆಂಕರ್' ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಮಾಡಲಾಗುತ್ತಿದೆ.

ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಆಯೋಜಕರಿಂದ ಸಿಕ್ಕಿಲ್ಲ. ಹೀಗಾಗಿ ಈ ರೀತಿಯಾಗಿ ಹಬ್ಬಿರುವ, 'ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರೇ ಮುಂದಿನ ಹೊಸ ಆಂಕರ್' ಅನ್ನೋ ಸುದ್ದಿ ಕೇವಲ ವದಂತಿ ಅಂದ್ರೆ ಸುಳ್ಳು ಸುದ್ದಿ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಎಲ್ಲರ ಗಮನ ಕಿಚ್ಚ ಸುದೀಪ್ ಅವರ ಮೇಲೆ ಕೇಂದ್ರಿಕೃತ ಆಗಿದೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ...

ಕರ್ನಾಟಕ ಮಾತ್ರವಲ್ಲದೆ ಭಾರತದ ಹಲವು ರಾಜ್ಯಗಳಲ್ಲಿ ಕೂಡ ಕನ್ನಡದ ಕೋಟ್ಯಾಧಿಪತಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾಕಂದ್ರೆ ಅಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ಕೂಡ ನಡೆದುಕೊಂಡು ಬಂದಿದೆ. ಹೀಗಿದ್ದಾಗಲೇ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಯಾವಾಗ ಶುರುವಾಗುತ್ತೆ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅವರ ಪ್ರಶ್ನೆಗಳಿಗೆ ಈಗ ಅತಿ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ. ಮತ್ತೊಂದು ಕಡೆ ಕಿಚ್ಚ ಸುದೀಪ್‌ರ ನಿರೂಪಣೆ ಗ್ಯಾರಂಟಿ ಆಗೋದರೆ, ಮತ್ತಷ್ಟು ಕುತೂಹಲ ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+