ಕಳಪೆ ಸಿನಿಮಾ ಮಾಡಿ ಪೂಜೆ ಮಾಡಿದರೆ ಏನು ಫಲ: ಚನ್ನಾಗಿ ಉಗಿಯುತ್ತಿದ್ದಾರೆ ಕನ್ನಡ ಸಿನಿಮಾ ಪ್ರೇಕ್ಷಕರು!
ಕನ್ನಡ ಸಿನಿಮಾ ಇಂಡಸ್ಟ್ರಿ ಯಾವ ಕಡೆ ಹೋಗುತ್ತಿದೆ? ದೇವರು ನಮ್ಮನ್ನು ಕಾಪಾಡುತ್ತಾರೆ ನಿಜ, ಆದರೆ ಸರಿಯಾಗಿ ಕೆಲಸವನ್ನೇ ಮಾಡದೆ ಮೈಗಳ್ಳತನ ಮಾಡುತ್ತಾ ಕಾಪಾಡು ದೇವರೆ ಅಂದ್ರೆ ಅದು ಹೇಗೆ ಕಾಪಾಡುತ್ತಾರೆ ದೇವರು? ಹೌದು ಇಂತಹ ಪ್ರಶ್ನೆಯನ್ನ ಕನ್ನಡ ಸಿನಿಮಾ ಅಭಿಮಾನಿಗಳು ಈಗ ಕೇಳುತ್ತಿದ್ದಾರೆ. ಕಲಾವಿದರು & ಕನ್ನಡ ಸಿನಿಮಾ ಇಂಡಸ್ಟ್ರಿ ಒಳಿತಿಗಾಗಿ ಅಂತಾ ಚಲನಚಿತ್ರ ಮಂಡಳಿ ಪೂಜೆ ಮಾಡಿದ ವಿಚಾರ ಈಗ ಬೆಂಕಿ ಹೊತ್ತಿಸಿದೆ! ಅಲ್ಲದೆ ಈ ಮೂಲಕ ಜನರು ಕೂಡ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಕನ್ನಡ ಕಲಾವಿದರು ಸೇರಿ ವಿಶೇಷ ಪೂಜೆ ಆಯೋಜನೆ ಮಾಡಿದ್ದರು. ಕನ್ನಡ ಸಿನಿಮಾ ರಂಗ ಹಿಂದೆ ಉಳಿಯುತ್ತಿದ್ದು, ಸಿನಿಮಾಗಳು ಸೋಲುತ್ತಿವೆ. ಹಾಗೇ ಸಾಲು ಸಾಲು ಸಂಕಷ್ಟಗಳು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎದುರಾಗುತ್ತಿವೆ ಅಂತಾ ಈ ರೀತಿ ವಿಶೇಷ ಪೂಜೆ ಆಯೋಜನೆ ಮಾಡಿದ್ದರಂತೆ ಕನ್ನಡ ಸಿನಿಮಾ ರಂಗದ ಕೆಲವು ಬಲಾಢ್ಯರು. ಆದರೆ, ಇದೀಗ ಇದೇ ವಿಚಾರ ಕಿಚ್ಚು ಹೊತ್ತಿಸಿದೆ. ಯಾಕಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರನ್ನು ಸದಾ ಬೈಯುವ ಕೆಲವು ಕನ್ನಡ ಕಲಾವಿದರು ಹಾಗೂ ನಿರ್ಮಾಪಕರು ಹೀಗೆ ಪೂಜೆ ಮಾಡಿಸಿದರೆ ಸಮಸ್ಯೆ ಸರಿಯಾಗುತ್ತಾ? ಕಳಪೆ ಸಿನಿಮಾ ಕೊಡುತ್ತಿರುವುದು ಯಾರ ತಪ್ಪು? ಅಂತಾ ಇದೀಗ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಸರಿಯಾಗಿ ಉಗಿಯುತ್ತಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿ ಹೆಮ್ಮೆ!
ಭಾರತದ ಸಿನಿಮಾ ಇಂಡಸ್ಟ್ರಿಯಲ್ಲೇ ಕನ್ನಡ ಸಿನಿಮಾಗಳ ಖದರ್ ಒಂದು ಕೈ ಜಾಸ್ತಿ ಇತ್ತು ಬಿಡಿ. ಯಾಕಂದ್ರೆ ನೂರಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿತ್ತು. ಆದರೆ ಇತ್ತೀಚಿನ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಕಳಪೆ ಸಿನಿಮಾಗಳನ್ನ ಕೊಡುತ್ತಿವೆ ಎಂಬುದು ಪ್ರೇಕ್ಷಕರ ಆರೋಪ. ಹಾಗೇ ಸಿನಿಮಾ ರಂಗ ದುಡ್ಡು ಮಾಡುವ ಜಾಗ ಆಗಬಾರದು, ಆದರೆ ಕನ್ನಡ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರೆ ಅಂತಹ ಸಿನಿಮಾಗಳನ್ನ ಯಾರೂ ಕೈಬಿಡಲ್ಲ ಅಂತಿದ್ದಾರೆ ಪ್ರೇಕ್ಷಕ ಪ್ರಭುಗಳು!
ಹೊಸಬರ ಸಿನಿಮಾಗೆ ಬೆನ್ನುತಟ್ಟಿ
ಒಟ್ನಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಮಸ್ಯೆ ಎದುರಾಗಿದೆ, ಆದರೆ ಅದು ಪೂಜೆ ಮಾಡಿಸಿ ದೇವರ ಮೂಲಕ ಸರಿ ಮಾಡಿಸುವ ಮಟ್ಟಕ್ಕೆ ಅಲ್ಲ. ಒಳ್ಳೆಯ ಸಿನಿಮಾಗಳನ್ನು ನೀಡಿ ಸಾಕು, ಆಗ ಕನ್ನಡ ಸಿನಿಮಾ ಇಂಡಸ್ಟ್ರಿ ತಾನಾಗಿ ತಾನೆ ಜಗತ್ತಿನಾದ್ಯಂತ ಬೆಳಗಲಿದೆ ಎಂಬ ಸಲಹೆಯನ್ನ ಈಗ ಕನ್ನಡ ಸಿನಿಮಾ ಪ್ರೇಕ್ಷಕರು ನೀಡುತ್ತಿದ್ದಾರೆ. ಹಾಗೇ ಪೂಜೆ ಮಾಡಿರುವ ನಿರ್ಧಾರವನ್ನು ಕೂಡ ಒಪ್ಪಿಕೊಂಡು, ಕಳಪೆ ಸಿನಿಮಾಗಳನ್ನ ಕೊಡುವುದು ನಿಲ್ಲಿಸಿ. ಇದರ ಜೊತೆಗೆ ಹೊಸಬರ ಸಿನಿಮಾಗಳಿಗೆ ಬೆಂಬಲ ನೀಡಿ ಅಂತಾ ಕೂಡ ಕನ್ನಡ ಸಿನಿಮಾ ಪ್ರೇಕ್ಷಕರು ಸಲಹೆ ನೀಡಿದ್ದಾರೆ.












Click it and Unblock the Notifications