Bigg Boss: ಕಪ್ ಗೆದ್ರೆ ಹುಡ್ಗಿ ಸಿಗ್ತಾಳಾ? ಕಿಚ್ಚನ ಪ್ರಶ್ನೆಗೆ ನಾಚಿ ನೀರಾದ ಹನುಮಂತ

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯಲು ಕೆಲವೇ ದಿನ ಬಾಕಿ ಇದೆ. ಇದೇ ವಾರಾಂತ್ಯದಲ್ಲಿ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಕೂಡ ಸಜ್ಜಾಗುತ್ತಿದೆ. ಕಳೆದ ವಾರ ಸುದೀಪ್ ಅವರು ಸ್ಪರ್ಧಿಗಳಿಗೆ ಟ್ರೋಪಿಯನ್ನು ತೋರಿಸಿದ್ದು ಇದನ್ನು ಪಡೆಯುವ ಸ್ಪರ್ಧಿಗಳು ಯಾರಾಗಲಿದ್ದಾರೆ ಎನ್ನುವ ಕೂತೂಹಲ ಹೆಚ್ಚಾಗಿದೆ. ಇದೇ ವೇಳೆ ಕಿಚ್ಚ ಸುದೀಪ್ ಹಾಗೂ ಹನುಮಂತನ ನಡುವೆ ನಡೆದ ಒಂದು ಸಂಭಾಷಣೆಯ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯದಲ್ಲಿ ಹನುಮಂತ ನಾಚಿ ನೀರಾಗಿರುವುದು ಕಂಡು ಬಂದಿದೆ.

ಹೌದು... ಕಿಚ್ಚ ಸುದೀಪ್ ಅವರು ಹನುಮಂತನಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಹನುಮಂತ ಹೇಳಿದ ಉತ್ತರಕ್ಕೆ ವೀಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಅಲ್ಲದೆ ಹನುಮಂತ ಕಿಚ್ಚ ಸುದೀಪ್ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ. ಹಾಗಾದರೆ ಕಿಚ್ಚ ಸುದೀಪ್ ಕೇಳಿದ ಪ್ರಶ್ನೆ ಏನು? ಇದಕ್ಕೆ ಹನುಮಂತ ಕೊಟ್ಟ ಉತ್ತರವೇನು? ಈ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯಾಕೆ?

Kannada bigg boss hanumantha started blushing by kichcha sudeeps question

ಕಳೆದ ವಾರ ಸುದೀಪ್ ಟ್ರೋಪಿಯನ್ನು ತೋರಿಸಿ ಇದನ್ನು ನೀವು ಯಾಕೆ ಗೆಲ್ಲಬೇಕು ಎಂದು ಉತ್ತರಿಸಿ ಎಂದು ಮನೆಯ ಎಲ್ಲಾ ಸ್ಪರ್ಧಿಗಳಿಗೆ ಕೇಳುತ್ತಾರೆ. ಆಗ ಹನುಮಂತನಿಗೂ ಈ ಪ್ರಶ್ನೆ ಕೇಳಿದಾಗ ಹನುಮಂತ ಸರಳವಾಗಿ ಉತ್ತರಿಸಿ 'ನಾನು ಚೆನ್ನಾಗಿ ಆಟ ಆಡಿದಿನಿ ಸರಾ. ಹೀಗಾಗಿ ನಾನೇ ಕಪ್ ಗೆಲ್ಲಬೇಕು' ಎನ್ನುತ್ತಾರೆ. ಇದಕ್ಕೆ ಬಿಗ್‌ಬಾಸ್‌ ವೀಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದಾರೆ. ಇದೇ ವೇಳೆ ಸುದೀಪ್ ಅವರು ಹನುಮಂತನ ಕಾಳೆಯುವ ಕೆಲಸ ಮಾಡುತ್ತಾರೆ.

ಸುದೀಪ್ ಅವರು ಕಪ್ ಗೆದ್ದರೆ ಹುಡುಗಿ ಸಿಗುತ್ತಾಳಾ? ಮದುವೆ ಆಗುತ್ತಾ? ಎಂದು ಕೇಳಿದಾಗ ಹನುಮಂತ ನಾಚಿ ನೀರಾಗಿದ್ದಾರೆ. 'ಹೂಂ ಸರ್, ಕಪ್‌ ಗೆದ್ರೆ ಹುಡ್ಗಿ ಸಿಗ್ತಾಳಾ' ಎಂದು ನಾಚಿಕೊಂಡು ಹೇಳಿದ್ದಾರೆ. ಇದಕ್ಕೆ ಬಿಗ್‌ಬಾಸ್‌ ವೀಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದಾರೆ.

ಬಿಗ್‌ಬಾಸ್ ಕನ್ನಡ ಆರಂಭವಾಗಿ ಕೆಲವೇ ವಾರದಲ್ಲಿ ಹನುಮಂತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟರು. ಆರಂಭದಲ್ಲಿ ಹನುಮಂತನಿಗೆ ಬಿಗ್‌ಬಾಸ್‌ ಮನೆ ಮನೆಯಾಗಿರದೇ ಜೈಲಿನಂತೆ ಬಾಸವಾಗುತ್ತಿತ್ತು. ಇದಕ್ಕಾಗಿ ಹನುಮಂತ ಹಲವಾರು ಬಾರಿ ಕಣ್ಣೀರು ಹಾಕಿದ್ದು ಇದೆ. ಹನುಮಂತ ಬಿಗ್‌ಬಾಸ್‌ ಮನೆಗೆ ಆಗಮಿಸಿದ ದಿನವೇ ಕ್ಯಾಪ್ಟನ್ ಆಗಿ ಮನೆಗೆ ಎಂಟ್ರಿ ಕೊಟ್ಟರು.

ಆದರೆ ಕ್ಯಾಪ್ಟನ್‌ ರೂಂನಲ್ಲಿ ಅವರು ಮಲಗಲು ಆಸೆ ಪಡಲಿಲ್ಲ. ಐಶಾರಾಮಿ ಜೀವನವನ್ನು ಇಷ್ಟಪಡದ, ಮೋಸ ಮಾಡದ, ಜಗಳವಾಡದ ಮುಗ್ಧ ಹುಡುಗ ಹನುಮಂತ. ಹನುಮಂತನ ಆಟಕ್ಕೆ ಬಿಗ್‌ಬಾಸ್‌ ವೀಕ್ಷಕರು ಸಿಕ್ಕಾಪಟ್ಟೆ ಫಿಧಾ ಆಗಿದ್ದಾರೆ. ಹೀಗಾಗಿ ಈ ಬಾರಿ ಹನುಮಂತನೇ ಗೆಲ್ಲಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜೊತೆಗೆ ಹನುಮಂತ ಗೆಲ್ಲಬೇಕು ಅನ್ನೋ ಅಭಿಯಾನವನ್ನೂ ಶುರು ಮಾಡಿದ್ದಾರೆ. ಹನುಮಂತನ ಗೆಲುವಿಗಾಗಿ ರೀಲ್ಸ್‌ ಕೂಡ ಮಾಡಲು ಶುರುಮಾಡಿದ್ದಾರೆ. ಯಾರನ್ನೇ ಕೇಳಲಿ ಹನುಮಂತನೇ ಗೆಲ್ಲಬೇಕು ಎನ್ನುವ ಉತ್ತರ ಸಿಗುತ್ತಿದೆ.

ಹೀಗಾಗಿ ಈ ಬಾರಿ ಹನುಮಂತನೇ ಟ್ರೋಪಿ ಪಡೆಯುತ್ತಾರೆ ಎನ್ನಲಾಗುತ್ತಿದೆ. ಆದರೆ ಬಿಗ್‌ಬಾಸ್‌ ಗೆಲುವಿನ ರೇಸ್‌ನಲ್ಲಿ ತ್ರಿವಿಕ್ರಮ್ ಕೂಡ ಇದ್ದಾರೆ. ಇದರಿಂದಾಗಿ ತ್ರಿವಿಕ್ರಮ್ ಹಾಗೂ ಹನುಮಂತನ ನಡುವೆ ಭಾರೀ ಪೈಪೋಟಿ ಶುರುವಾಗಿದೆ. ಈ ಜಿದ್ದಾಜಿದ್ದಿಯಲ್ಲಿ ಕಪ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+