NTR-Devara: ಸಿನಿಮಾ ಶೂಟಿಂಗ್ ವೇಳೆ ಜಾನ್ವಿ ಕಪೂರ್ ಸೊಂಟಕ್ಕೆ ಕಚ್ಚಿದ ಜೇನುಹುಳುಗಳು...
'ದೇವರ' ಸಿನಿಮಾ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ ಘಟನೆ ನಡೆದಿದೆ. 'ದೇವರ' ಸಿನಿಮಾ ತಂಡದ ಮೇಲೆ ಜೇನುಹುಳಗಳು ದಾಳಿ ಮಾಡಿದ್ದು ಇದರಿಂದ ಕೆಲವರು ಆಸ್ಪತ್ರೆ ಸೇರಿದ್ದಾರೆಂದು ವರದಿಯಾಗಿದೆ.
ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅಭಿನಯದ 'ದೇವರ' ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇದರಲ್ಲಿ ಸೈಫ್ ಅಲಿ ಖಾನ್ ಅವರು ವಿಲನ್ ರೋಲ್ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು ಈ ಸಿನಿಮಾ ಶೂಟಿಂಗ್‌ನಲ್ಲಿ ತಂಡ ಬ್ಯೂಸಿ ಆಗಿದೆ.

ಆದರೆ ಸಿನಿಮಾ ಸೂಟಿಂಗ್ ವೇಳೆ ಜೇನುಹುಳುಗಳು ತಂಡದ ಮೇಲೆ ದಾಳಿ ಮಾಡಿರುವ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಇದರಿಂದ ಚಿತ್ರದ ಶೂಟಿಂಗ್ ಕೆಲ ಹೊತ್ತು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅಭಿನಯದ ಸಿನಿಮಾ ಶೂಟಿಂಗ್ ವೇಳೆ ಜೇನು ಹುಳುಗಳು ದಾಳಿ ಮಾಡಿವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ಜೇನು ಗೂಡಿನ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲನ್ನು ಎಸೆದಿದ್ದಾರೆ ಎಂದು ಚಿತ್ರ ತಂಡ ಅನುಮಾನಿಸಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆನ್ನಲಾಗುತ್ತಿದ್ದು ಯಾರಿಗೂ ಹೆಚ್ಚಿನ ತೊಂದರೆ ಆಗಿಲ್ಲ. ಹಾಗಾದರೆ ಸಿನಿಮಾ ಶೂಟಿಂಗ್ ವೇಳೆ ಯಾರೆಲ್ಲಾ ಇದ್ದರು ಎಂದು ಈಗ ತಿಳಿಯೋಣ.
ಸಿನಿಮಾ ಶೂಟಿಂಗ್ ವೇಳೆ ಯಾರೆಲ್ಲಾ ಇದ್ದರು?
ಯಂಗ್ ಟೈಗರ್ ಎನ್‌ಟಿಆರ್ ರಾಜಮೌಳಿ ನಿರ್ದೇಶನದ RRR ಚಿತ್ರದಲ್ಲಿ ನಟಿಸಿದ್ದರು. ಪ್ಯಾನ್ ಇಂಡಿಯಾ ರೇಂಜ್‌ನಲ್ಲು ಸೂಪರ್ ಕ್ರೇಜ್ ಪಡೆದರು. ಆ ಚಿತ್ರದಲ್ಲಿ ಅವರು ಕೊಮುರಂ ಭೀಮ್ ಪಾತ್ರದಲ್ಲಿ ನಟಿಸಿದ್ದರು.

RRR ನಂತರ NTR ಸದ್ಯ ದೇವರ ಸಿನಿಮಾ ಮಾಡುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನಿರುದ್ಧ ರವಿಚಂದ್ರ ಸಂಗೀತ ನೀಡಿದ್ದಾರೆ.
ಈ ಚಿತ್ರವು ಅಕ್ಟೋಬರ್ 10, 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ.
ಯುವ ಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ಸುಧಾಕರ್ ಮಿಕ್ಕಿಲಿನೇನಿ, ಕೆ.ಹರಿಕೃಷ್ಣ ಮತ್ತು ನಂದಮೂರಿ ಕಲ್ಯಾಣ್ ರಾಮ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದರೆ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ.

ಏಪ್ರಿಲ್ 5ಕ್ಕೆ ರಿಲೀಸ್ ಆಗಬೇಕಿದ್ದ 'ದೇವರ' ಸಿನಿಮಾ
ಆಗಸ್ಟ್ 15ಕ್ಕೆ ಪುಷ್ಪ 2 ಚಿತ್ರ ಬಿಡುಗಡೆಯಾಗದೇ ಇದ್ದರೆ ಅದೇ ದಿನಾಂಕಕ್ಕೆ ಈ ಸಿನಿಮಾ ಬಿಡುಗಡೆಯಾಗ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಸಿನಿಮಾದ ಓವರ್ ಸೀಸ್ ಡೀಲ್ ಕ್ಲೋಸ್ ಆಗಿದೆ.
ದೇವರ ಸಿನಿಮಾದ ಓವರ್ ಸೀಸ್ ರೈಟ್ಸ್ 27 ಕೋಟಿಗೆ ಕ್ಲೋಸ್ ಆಗಿದ್ದು ದಿಲ್ ರಾಜು ಈ ಸಿನಿಮಾ ರೈಟ್ಸ್‌ಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ದಿಲ್ ರಾಜು ಡೀಲ್ ಕ್ಲೋಸ್ ಮಾಡಿದ್ದಾರೆ ಎಂಬ ಮಾತು ಬಹುತೇಕ ಕೇಳಿಬರುತ್ತಿದೆ.
ಈ ಸಿನಿಮಾ ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಆದರೆ ಈ ಚಿತ್ರಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಬಾಕಿ ಉಳಿದಿವೆ. ಸರಿಯಾದ ಔಟ್‌ಫುಟ್ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಎಪಿಯಲ್ಲಿ ಏಪ್ರಿಲ್ ತಿಂಗಳ ಚುನಾವಣೆಯ ಹಿನ್ನಲೆಯಲ್ಲಿ ಆ ವೇಳೆಗೆ ದೇವರನ್ನು ರಿಲೀಸ್ ಮಾಡಿದರೆ ದೊಡ್ಡ್ ಮಟ್ಟದಲ್ಲಿ ವರ್ಕೌಟ್ ಆಗುವ ಸಾಧ್ಯತೆ ಇಲ್ಲ ಎಂಬುದು ಚಿತ್ರತಂಡದ ಭಾವನೆ.
ಜಾನ್ವಿ ಕಪೂರ್ ಸೊಂಟಕ್ಕೆ ಕಚ್ಚಿದ ಜೇನುಹುಳುಗಳು
'ದೇವರ' ಸಿನಿಮಾ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ್ದು ಜಾನ್ವಿ ಕಪೂರ್ ಸೊಂಟಕ್ಕೆ ಕಚ್ಚಿವೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಶೂಟಿಂಗ್ ವೇಳೆ ಜೇನುಹುಳುಗಳು ದಾಳಿ ಮಾಡಿದ್ದು ನಿಜವಾದರೂ ಜಾನ್ವಿ ಕಪೂರ್‌ಗೆ ಕಚ್ಚಿಲ್ಲ.
ತಂಡದ ಕೆಲ ಸದಸ್ಯರಿಗೆ ಮಾತ್ರ ಜೇನುಹುಳುಗಳು ಕಚ್ಚಿವೆ. ಈ ಸಮಯದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಇರಲೇ ಇಲ್ಲ. ಇದರಿಂದ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅದಾಗ್ಯೂ ಕೆಲವೆಡೆ ಜಾನ್ವಿ ಅವರಿಗೆ ಜೇನುಹುಳುಗಳು ಕಚ್ಚಿವೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ











Click it and Unblock the Notifications