ದರ್ಶನ್ & ಪವಿತ್ರ ಗೌಡಗೆ ಮದ್ವೆ ಫಿಕ್ಸ್ ಆಯ್ತಾ? ಪೊಲೀಸ್ ಠಾಣೆ ಸುತ್ತಾ ಶಾಮಿಯಾನ ಯಾಕೆ?- ಇದು ಯಾರ ಪ್ರಶ್ನೆ ಗೊತ್ತಾ?
ಬೆಂಗಳೂರು, ಜೂನ್, 13: ಚಿತ್ರದುರ್ಗದ ರೇಣುಕಾಸ್ವಾಮಿ ಕೋಲೆ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಟ ದರ್ಶನ್ ಅನ್ನು ಬಂಧಿಸಿದ್ದು, ಅವರನ್ನು 6 ದಿನ ಪೋಲಿಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ಇದೀಗ ಇಂದು (ಜೂನ್ 13) ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಮುಂದೆ ಮದುವೆ ಮನೆಯಂತೆ ಪೆಂಡಾಲ್‌ಗಳನ್ನು ಹಾಕಿದ್ದು, ಇದಕ್ಕೆ ನೆಟ್ಟಿಗರು ವಿವಿಧ ಆಯಾಮಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಹಾಗಾದರೆ ಏನೆಲ್ಲ ಪ್ರತಿಕ್ರಿಯಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಮದುವೆ ಮನೆಗಳ ಮುಂದೆ ಪೆಂಡಾಲ್, ಚಪ್ರಗಳನ್ನು ಹಾಕುತ್ತಾರೆ. ಆದರೆ ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಕೋಲೆ ಆರೋಪದಲ್ಲಿ ಬಂಧನವಾಗಿರುವ ಪೊಲೀಸ್ ಠಾಣೆ ಮುಂದೆ ಪೆಂಡಾಲ್‌ಗಳನ್ನು ಹಾಕಿದ್ದು, ಇದಕ್ಕೆ ನೆಟ್ಟಿಗರು ಎಲ್ಲಾ ಆಯಾಮಗಳಲ್ಲೂ ತನಿಖಾ ಅಧಿಕಾರಿಗಳಂಯತೆ ಹಲವು ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

"ಕಲ್ಯಾಣಮಂಟಪದಂತೆ ಸಿಂಗಾರಗೊಂಡ ಪೊಲೀಸ್ ಠಾಣೆ, ದರ್ಶನ್ ಹಾಗೂ ಪವಿತ್ರಾ ಮದುವೆನಾ?" ಎಂದು ಜನ ಕಾಮೆಮಟ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ 'ಕೊಲೆಗಡುಕ ಇರುವ ಠಾಣೆಗೆ ಯಾಕೆ ಶಾಮಿಯಾನ?.. ಮದುವೆನಾ? ಯಾವುದಾದರೂ ಕಾರ್ಯಕ್ರಮ ಇದಿಯಾ?' ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
"ಕೊಲೆ ಆರೋಪಿಯನ್ನು ಕರೆತಂದು ವಿಚಾರಣೆ ಮಾಡುತ್ತಿರುವ ಪೊಲೀಸ್ ಠಾಣೆಗೆ ಯಾಕೆ ಪೆಂಡಾಲ್ ಹಾಕಿದ್ದೀರಾ? ಒಬ್ಬ ಸೆಲೆಬ್ರೆಟಿ ವಿಚಾರಣೆ ಅಂತಾ ಹೀಗೆ ಶಾಮೀಯಾನ ಹಾಕಿದ್ದೀರಾ?, ಸಿಗರೇಟ್ ಕೊಡಲು ಏನಾದ್ರೂ ಪ್ಲಾನ್ ನಡೆಯುತ್ತಿದ್ಯಾ?," ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
"ಸರ್ಕಾರ ಏನಾದ್ರೂ ಪೊಲೀಸ್ ಠಾಣೆ ಮುಂದೆ ಶಾಮಿಯಾನ ಹಾಕುವುದಕ್ಕೇ ಹೇಳಿದ್ಯಾ? ಅಥವಾ ಸೆಲೆಬ್ರೆಟಿ ವಿಚಾರಣೆ ಎನ್ನುವ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದ್ಯ?, ಅಭಿಮಾನಿಳು ಬಂದು ತೊಂದರೆ ಕೊಡುತ್ತಾರೆ ಎನ್ನುವ ಭಯ ಇದ್ಯಾ? ಹೀಗೂ ಆದ್ರೆ ಪೊಲೀಸರ ಕೈಯಲ್ಲಿ ಲಾಠಿ ಇರೋದಿಲ್ವಾ?," ಎಂದೆಲ್ಲಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
"ಆರೋಪಿಗೆ ಶಿಕ್ಷೆ ಆಗುವ ರೀತಿ ತನಿಖೆ ಮಾಡುತ್ತಿದೆಯೋ ಅಥವಾ ತನಿಖೆಯನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದ್ಯಾ?," ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
" ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ದರ್ಶನ್ ಪರವಾಗಿದ್ದಾರ ಎನ್ನುವ ಅನುಮಾನಗಳು ಕೂಡ ಮೂಡುತ್ತಿವೆ," ಎಂದು ನೆಟ್ಟಿಗರು ಹೇಳುತ್ತಿದ್ದಾರೆ.












Click it and Unblock the Notifications