K Sivaram: ಬರಿಗಾಲಲ್ಲೆ ಆಫೀಸ್‌ಗೆ ಹೋಗ್ತಿದ್ದರಂತೆ ಈ ಬಣ್ಣದ ಲೋಕದ ನಟ
ಬರಿಗಾಲಲ್ಲೆ ಆಫೀಸ್‌ಗೆ ಹೋಗ್ತಿದ್ದರಂತೆ ಈ ಬಣ್ಣದ ಲೋಕದ ನಟ. ಅಂದುಕೊಂಡಿದ್ದನ್ನು ಸಾಧಿಸೇ ತೀರುವ ಛಲ ಹೊಂದಿದ್ದ ಈ ನಟ ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸ್ ಆದವರು. ಅದ್ಬುತ ರಾಜಕಾರಣಿಯಾಗಿ ಜನರ ಸೇವೆ ಮಾಡಿದವರು. ಸಿನಿಮಾ ನಟನಾಗಿ ಜನಮನದಲ್ಲಿ ಸ್ಥಾನ ಪಡೆದುಕೊಂಡವರು. ಆದರೀಗ ಈ ಅದ್ಭುತ ಕಲಾವಿದ ಹೃದಯಾಘಾತದಿಂದ ಇಹಲೋಕವನ್ನು ತ್ಯಜಿಸಿದ್ದಾರೆ.
ಹೌದು... ಕೆ ಶಿವರಾಮ್ ಹೃದಯಾಘಾತದಿಂದಾಗಿ ಇಂದು (ಫೆಬ್ರವರಿ 29) ಬೆಳಿಗ್ಗೆ ಮೃತಪಟ್ಟಿದ್ದಾರೆ. ಕೆ.ಶಿವರಾಮ್ ರಾಮನಗರದ ಬಿಡದಿಯ ಹತ್ತಿರ ಉರಗಳ್ಳಿಯಲ್ಲಿ 1953ರಲ್ಲಿ ಜನಿಸಿದರು. ತಂದೆ-ತಾಯಿಗೆ ಇವರು ಒಬ್ಬರೇ ಪುತ್ರ. ಇವರ ತಂದೆ ಕೆಂಪಯ್ಯ ಅವರು ಡ್ರಾಮಾ ಮಾಸ್ಟರ್ ಆಗಿದ್ದರು. ಪಾಂಡವ ವಿಜಯ, ಕುರುಕ್ಷೇತ್ರ ಆಗಿನ ಕಾಲಕ್ಕೆ ಫೇಮಸ್ ಡ್ರಾಮಗಳಾಗಿದ್ದವು. ಇಂಥೆಲ್ಲಾ ಐತಿಹಾಸಿಕ ಕಥೆಗಳಲ್ಲಿ ಕೆಂಪಯ್ಯ ಅದ್ಬುತ ನಟನೆ ಮಾಡಿ ಹೆಸರು ಗಳಿಸಿದ್ದರು. ತಂದೆಯಿಂದಲೇ ಅಭಿನಯದ ಆಸಕ್ತಿ ಬೆಳಸಿಕೊಂಡ ಕೆ ಶಿವರಾಮ್ ತಾವೂ ಕೂಡ ನಟನಾಗಬೇಕು ಎನ್ನುವ ಕನಸು ಕಂಡಿದ್ದರು.

ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದ ನಟ!
ಉರಗಳ್ಳಿಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಶಿವರಾಮ್ ಓದು ಆರಂಭವಾಯಿತು. ಹೈಸ್ಕೂಲ್ ಓದಲು ಬೆಂಗಳೂರಿಗೆ ಬಂದು ಹಾಸ್ಟೆಲ್ ಸೇರಿಕೊಂಡರು. ಆದರೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಲು ಆಗಲಿಲ್ಲ. ಆದರೂ ಅಲ್ಲಲ್ಲಿ ಕೆಲಸಕ್ಕೆ ಸೇರಿಕೊಂಡು ಪರೀಕ್ಷೆ ಕಟ್ಟಿ ಪಾಸ್ ಮಾಡಿಕೊಂಡರು.
ಆಗ ಕಾಟನ್ ಪೇಟೆಯಲ್ಲಿದ್ದು ಸರ್ವಜ್ಞಾ ವಿದ್ಯಾಶಾಲೆಗೆ ಸೋಷಿಯಲ್ ವೆಲ್‌ಫೇರ್ ಡಿಪಾರ್ಟ್‌ಮೆಂಟ್ ಕಡೆಯಿಂದ ಕ್ಯಾಂಡಿಡೇಟ್‌ಗಳನ್ನು ಸ್ಪಾನ್ಸರ್ ಮಾಡ್ತಾಯಿದ್ರು. ಇದರಲ್ಲಿ ಶಿವರಾಮ್ ಅವರು ಸೆಲೆಕ್ಟ್ ಆದ್ರು. ಆಗಲೇ ಅವರು ಕನ್ನಡ ಬರವಣೆಗಾರರಾದರು. ಕರ್ನಾಟಕದಲ್ಲಿ ಶೀಘ್ರಲಿಪಿಯಲ್ಲಿ ಶಿವರಾಮ್ ಅವರೇ ಸ್ಥಾನ ಪಡೆದುಕೊಂಡಿದ್ದರು.
ಆಗ ಎಲ್ಲಾ ಸ್ನೇಹಿತರೊಂದಿಗೆ ಸೇರಿ ಒಂದು ಜಾಬ್ ಕಾರ್ಡ್ ರೆಡಿ ಮಾಡಿದರು. ಈ ಒಂದು ಜಾಬ್ ಕಾರ್ಡ್ ಅವರು ಜೀವನದ ದಿಕ್ಕನ್ನು ಬದಲಾಯಿಸಿ ಬಿಡ್ತು. ಹೌದು.... ಇವರ ಜಾಬ್ ಕಾರ್ಡ್ ಎಲ್ಲೆಡೆ ಅಪ್ಲೈ ಮಾಡಿದರು. ಆಗ ಸೆಂಟ್ರಲ್ ಜೈಲ್‌ನಲ್ಲಿ ಟೈಪಿಸ್ಟ್ ಆಗಿ ಶಿವರಾಮ್ ಅವರನ್ನು ಬಿಟ್ಟು ಉಳಿದೆಲ್ಲಾ ಸ್ನೇಹಿತರಿಗೂ ಕೆಲಸಕ್ಕೆ ಆಫರ್ ಬಂತು. ಇದು ಒಂದು ರೀತಿ ಬೇಸರ್ ತಂದರೂ ಶಿವರಾಮು ಅಷ್ಟಕ್ಕೇ ಸುಮ್ಮನಾಗಲಿಲ್ಲ.
ಕಾಲಿಗೆ ಚಪ್ಪಲಿ ಹಾಕದೆ ಕೆಲಸಕ್ಕೆ ಹೋಗುತ್ತಿದ್ದ ಶಿವರಾಮ್!
ಆದರೂ ತಾವು ಕೂಡ ಸ್ನೇಹಿತರೊಂದಿಗೆ ಇಂಟರ್‌ವ್ಯೂವ್ ಅಂಡೆಂಡ್ ಮಾಡಲು ಹೋದರು. ಆಗ ಅವರು ಕಾಲಿಗೆ ಚಪ್ಪಲಿ ಕೂಡ ಹಾಕ್ತಾಯಿರಲಿಲ್ಲ. ಒಂದೇ ಪ್ಯಾಂಟ್ ಒಂದು ಶರ್ಟ್ ಹಾಕ್ತಾಯಿದ್ದರು. ದಿನಕ್ಕೊಂದು ಬಟ್ಟೆ ಹಾಕಬೇಕು ಅನ್ನೋ ಅಲೋಚನೆ ಕೂಡ ಅವರಿಗೆ ಇರಲಿಲ್ಲ. ಆದರೆ ಅದೃಷ್ಟ ಅಂದ್ರೆ ಸೆಂಟ್ರಲ್ ಜೈಲ್ ಇಂಟರ್‌ವ್ಯೂವ್ ಅಲ್ಲಿ ಶಿವರಾಮ್ ಹೆಸರು ಇದ್ದು ಅಲ್ಲೇ ಜಾಬ್ 1972ರಲ್ಲಿ ಸಿಕ್ಕಿತು. ಆಗ ತಿಂಗಳಿಗೆ ಅವರಿಗೆ 250 ರೂಪಾಯಿ ಸಂಬಳ. ತಿಂಗಳಿಗೆ ಒಂದು ಅಥವಾ ಒಂದುವರೆ ರೂಪಾಯಿಗೆ ದುಡಿಯುತ್ತದ್ದ ಅವರಿಗೆ ಇದು ಆ ಕಾಲಕ್ಕೆ ಹೆಚ್ಚು ಸಂಬಳ.
35 ಕಿಮೀ ದೂರ ಇರುವ ತಮ್ಮ ಊರಿಗೆ ಬೆಂಗಳೂರಿನಿಂದ ನಡೆದುಕೊಂಡು ಹೋಗಿ ನಾಲ್ಕು ಗಂಟೆಗಳಲ್ಲಿ ಊರು ತಲುಪುವಷ್ಟು ಶಿವರಾಮ್ ಶಕ್ತಿಶಾಲಿಯಾಗಿದ್ದರು.
ಕೆಲಸ ಸಿಕ್ಕ ಖುಷಿಯಲ್ಲಿ ತಮ್ಮ ಫ್ರೆಂಡ್ಸ್‌ಗೆ ಕರೆ ಮಾಡಿ ಏನಾದರು ಸಹಾಯ ಬೇಕಾದರೆ ನಂಗೆ ಕೇಳಿ ಅಂತ ಆಫರ್ ಕೊಟ್ಟಿದ್ದರು. ಐದು ಹತ್ತು ರೂಪಾಯಿ ಆ ಕಾಲಕ್ಕೆ ತುಂಬಾ ದೊಡ್ಡದು. ಇಷ್ಟೆಲ್ಲಾ ದುಡ್ಡನ್ನು ಸ್ನೇಹಿತರಿಗೆ ಅವಶ್ಯಕತೆ ಇದ್ದಾಗ ಶಿವರಾಮ್ ಸಹಾಯ ಮಾಡ್ತಾಯಿದ್ದರು.
ಚಪ್ಪಲಿ ಬದಲು ಶೂ ಖರೀದಿ
ಆಗ ಐಎಎಸ್ ಕಟ್ಟಲು ನಿರ್ಧಾರ ಮಾಡಿದ್ರು. ವಿಶ್ವೇಶ್ವರ ಕಾಲೇಜ್‌ನಲ್ಲಿ ಓದಲು ಶುರು ಮಾಡಿದ್ದರು. ವಿದ್ಯಾಭ್ಯಾಸ ಹಾಗೂ ಜಾಬ್ ಮಾಡಿದರೂ ಒಂದೇ ಡ್ರೆಸ್ ಹಾಗೂ ಒಂದೇ ಚಪ್ಪಲಿ ಹಾಕ್ತಾಯಿದ್ರು. ಒಂದು ದಿನ ಸಹೋದ್ಯೋಗಿ ಹೇಳಿದ್ದಕ್ಕೆ ಒಂದು ತಿಂಗಳು ಸಂಬಳದಲ್ಲಿ ಬಟ್ಟೆ ಖರೀದಿ ಮಾಡಿದ್ದರು. ಚಪ್ಪಲಿ ಬದಲು ಶೂ ತೆಗೆದುಕೊಂಡು ಆಗಲಿಂದಲೂ ಶೂ ಹಾಕಲು ಶುರು ಮಾಡಿದ್ರು ಶಿವರಾಮ್.
ಮೊದಲ ಸಂಬಳದಲ್ಲಿ ಶಿವರಾಮ್ ಮಾಡಿದ್ದೇನು?
ಮದ್ದೂರಮ್ಮ ಶಿವರಾಮ್ ಮನೆ ದೇವರು. ಮದ್ದೂರು ಜಾತ್ರೆಗೆ ಪ್ರತೀ ಬಾರಿ ಹೋಗುತ್ತಿದ್ದರು. ಅದೇ ವೇಳೆ ಜಾತ್ರೆಗೆ ಹೋಗಿ, ಅಲ್ಲಿ ರಸ್ತೆಯಲ್ಲಿ ಮಲಗಿ ದೇವರು, ಕೊಂಡ ನೋಡಿ ಅಲ್ಲೇ ಅಡುಗೆ ಮಾಡಿಕೊಂಡು ವಾಪಾಸ್ ಬಂದಿದ್ದರು.
ಮೊದಲ ಸಂಬಳ ತಂದೆ-ತಾಯಿಗೆ ಕೊಟ್ಟಿದ್ದರು. ಆಗೆಲ್ಲಾ ಮೊದಲ ಸಂಬಳದಲ್ಲಿ ಸಿಹಿ ತಂದು ಕೊಡಬೇಕು ಅನ್ನೋದು ಗೊತ್ತಿರಲಿಲ್ಲ. ಇದಕ್ಕೂ ಮೊದಲು ಒಂದುವರೆ ರೂಪಾಯಿ ಮೊದಲು ಸಂಬಳ ಪಡೆದಿದ್ದರು ಶಿವರಾಮ್ ಅವರ ಜೀವನ ಕ್ರಮೇಣ ಬದಲಾಗಿ ಹೋಯ್ತು.
ನಂತರ ಅವರ ಆಸೆಯಂತೆ ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸ್ ಆದರು. ಆದರೆ ಶಿವರಾಮ್ ಅವರಿಗೆ ಐಎಎಸ್ ಪಾಸ್ ಮಾಡುವುದಕ್ಕಿಂತ ಕರ್ನಾಟಕದಲ್ಲಿ ಸೆಲೆಕ್ಷನ್ ಆಗೋದು ತುಂಬಾ ಕಷ್ಟವಾಗಿತ್ತು. ಆದರೆ ಅವರ ಅದೃಷ್ಟು ಮತ್ತೆ ಅವರ ಕೈ ಬಿಡಲಿಲ್ಲ. ಕರ್ನಾಟಕದಲ್ಲೇ ಅವರ ಸೇವೆ ಆರಂಭವಾಯಿತು.
ಜೀವನದ ಎರಡೂ ಗುರಿ ಮುಟ್ಟಿದ ಶಿವರಾಮ್!
ಜೀವನದಲ್ಲಿ ಒಂದು ಗುರಿ ಐಎಎಸ್ ಆಗುವುದು ಮತ್ತೊಂದು ಸಿನಿಮಾ ಮಾಡುವುದಾಗಿತ್ತು. ಇವೆರಡನ್ನೂ ಸಾಧಿಸುವವರೆಗೂ ಬಿಡಲಿಲ್ಲ ಶಿವರಾಮ್. ಗೆಳೆಯನ ಸಹಾಯದಿಂದ ಶಿವರಾಮ್ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶವೂ ಸಿಕ್ಕಿತು. ಸಿನಿಮಾ ನಟರಾಗಲು ಡಾ/ರಾಜುಕುಮಾರ್ ಅವರಿಗೆ ಫೋಟೋ ಕಳಿಸಿ ಸೆಲೆಕ್ಷನ್ ಆದ್ರು. ಕೆ.ಶಿವರಾಮ್ 'ಬಾನಲ್ಲೆ ಮಧುಚಂದ್ರಕ್ಕೆ', 'ವಸಂತಕಾವ್ಯ' ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡಿದ್ದರು.
ಡಾ.ರಾಜುಕುಮಾರ್ ಅವರು ಇವರ ನಟನೆಯನ್ನು ಹಾಡಿಹೊಗಳಿದ್ದರು. ಶಿವರಾಮ್ ಅವರಂತೆ ಹೋ.. ಹೋ ಹಿಮಾಲಯ ಹಾಡಿನಂತೆ ನಂತೆ ರಾಜುಕುಮಾರ್ ಅವರು ಹೋ... ಹೋ.... ಪ್ರೇಮ ಕಾಶ್ಮೀರ ಹಾಡು ಮಾಡಿದ್ರಂತೆ. ಬಳಿಕ ಶಿವರಾಮ್ ರಾಜಕೀಯದತ್ತ ಹೆಜ್ಜೆಯಿಟ್ಟು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಆದರೆ ವಿಧಿಯಾಟಕ್ಕೆ ಅವರಿಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.












Click it and Unblock the Notifications