Hanumantha: ಈ ಸಲ ಕಪ್ ನಮ್ದೇ: ಬಿಗ್ ಬಾಸ್ ಮನೆಯಲ್ಲಿ ಕೂಗಿ ಹೇಳಿದ ಹನುಮಂತ
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳು ಕೊನೆ ವಾರದಲ್ಲಿದ್ದಾರೆ. ದೊಡ್ಮನೆಯಲ್ಲಿ ಇಷ್ಟು ದಿನ ಜಗಳ, ಆಡಲು ಟಾಸ್ಕ್‌ಗಳೂ ಇದ್ದವು. ಆದರೆ, ಮನದ ಮಾತುಗಳನ್ನ ಹೇಳೋಕೆ ಬಿಗ್ ಬಾಸ್ ಅವಕಾಶ ಮಾಡಿಕೊಡುತ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ಫೈನಲ್ ವಾರ ತಲುಪಿದ್ದಾರೆ.
ಟಿಕೆಟ್ ಟು ಫಿನಾಲೆ ತಲುಪಿರುವ ಹನುಮಂತ ಅವರು ಯವ್ವೋ ಈ ಸಲ ಕಪ್ ನಮ್ಮದೇ ಜೋರಾಗಿ ಕೂಗಿ ತಾಯಿಗೆ ಭಾವುಕ ಸಂದೇಶವನ್ನ ಕಳುಹಿಸಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಪ್ 6 ಸ್ಪರ್ಧಿಗಳ ಫೈಕಿ ಹನುಮಂತ ಅವರು ಕೂಡ ಒಬ್ಬರಾಗಿದ್ದಾರೆ. ಬಿಗ್ ಬಾಸ್' ಮನೆಯನ್ನು ನೋಡಿದಾಗ ಸಾಕಷ್ಟು ಭಿನ್ನವಾಗಿ ಕಾಣೋದು ಹನುಮಂತ ಅವರು. ದೊಡ್ಡ ಅಭಿಮಾನಿಗಳನ್ನು ಪಡೆದು ಈಗ ಫಿನಾಲೆ ವಾರ ತಲುಪಿದ್ದಾರೆ.

ಇಷ್ಟು ದಿನ ಬಿಗ್ ಬಾಸ್ ಮನೆ ಅಂದ್ರೆ ಆಟ, ಜಗಳದಿಂದ ಕೂಡಿತ್ತು. ಇದೀಗ . ಫೈನಲ್ ವಾರದಲ್ಲಿ ಯಾವುದೇ ಟಾಸ್ಕ್ ಇಲ್ಲದಿರುವುದರಿಂದ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಈ ವೇಳೆ ಹನುಂತ ಅವರು ಈ ಸಲ ಕಪ್ ನಮ್ಮದೇ' ಎಂದು ಘೋಷಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಿನಾಲೆ ವಾರ ತಲುಪಿದ ಖುಷಿಯನ್ನು ಕೂಗಿ ಹೇಳಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ಇನ್ನೂ ಹನುಂತ ಅವರ ಮಾತಿನಿಂದ ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ.
ಬಿಗ್ ಬಾಸ್ ವಿವಿಧ ಚಟುವಟಿಕೆಯನ್ನ ನೀಡಿದ ಹಿನ್ನಲೆ ಬಿಗ್ ಬಾಸ್ಗೆ ಬರೋದು ನಮ್ಮ ಕನಸಾಗಿತ್ತು ಎಂದು ಎಲ್ಲರೂ ಹೇಳಿಕೊಂಡಿದ್ದಾರೆ. ಆದರೆ, ಹನುಮಂತ ಮಾತ್ರ ಯವ್ವೋ ನಾನು ಫಿನಾಲೆ ತಲುಪಿದೀನಿ ಬೇ.. ಈ ಸಲ ಕಪ್ ನಮ್ದೇ' ಎಂದು ಕೂಗಿ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಹನುಮಂತ ಅವರು ಕೂಡ ಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಪ್ ಗೆದ್ದರೆ ಅವರಿಗೆ ಆರ್ಥಿಕವಾಗಿಯೂ ಸಾಕಷ್ಟು ಸಹಕಾರಿ ಆಗಲಿದೆ ಎಂದು ಹೇಳಲಾಗಿದೆ. ಸದ್ಯ ಮೋಕ್ಷಿತಾ, ಹನುಮಂತ, ತ್ರಿವಿಕ್ರಂ, ಭವ್ಯಾ, ರಜತ್ ಹಾಗೂ ಮಂಜು ಫಿನಾಲೆ ವಾರದಲ್ಲಿ ಇದ್ದಾರೆ. ಈ ಪೈಕಿ ಒಬ್ಬರು ಕಪ್ ಗೆಲ್ಲಲಿದ್ದಾರೆ. ಈ ಭಾನುವಾರ (ಜನವರಿ 26) ಫಿನಾಲೆ ನಡೆಯಲಿದೆ.
ಬಿಗ್ ಬಾಸ್ ಟ್ರೋಫಿ ಕಂಡು ಸ್ಪರ್ಧಿಗಳು ಹೇಳಿದ್ದೇನು?
ಮಂಗಳವಾರದ ಎಪಿಸೋಡ್ ಅಲ್ಲಿ ಬಿಗ್ ಬಾಸ್ ಒಂದು ಚಾನ್ಸ್ ಕೊಟ್ಟಿದ್ದಾರೆ. ಕೈಯಲ್ಲಿ ಹಿಡಿಯಲಿರೋ ಟ್ರೋಫಿ ಮುಂದೆ ಕುಳಿತು ಮನದ ಮಾತುಗಳನ್ನ ಹೇಳುವ ಅವಕಾಶ ಕೂಡ ಇದಾಗಿದೆ.ಟ್ರೋಫಿಯನ್ನ ಎಲ್ಲರೂ ಒಂದೊಂದು ರೀತಿ ಕಂಡಿದ್ದಾರೆ.ಈ ಒಂದು ಟ್ರೋಫಿಯನ್ನ 'ಗರುಡವ್ವ' ಅಂತಲೇ ಹನುಮಂತ ಕರೆದಿದ್ದಾರೆ. ತಾಯಿ ನೀನೇ ಕಾಪಾಡು ಅಂತಲೇ ಹೇಳುತ್ತಾ ಕೈಮುಗಿದು ಟ್ರೋಫಿಗೆ ಗೌರವಿಸಿದ್ದಾರೆ.
ಇನ್ನೂ ಭವ್ಯ ಗೌಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟ್ರೋಫಿ ಜೊತೆಗೆ ಬರೋ ದುಡ್ಡು ಬೇಕಿದೆ. ಅದರಿಂದ ಅಪ್ಪನ ವೋಕಲ್ ಕಾರ್ಡ್ ಆಪರೇಷನ್ ಮಾಡಿಸ್ಬೇಕು ಅನ್ನೋದನ್ನ ಹೇಳಿಕೊಂಡಿದ್ದಾರೆ. ನನ್ನಿಂದ ಅವರ ಆ ಒಂದು ತೊಂದರೆಯನ್ನ ಸರಿ ಮಾಡಿಸಲು ಆಗಲೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಇನ್ನೂ ಪ್ರಬಲ ಸ್ಪರ್ಧಿಯಾಗಿರುವ ತ್ರಿವಿಕ್ರಮ್, ದೊಡ್ಡ ಸ್ಟಾರ್ ಆಗಿ ಬೆಳೀಬೇಕು. ಈ ಟ್ರೋಫಿ ಸಿಕ್ಕರೆ ತುಂಬಾನೆ ಹೆಲ್ಫ್ ಆಗುತ್ತದೆ ಅನ್ನುವ ಅರ್ಥದಲ್ಲಿಯೇ ಹೇಳಿಕೊಂಡಿದ್ದಾರೆ. ಒಂದು ರೀತಿ ಇವರ ಮಾತು ಎಮೋಷನಲ್ ಟೋನ್ ಅಲ್ಲಿಯೇ ಆಡಿದಂತೇನೂ ಇದೆ. ಇನ್ನೂ ಮೋಕ್ಷತಾ ಪೈ ಟ್ರೋಫಿ ನೋಡಿದ್ದಾರೆ. ಏನೂ ಮಾತ್ ಆಡದೇ ಕಣ್ಣೀರು ಸುರಿಸಿದ್ದಾರೆ. ಉಗ್ರಂ ಮಂಜು ಕಣ್ಣಲ್ಲಿ ನೀರು ಇತ್ತು. ರಜತ್ ಟೆನ್ಷನ್ ಅಲ್ಲಿಯೇ ಇದ್ದರು.












Click it and Unblock the Notifications