Ranya Rao: ಚಿನ್ನದ ಕಳ್ಳಸಾಗಣೆ ಪ್ರಕರಣ- ಜೈಲಿನಲ್ಲಿರುವ ನಟಿ ರನ್ಯಾ ರಾವ್‌ಗೆ ವಿಚ್ಛೇದನ ಕೋರಿದ ಪತಿ

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ನಟಿಯ ಪತಿ ಜತಿನ್ ಹುಕ್ಕೇರಿ ಅಧಿಕೃತವಾಗಿ ರನ್ಯಾ ಅವರಿಂದ ವಿಚ್ಛೇದನ ಕೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜತಿನ್ ಅವರು ಇದನ್ನು ದೃಢಪಡಿಸಿದ್ದಾರೆ. ಹಾಗಾದರೆ ಪತಿ ಜತಿನ್ ರನ್ಯಾ ಅವರಿಂದ ವಿಚ್ಚೇದನ ಪಡೆಯಲು ಬಯಸುತ್ತಿರುವುದೇಕೆ?

ರನ್ಯಾ ಜೈಲಿಗೆ ಹೋದ ಬಳಿಕ ಪತಿ ಜತಿನ್ ಸಾಕಷ್ಟು ನೋವು ಅನುಭವಿಸಿದ್ದಾರೆ. ರನ್ಯಾ ಕಾರಣದಿಂದಾಗಿ ಅವರು ನೆಮ್ಮದಿಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಅವಮಾನವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಅವರು ರನ್ಯಾ ಅವರಿಂದ ವಿಚ್ಚೇದನ ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.

gold smuggling case actress ranya rao husband jatin hukkeri seeks divorce

ಪತಿ ಜತಿನ್ ಹೇಳಿದ್ದೇನು?

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಜತಿನ್ ರನ್ಯಾ ಅವರೊಂದಿಗಿನ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. 'ನನ್ನ ಮದುವೆ ಈಗಾಗಲೇ ಸಮಸ್ಯೆಗಳಿಂದ ತುಂಬಿದೆ. ನಾನು ಮದುವೆಯಾದ ದಿನದಿಂದ ನೋವು ಮತ್ತು ತೊಂದರೆಗಳನ್ನು ಅನುಭವಿಸುತ್ತಿದ್ದೇನೆ. ಇಂದು ನಾನು ಧೈರ್ಯ ತಂದುಕೊಂಡು ಕೊನೆಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಅಲ್ಲದೆ ನಾನು ಈ ಮದುವೆಯಿಂದ ಆದಷ್ಟು ಬೇಗ ಮುಕ್ತನಾಗಲು ಬಯಸುತ್ತೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ದಂಪತಿಗಳ ನಡುವೆ ಬಿರುಕು

ಮಾಹಿತಿ ಪ್ರಕಾರ ನಟಿ ರನ್ಯಾ ರಾವ್ ಹಾಗೂ ಪತಿ ಜತಿನ್ ಹುಕ್ಕೇರಿ ದಂಪತಿಗಳ ದಾಂಪತ್ಯದಲ್ಲಿ ದೀರ್ಘಕಾಲದಿಂದ ಕೆಲವು ಸಮಸ್ಯೆಗಳು ಇದ್ದವು. ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಜತಿನ್ ನಿಧಾನವಾಗಿ ರನ್ಯಾಳಿಂದ ದೂರವಾಗುತ್ತಿದ್ದರು. ಅಲ್ಲದೆ ಈಗ ಅವರು ಈ ಮದುವೆಯನ್ನು ಕಾನೂನುಬದ್ಧವಾಗಿ ಕೊನೆಗೊಳಿಸಲು ಹೆಜ್ಜೆ ಇಟ್ಟಿದ್ದಾರೆ.

gold smuggling case actress ranya rao husband jatin hukkeri seeks divorce

ನಟಿಯ ಜಾಮೀನು ಅರ್ಜಿ ತಿರಸ್ಕೃತ

ರನ್ಯಾ ರಾವ್ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ನಟಿಯ ಈ ಅರ್ಜಿಯನ್ನು ತಿರಸ್ಕರಿಸಿದೆ. ನಟಿಯ ವಕೀಲ ಬಿ.ಎಸ್. ಗಿರೀಶ್ ಈ ಪ್ರಕರಣದಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದು, ಇದು ಮುಂದಿನ ವಾರ ವಿಚಾರಣೆಗೆ ಬರಲಿದೆ.

ಏನಿದು ಗೋಲ್ಡ್ ಸ್ಮಗ್ಲಿಂಗ್ ಕೇಸ್?

ಮಾರ್ಚ್ 3ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನದೊಂದಿಗೆ ರನ್ಯಾ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು. ನಂತರ ಅವರ ಮನೆ ಮೇಲೆ ದಾಳಿ ಮಾಡಿದಾಗ ಅವರ ಮನೆಯಲ್ಲಿ ದಾಖಲೆ ರಹಿತ ನಗದು ಹಣ ಸಿಕ್ಕಿದ್ದು ವಶಕ್ಕೆ ಪಡೆಯಲಾಗಿದೆ. ಇದೀಗ ರನ್ಯಾ ರಾವ್ ಜೈಲಿನಲ್ಲಿದ್ದು ಅವರ ವಿರುದ್ಧ ಪ್ರಕರಣ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+