ಬಾಲಿವುಡ್ ನಟಿ ಪ್ರಯಾಣಿಸುತ್ತಿದ್ದ ಲಂಬೋರ್ಗಿನಿ ಕಾರು ಅಪಘಾತ: ಇಬ್ಬರು ಸಾವು
ಶಾರುಖ್ ಖಾನ್ ಅಭಿನಯದ 'ಸ್ವದೇಶ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಗಾಯತ್ರಿ ಜೋಶಿ ಅವರು ತಮ್ಮ ಪತಿ ವಿಕಾಸ್ ಒಬೆರಾಯ್ ಜೊತೆ ಇಟಲಿಯಲ್ಲಿ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪಘಾತವಾಗಿದೆ.
ವಿಕಾಸ್ ಒಬೆರಾಯ್ ಅವರ ಮ್ಯಾನೇಜರ್ ಪ್ರಕಾರ ದಂಪತಿಗಳು ಈಗ ಸುರಕ್ಷಿತವಾಗಿದ್ದಾರೆ. ಈ ಅಪಘಾತ ಸಂಭವಿಸಿದಾಗ ಗಾಯತ್ರಿ ಮತ್ತು ಅವರ ಪತಿ ಇಟಲಿಯ ಸಾರ್ಡಿನಾದಲ್ಲಿ ವಿಹಾರಕ್ಕೆ ತೆರಳಿದ್ದರು. ಗಾಯತ್ರಿ ಮತ್ತು ವಿಕಾಸ್ ಅವರ ಕಾರು ಮತ್ತು ಹಲವಾರು ಕಾರುಗಳು ಮತ್ತು ಕ್ಯಾಂಪರ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಇಟಲಿಯಲ್ಲಿ ಸಾರ್ಡಿನಿಯಾ ಸೂಪರ್‌ಕಾರ್ ಪ್ರವಾಸದ ಸಮಯದಲ್ಲಿ ಈ ಘಟನೆ ಸಂಭವಿಸಿದೆ, ಇದು ಟೆಯುಲಾಡಾದಿಂದ ಓಲ್ಬಿಯಾಕ್ಕೆ ಐಷಾರಾಮಿ ಕಾರ್ ಮೆರವಣಿಗೆ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
Two deaths on a Ferrari in Sardina, Italy pic.twitter.com/skT3CaXg0T
— Globe Clips (@globeclip) October 3, 2023
ಫೆರಾರಿ ಕಾರಿನಲ್ಲಿದ್ದ ದಂಪತಿ ಸಾವು
ಗಾಯತ್ರಿ ಮತ್ತು ಅವರ ಪತಿ ಲಂಬೋರ್ಗಿನಿ ಚಾಲನೆ ಮಾಡುತ್ತಿದ್ದಾಗ ಅವರ ಐಷಾರಾಮಿ ಕಾರು ಫೆರಾರಿ ಮತ್ತು ಕ್ಯಾಂಪರ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ವರದಿಯ ಪ್ರಕಾರ ಸಾರ್ಡಿನಿಯಾದ ಗ್ರಾಮೀಣ ರಸ್ತೆಯಲ್ಲಿ ಪಲ್ಟಿಯಾಗಿದೆ ಮತ್ತು ಹಲವಾರು ಕಾರು ಮತ್ತು ಇತರೆ ವಾಹನಗಳು ಅಪಘಾತಕ್ಕೀಡಾಗಿವೆ.
ಮಾಧ್ಯಮ ವರದಿಗಳ ಪ್ರಕಾರ ಫೆರಾರಿಗೆ ಬೆಂಕಿ ಹತ್ತಿಕೊಂಡಿದ್ದು, ಸ್ವಿಟ್ಜರ್ಲೆಂಡ್ ಮೂಲದ ದಂಪತಿಗಳಾದ ಮೆಲಿಸ್ಸಾ ಕ್ರೌಟ್ಲಿ, 63 ಮತ್ತು ಮಾರ್ಕಸ್ ಕ್ರೌಟ್ಲಿ, 67 ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಯಾರು ಈ ಗಾಯತ್ರಿ ಜೋಶಿ
ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಗಾಯತ್ರಿ ಜೋಶಿ ಅವರು ತಮ್ಮ ವೃತ್ತಿಜೀವನವನ್ನು ವೀಡಿಯೊ ಜಾಕಿಯಾಗಿ ಪ್ರಾರಂಭಿಸಿದರು. ಫೆಮಿನಾ ಇಂಡಿಯಾ ಸೌಂದರ್ಯ ಸ್ಪರ್ಧೆಯ ವಿಜೇತರಾಗಲು ತಮ್ಮ ಕೆಲಸ ತೊರೆದರು. 2000 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದುಕೊಂಡು ನಂತರ ಮಿಸ್ ಇಂಟರ್ನ್ಯಾಷನಲ್ 2000 ನಲ್ಲಿ ಭಾರತವನ್ನು ಪ್ರತಿನಿಧಿಸಿದರು.
2004 ರಲ್ಲಿ ಬಿಡುಗಡೆಯಾದ ಅಶುತೋಷ್ ಗೋವಾರಿಕರ್ ಅವರ ನಿರ್ದೇಶನದ ಚಲನಚಿತ್ರ 'ಸ್ವದೇಶ್' ನಲ್ಲಿ ನಟಿಸಿದರು, ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಾಯತ್ರಿ ಜೋಶಿ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
2005 ರಲ್ಲಿ, ಅವರು ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ಮದುವೆಯಾದರು. ಅವರು ಜಾಹೀರಾತು ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಹನ್ಸ್ ರಾಜ್ ಹನ್ಸ್ ಅವರ 'ಝಂಜರಿಯಾ ಮತ್ತು ಜಗಜಿತ್ ಸಿಂಗ್ ಅವರ 'ಕಘಜ್ ಕಿ ಕಶ್ತಿ' ಸೇರಿದಂತೆ ಹಲವಾರು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications