ನಮ್ಮ ಬಾಸ್ ತಪ್ಪು ಮಾಡಿಲ್ಲ, ತಪ್ಪುಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾರೆ! ಇದೆಂಥಾ ಹುಚ್ಚು ಅಭಿಮಾನ?
ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ರೇಣುಕಾಸ್ವಾಮಿ ಎನ್ನುವ ಯುವಕನ ಕೊಲೆ ಪ್ರಕರಣ ಸಂಬಂಧ ದರ್ಶನ್ ಸೇರಿ ಹತ್ತು ಜನರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್, ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ನಟ. ಅವರು ಕೊಲೆ ಪ್ರಕರಣದಲ್ಲಿ ಬಂಧನವಾಗಿರುವುದು ಅಭಿಮಾನಿಗಳಿಗೆ ನಂಬಲೂ ಆಗುತ್ತಿಲ್ಲ.

ದರ್ಶನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಠಾಣೆ ಬಳಿ ಜಮಾಯಿಸಿದ್ದರು. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ದರ್ಶನ್ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ದರ್ಶನ್‌ಗೆ ಬೆಂಬಲ ನೀಡಿದ್ದಾರೆ.
ಅಭಿಮಾನ ಸರಿ, ಅಂಧಾಭಿಮಾನ ಏಕೆ?
ಕೆಲವು ಅಭಿಮಾನಿಗಳಂತೂ ಅತಿರೇಖಕ್ಕೆ ಹೋಗಿದ್ದು, ನಮ್ ಬಾಸ್‌ಗೆ ಯಾರು ಏನೂ ಮಾಡಲಾಗದು ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಅಭಿಮಾನಿ ಸಾಮಾಜಿಕ ತಾಲತಾಣದ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿ, "ನಮ್ ಬಾಸ್ ಸುಮ್ಮನೆ ಕೊಲೆ ಮಾಡಿರಲ್ಲ, ಅದಕ್ಕೆ ಕಾರಣ ಇರುತ್ತದೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೆ. ನಮ್ ಬಾಸ್‌ನ ನೀವು ಏನ ಮಾಡಕ್ಕಾಗಲ್ಲ" ಎಂದು ಪೋಸ್ಟ್ ಹೇಳಿದ್ದಾರೆ.
No comments 🤦🏻♂️#Darshan pic.twitter.com/EZsNLXqtJk
— 👑Che_ಕೃಷ್ಣ🇮🇳💛❤️ (@ChekrishnaCk) June 11, 2024
ಇದು ಒಂದು ಉದಾಹರಣೆ ಅಷ್ಟೆ, ದರ್ಶನ್ ಬಂಧನದ ಸುದ್ದಿಗಳ ಯಾವುದೇ ಪೋಸ್ಟ್ ನೋಡಿದರೂ ಅಲ್ಲಿ ದರ್ಶನ್‌ರ ಕೆಲವು ಅಭಿಮಾನಿಗಳು ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು, ನಮ್ಮ ನೆಚ್ಚಿನ ನಟ ತಪ್ಪು ಮಾಡಿಲ್ಲ, ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ದರ್ಶನ್ ಅವರ ಜನಪ್ರಿಯತೆ ಸಹಿಸಲಾಗದೆ ಅವರ ವಿರುದ್ಧ ಸಂಚು ಮಾಡಿ ಈ ರೀತಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications