ಪ್ರಭಾಸ್ ಸಿನಿಮಾ ಕಲೆಕ್ಷನ್ ಬಗ್ಗೆ ದೀಪಿಕಾ ಪಡುಕೋಣೆ ಟಾಂಗ್: ಫ್ಯಾನ್ಸ್ ಗರಂ
ಬೆಂಗಳೂರು, ಜೂನ್ 02: ಪ್ಯಾನ್ ಇಂಡಿಯಾ ನಟ ಪ್ರಭಾಸ್ ವಿರುದ್ಧ ಕಲೆಕ್ಷನ್ ವಿಚಾರದಲ್ಲಿ ಗಂಭೀರ ಆರೋಪ ಕೇಳಿ ಬಂದಿದೆ. ನಟ ಪ್ರಭಾಸ್‌ಜೊತೆ ಹಿಂದಿನ ಸಿನಿಮಾ 'ಕಲ್ಕಿ 2898 ಎಡಿ' ಮಾಡಿದ್ದ ನಟಿ ದೀಪಿಕಾ ಪಡುಕೋಣೆ ಇಂಥದ್ದೊಂದು ಆರೋಪ ಮಾಡಿದ್ದಾರೆ. ಈ ಜೋಡಿ ಮತ್ತೆ 'ಅನಿಮಲ್ 'ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲಿ ಒಂದಾಗಬೇಕಿತ್ತು. ಕಾರಣಾಂತರಗಳಿಂದ ನಟಿ ದೀಪಿಕಾ ಸಿನಿಮಾದಿಂದ ಹೊರ ನಡೆದರು. ಬಳಿಕವೇ ಅವರು ಈ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಚಿತ್ರೀಕರಣ ನಡೆಯುತ್ತಿರುವ 'ಸ್ಪಿರಿಟ್' ಸಿನಿಮಾದಲ್ಲಿ ನಟ ಪ್ರಭಾಸ್‌ಗೆ ನಟಿ ತೃಪ್ತಿ ದಿಮ್ರಿ ಅವರು ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಜಾಗಕ್ಕೆ ಮೊದಲು ನಟಿ ದೀಪಿಕಾ ಪಡುಕೋಣೆ ಆಯ್ಕೆ ಮಾಡಲಾಗಿತ್ತು. ಅವರಿಗೆ ಕಥೆ ಹೇಳಲಾಗಿತ್ತು. ಕೊನೆಗೆ ಸಂಭಾವನೆ ವಿಚಾರದಲ್ಲಿ ಚಿತ್ರತಂಡ ಹಾಗೂ ನಟಿಗೆ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ಅವರನ್ನು ಕೈ ಬಿಟ್ಟು ನಿರ್ದೇಶಕರು ತೃಪ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಮೊದಲು ಆಯ್ಕೆ ಆಗಿದ್ದ ನಟಿ ದೀಪಿಕಾ ಪಡುಕೋಣೆ ನಮ್ಮ ಸಿನಿಮಾದ ಕಥೆ ರಿವೀಲ್ ಮಾಡಿದ್ದಾರೆ ಅಂತಲೂ ನಿರ್ದೇಶಕರು ಆರೋಪಿಸಿದ್ದರು. ಅಲ್ಲದೇ ಸಂಭಾವನೆ ವಿಚಾರದಲ್ಲಿ ಚಿತ್ರತಂಡ ನಟ ಪ್ರಭಾಸ್ ಮೇಲೆ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ನಿಮಗೆ ಅಷ್ಟು ಸಂಭಾವನೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಹೊರ ನಡೆದ ನಟಿ, ನಾಯಕ ನಟನೊಂದಿಗೆ ತನ್ನ ಸಿನಿಮಾ ಕಲೆಕ್ಷನ್ ವಿಚಾರ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಮೇಲಿನ ಆರೋಪ ಹೆಚ್ಚು ಚರ್ಚೆ ಆಗುತ್ತಿದೆ.
ನಟಿ ದೀಪಿಕಾ ಹೇಳಿಕೆಗೆ ಪ್ರಭಾಸ್ ಫ್ಯಾನ್ಸ್ ಗರಂ
ನಟಿ ದೀಪಿಕಾ ಪಡುಕೋಣೆ ಅವರು, ನಾನು ಇತ್ತೀಚೆಗೆ ಒಂದು ಸಿನಿಮಾ ಆಫರ್ ಬಂದಿತ್ತು. ನಾನು ಚಿತ್ರತಂಡದೊಂದಿಗೆ ಮಾತನಾಡಿದ್ದೆ. ನನ್ನ ಸಂಭಾವನೆ ಕೇಳಿದ್ದಕ್ಕೆ ಅಷ್ಟು ನೀಡಲು ಆಗಲ್ಲ. ಈಗಾಗಲೇ ನಾವು ನಾಯಕ ನಟನ ಮೇಲೆ ಹೆಚ್ಚು ಖರ್ಚು ಮಾಡುತ್ತಿರುವುದಾಗಿ ಚಿತ್ರ ತಂಡ ಹೇಳಿಕೊಂಡಿತು. ಹೀಗಾಗಿ ನಾನು ಆ ಸಿನಿಮಾದಿಂದ ಹೊರ ಬಂದೆ. ನನ್ನ ಟ್ರ್ಯಾಕ್ ರೆಕಾರ್ಡ್ ನನಗೆ ಗೊತ್ತು. ಆ ನಾಯಕನ ಚಿತ್ರಗಳು ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ತಿಳಿದಿದೆ. ನನ್ನ ಚಿತ್ರಗಳಷ್ಟು ಆ ನಟನ ಸಿನಿಮಾ ಕಲೆಕ್ಷನ್ ಮಾಡಿಲ್ಲ ಪ್ರಭಾಸ್ ಹೆಸರು ಹೇಳದೇ ನಟಿ ದೀಪಿಕಾ ಮಾತನಾಡಿದ್ದು, ಮತ್ತೆ ಮುನ್ನೆಲೆಗೆ ಬಂದಿದೆ.
ಇದಕ್ಕೆ ಪ್ರಭಾಸ್ ಅಭಿಮಾನಿಗಳು ದೀಪಿಕಾ ಮೇಲೆ ಕೆಂಡಾಮಂಡಲವಾಗಿದ್ದಾರೆ. ಆ ನಟ ಎಂದು 'ಸ್ಪಿರಿಟ್'ಸಿನಿಮಾದ ನಟ ಪ್ರಭಾಸ್ ಬಗ್ಗೆಯೇ ಮಾತನಾಡಿದ್ದಾರೆ ಅಂತಲೂ ದೂರಿದ್ದಾರೆ.












Click it and Unblock the Notifications