ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, 300 ಕಿ.ಮೀ. ದೂರದ ಜಾಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್? Darshan Thoogudeepa

ಕನ್ನಡ ಸಿನಿಮಾ ರಂಗದಲ್ಲಿ ಇಂದು ಮತ್ತೊಮ್ಮೆ ಬೆಂಕಿ ಕಿಡಿ ಹೊತ್ತಿಕೊಂಡಿದೆ, ಕನ್ನಡ ಸಿನಿಮಾಗಳ ಮೂಲಕ ಚಾಲೆಂಜಿಂಗ್ ಸ್ಟಾರ್ ಅಂತಾನೇ ಬಿರುದು ಪಡೆದಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ದೊಡ್ಡ ಕಂಟಕ ಎದುರಾಗಿದೆ. ಪೊಲೀಸರು ಈಗಾಗಲೇ ಪವಿತ್ರಾ ಗೌಡ ಸೇರಿದಂತೆ, ಹಲವರನ್ನ ದಿಢೀರ್ ಅರೆಸ್ಟ್ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಎಲ್ಲಿದ್ದಾರೆ ಅನ್ನೋದು ಇನ್ನೂ ಬೆಂಗಳೂರು ಪೊಲೀಸರಿಗೆ ಪತ್ತೆ ಆಗಿಲ್ಲ. ಹೀಗಿದ್ದಾಗಲೇ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, 300 ಕಿ.ಮೀ. ದೂರದ ಜಾಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹವಾ ಎಬ್ಬಿಸಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರು ಮಂಡ್ಯ & ಇಂಡಿಯಾ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಅಬ್ಬರಿಸುತ್ತಿದೆ, ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಮಾತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 25 ವರ್ಷಗಳಿಂದ ಹಿಟ್ ಮೇಲೆ ಹಿಟ್ ಸಿನಿಮಾ ಕೊಡುತ್ತಾ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗಲೇ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, 300 ಕಿ.ಮೀ. ದೂರದ ಜಾಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್?

Darshan Thoogudeepa Travelled To Karnataka Border Area For This Reason

ಮಂಡ್ಯ ಟು ಇಂಡಿಯಾ ಡಿ-ಬಾಸ್...

ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಕೋಟ್ಯಂತರ ಫ್ಯಾನ್ಸ್ ಪಾಲಿಗೆ ದೇವರು. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವ ಬೇಕಾದರೂ ಕೊಡ್ತೀವಿ ಅಂತಾರೆ ಕೋಟಿ, ಕೋಟಿ ಅಭಿಮಾನಿಗಳು. ಎಲ್ಲೇ ಹೋದರೂ ಜೈ ಡಿ-ಬಾಸ್, ಜೈ ಡಿ-ಬಾಸ್ ಅನ್ನೋ ಘೋಷಣೆ ಮೊಳಗುತ್ತದೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮಂಡ್ಯ ಟು ಇಂಡಿಯಾ ಭರ್ಜರಿಯಾಗಿದೆ. ಇಂತಹ ಮಹತ್ವದ ಸಮಯದಲ್ಲೇ ಇಂದು ನಡೆಯಬಾರದ ಘಟನೆಯು ನಡೆದೇ ಹೋಯ್ತು...

ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನು ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ, ಪಟ್ಟಣಗೆರೆಯ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಈ ವಿಚಾರ ಕೆಲವು ದಿನಗಳ ನಂತರ ಹೊರ ಜಗತ್ತಿಗೆ ಗೊತ್ತಾಗಿ ಪೊಲೀಸರು 17 ಆರೋಪಿಗಳನ್ನ ಅರೆಸ್ಟ್ ಮಾಡಿದ್ದರು. ಹೀಗೆ ಹಲವು ವಿಚಾರಣೆ ಬಳಿಕ ಅಂತಿಮವಾಗಿ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ 17 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಆದರೆ ಇಂದು ಜಾಮೀನು ರದ್ದು ಮಾಡಿ, ಎಲ್ಲಾ ಆರೋಪಗಳ ಅರೆಸ್ಟ್ ಮಾಡಲು ಆದೇಶ ನೀಡಲಾಗಿತ್ತು. ಇದೇ ಸಮಯದಲ್ಲಿ ಪವಿತ್ರಾ ಗೌಡ ಸೇರಿದಂತೆ ರೇಣುಕಾ ಕೊಲೆ ಕೇಸ್‌ನ ಉಳಿದ ಆರೋಪಿಗಳು ಲಾಕ್ ಆಗಿದ್ದರೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತ್ರ ಪೊಲೀಸರ ಕೈಗೆ ಸುಲಭವಾಗಿ ಸಿಗಲೇ ಇಲ್ಲ....

300 ಕಿಲೋ ಮೀಟರ್ ದೂರದ ಜಾಗದಲ್ಲಿ...

ಹೀಗಿದ್ದಾಗಲೇ, ಇನ್ನೊಂದು ಕಡೆ ಬೆಂಗಳೂರು ಪೊಲೀಸರಿಗೆ ಮಾಹಿತಿ ಒಂದು ಸಿಕ್ಕಿತ್ತು. ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕರ್ನಾಟಕ & ತಮಿಳುನಾಡು ಗಡಿಯಲ್ಲಿ ಅಂದ್ರೆ ಬೆಂಗಳೂರು ನಗರದಿಂದ ಸುಮಾರು 300 ಕಿಲೋ ಮೀಟರ್ ದೂರದ ಜಾಗದಲ್ಲಿ ಇದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಕೊನೆಗೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, 300 ಕಿಲೋ ಮೀಟರ್ ದೂರದ ಜಾಗದಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಹೋಗಿದ್ದಾರಾ? ಅನ್ನೋ ಪ್ರಶ್ನೆಯು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಕೊನೆಗೆ ಕದ್ದು ಮುಚ್ಚಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸಕೆರೆ ಹಳ್ಳಿ ಫ್ಲ್ಯಾಟ್‌ಗೆ ಬಂದಾಗ ಕೊನೆಗೂ ಪೊಲೀಸರ ಬಲೆಗೆ ಬಿದ್ದರು. ಇದೀಗ, ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈ ನಡೆ ಬಗ್ಗೆ ಕೂಡ ಪೊಲೀಸರು ವಿಚಾರಣೆ ನಡೆಸುತ್ತಾರಾ? ಅಂತಾ ಚರ್ಚೆ ಶುರುವಾಗಿದೆ.

200 ಕೋಟಿ ರೂಪಾಯಿ ಹೂಡಿಕೆ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾಗಳಿಗೆ ಅಂತಾನೇ ಕೋಟಿ ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಇದೀಗ ಓಡಾಡುತ್ತಿದೆ. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾನೇ ಸುಮಾರು 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಇದೀಗ ಒಡಾಡುತ್ತಿದೆ. ಆದರೆ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಂಟಕ ಮುಕ್ತರಾಗಿ ಶೀಘ್ರದಲ್ಲೇ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ ಅಂತಾ ಹರಕೆ ಹೊತ್ತು ಬೇಡಿಕೊಳ್ಳುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...


ಸಾಲು ಸಾಲು ಬರೀ ನೋವಿನ ಸುದ್ದಿಗಳೇ...

ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇರುವುದು ಮಾತ್ರವಲ್ಲ, ಹತ್ತಾರು ಸಾವಿರ ವರ್ಷಗಳಿಂದ ಕನ್ನಡ ಭಾಷೆಯನ್ನ ನಮ್ಮ ಕನ್ನಡಿಗರು ಬಳಸುತ್ತಾ ಬಂದಿದ್ದಾರೆ ಅನ್ನೋದು ಭಾಷಾ ತಜ್ಞರ ವಾದ. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಿನಿಮಾ ರಂಗ ಕೂಡ ಬೇಕು, ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಮೂಲಕ ಕನ್ನಡ ಭಾಷೆಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಕನಸು ಕೂಡ ಚಿಗುರೊಡೆದಿತ್ತು. ಆದರೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ತುಂಬಾ ಬರೀ ಸಾವು, ಕೊಲೆ, ಡಿವೋರ್ಸ್... ಹೀಗೆ ಸಾಲು ಸಾಲು ಬರೀ ನೋವಿನ ಸುದ್ದಿಗಳೇ ಬರ್ತಾ ಇವೆ. ಹೀಗಿದ್ದಾಗ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಇದೀಗ ಜೈಲಿಗೆ ಹೋಗಿರುವುದು ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+