Darshan Thoogudeepa: ಬಳ್ಳಾರಿ ಜೈಲಿನ ಬಾತ್‌ರೂಂನಲ್ಲಿ ಜಾರಿ ಬಿದ್ದ ದರ್ಶನ್ ತೂಗುದೀಪ್, ರೇಣುಕಾಸ್ವಾಮಿ ದೆವ್ವ...
ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ನರಳಾಟ ನೋಡಿ ಅಭಿಮಾನಿಗಳು ಮರುಗುತ್ತಿದ್ದಾರೆ. ಹೀಗೆ ಬಳ್ಳಾರಿ ಜೈಲು ವಾತಾವರಣ ಹಿಡಿಸದೆ, ತುತ್ತು ಅನ್ನ ತಿನ್ನುವುದಕ್ಕೂ ಪರದಾಡುತ್ತಿದ್ದಾರೆ ಅಭಿಮಾನಿಗಳ ಪಾಲಿನ ಪ್ರೀತಿಯ 'ಡಿ-ಬಾಸ್'. ದರ್ಶನ್ ಅವರು ಬೆನ್ನು ನೋವಿನಿಂದ ಪರದಾಡುವ ಸಮಯದಲ್ಲೇ, ಇದ್ದಕ್ಕಿದ್ದಂತೆಯೇ ಬಳ್ಳಾರಿ ಜೈಲಿನ ಬಾತ್‌ರೂಂನಲ್ಲಿ ಜಾರಿ ಬಿದ್ದಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಬಳ್ಳಾರಿ ಜೈಲಿನ ಬಾತ್‌ರೂಂನಲ್ಲಿ ಜಾರಿ ಬಿದ್ದ ದರ್ಶನ್ ತೂಗುದೀಪ್ ಅವರಿಗೆ ರೇಣುಕಾಸ್ವಾಮಿ ದೆವ್ವ...
ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, 'ಡಿ-ಬಾಸ್' ಅಂದ್ರೆ ಬಾಕ್ಸ್ ಆಫಿಸ್ ಸುಲ್ತಾನ್ & 'ಡಿ-ಬಾಸ್' ಹೆಸರು ಕೇಳಿದ್ರೆ ಸಿನಿಮಾ ಇಂಡಸ್ಟ್ರಿಯೇ ನಡುಗಿ ಹೋಗುತ್ತೆ ಎಂಬ ಮಾತನ್ನು ಫ್ಯಾನ್ಸ್ ಹೇಳುತ್ತಾರೆ. ದರ್ಶನ್ ತೂಗುದೀಪ್ ಅವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ, ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ದೊಡ್ಡ ಹೆಸರು ಇದೆ.

ರೇಣುಕಾಸ್ವಾಮಿ ದೆವ್ವ ಕಾರಣ ದರ್ಶನ್...
ಭಾರತದ ಮೂಲೆ ಮೂಲೆಯಲ್ಲಿ ಕೂಡ ದರ್ಶನ್ ಅವರ ಸಿನಿಮಾಗಳನ್ನ ನೋಡುತ್ತಾರೆ ಅಭಿಮಾನಿಗಳು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ದರ್ಶನ್ ತೂಗುದೀಪ್ ಅವರು ಬಾತ್‌ರೂಂನಲ್ಲಿ ಜಾರಿ ಬಿದ್ದು, ತಲೆಗೆ ಗಂಭೀರ ಗಾಯವಾಗಿದೆ ಎಂಬ ಸುದ್ದಿ ಹಬ್ಬಿದೆ. ಹೀಗೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನ ಬಾತ್‌ರೂಂನಲ್ಲಿ ಜಾರಿ ಬಿದ್ದು, ತಲೆಗೆ ಗಂಭೀರವಾದ ಏಟು ಬೀಳಲು ರೇಣುಕಾಸ್ವಾಮಿ ದೆವ್ವ ಕಾರಣ ಎಂಬ ಆರೋಪವನ್ನ ಕೆಲವರು ಈಗ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಸುದ್ದಿ ಹಬ್ಬಿದೆ.
ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಅವರು ಬಾತ್‌ರೂಂನಲ್ಲಿ ಜಾರಿ ಬಿದ್ದು, ತಲೆಗೆ ಗಂಭೀರ ಗಾಯವಾಗಿದೆ ಎಂಬ ಸುದ್ದಿ ಹಬ್ಬಿದೆ ನಿಜ. ಆದರೆ ಈವರೆಗೂ ದರ್ಶನ್ ತೂಗುದೀಪ್ ಅವರು ಬಾತ್‌ರೂಂನಲ್ಲಿ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ಬಗ್ಗೆ ಬಳ್ಳಾರಿ ಜೈಲಿನಿಂದ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಕೂಡ ಹೊರಗೆ ಆತಂಕ ಶುರುವಾಗಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ರೇಣುಕಾಸ್ವಾಮಿ ದೆವ್ವದ ಬಗ್ಗೆ ಭಯ ಕೂಡ ಹೆಚ್ಚಾಗಿದೆ. ಆದರೆ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು, ರೇಣುಕಾಸ್ವಾಮಿ ದೆವ್ವದ ಕಥೆಯೇ ಸುಳ್ಳು ಅಂತಿದ್ದಾರೆ.
ದರ್ಶನ್ ತೂಗುದೀಪ್ ರಿಲೀಸ್ ಆಗುವುದು...
ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗುವುದು ಯಾವಾಗ? ಎಂಬ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹಾಗೂ ಈ ವಿಚಾರವು ಈಗ ಜಗತ್ತಿನ, ಮೂಲೆ ಮೂಲೆಯಲ್ಲಿ ಇರುವ ದರ್ಶನ್ ಅವರ ಅಭಿಮಾನಿಗಳಲ್ಲೂ ಮೂಡಿದೆ ಅನ್ನೋದು ಫ್ಯಾನ್ಸ್ ಮಾತು. ಈ ಪ್ರಶ್ನೆಗೆ ಉತ್ತರ ಸಿಗಲು & ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಹೊರಗೆ ಬರಲು ಇನ್ನಷ್ಟು ದಿನ ಕಾಯಬೇಕಿದೆ.












Click it and Unblock the Notifications