Darshan Thoogudeepa: ಪತ್ನಿಗೆ ಕೋಪ ಬಂದಾಗ ಹೀಗೆ ಕರಿತಾರಂತೆ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳು ಜೈಲುಪಾಲಾಗಿದ್ದ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕೆಲವು ತಿಂಗಳು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಾ ವಿಶ್ರಾಂತಿ ಪಡೆದಿದ್ದ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಬಂಧನದ ವೇಳೆ ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಿದ್ದು ದರ್ಶನ್‌ ಸಿನಿಮಾ ಮುಗಿಸುವ ಉತ್ಸಾಹದಲ್ಲಿದ್ದಾರೆ.

ಸದ್ಯ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ. ರಾಜಸ್ಥಾನದಲ್ಲಿದ್ದರೂ ದರ್ಶನ್ ತೂಗುದೀಪ ಧನ್ವೀರ್ ಅಭಿನಯದ ವಾಮನ ಸಿನಿಮಾ ಬೆನ್ನಿಗೆ ನಿಂತಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗ ಅವರು ಜಾಮೀನು ಪಡೆಯುವ ಸಂದರ್ಭದಲ್ಲಿ ದರ್ಶನ್ ಕುಟುಂಬದ ಜೊತೆಗೆ ನಿಂತಿದ್ದವರು ಧನ್ವೀರ್. ಅವರು ನನ್ನ ಅಣ್ಣನಂತೆ ಎಂದು ಧನ್ವೀರ್ ಹೇಳಿದ್ದಾರೆ.

darshan thoogudeepa said this about wife vijayalakshmi

ತಮ್ಮನ ಹೊಸ ಸಿನಿಮಾಗೆ ದರ್ಶನ್ ತೂಗುದೀಪ ಮಾತ್ರವಲ್ಲದ ಪತ್ನಿ ವಿಜಯಲಕ್ಷ್ಮಿ ಕೂಡ ಬೆಂಬಲ ಕೊಟ್ಟಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ವಾಮನ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದರು. ಇದೀಗ ದರ್ಶನ್‌ ವಾಮನ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು ಸಿನಿಮಾಗೆ ಬೆಂಬಲ ಕೊಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ವಾಮನ ಸಿನಿಮಾ ಬಗ್ಗೆ ಮೆಚ್ಚುಗೆ

ವಾಮನ ಸಿನಿಮಾ ಬಗ್ಗೆ ನಟ ದರ್ಶನ್ ತೂಗುದೀಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧನ್ವೀರ್ ಅವರನ್ನು ಬೇರೆ ಬೇರೆ ಪಾತ್ರದಲ್ಲಿ ನೋಡಿದ್ದೇನೆ, ಬಜಾರ್ ಸಿನಿಮಾದಲ್ಲಿ ಒಂದು ರೀತಿ ಇಷ್ಟವಾಗಿದ್ದರು. ಬೈಟು ಲವ್ ಸಿನಿಮಾದಲ್ಲಿ ಬೇರೆ ತರದ ಪಾತ್ರ ಮಾಡಿದ್ದರು. 'ಕೈವ' ನನಗೆ ತುಂಬಾ ಇಷ್ಟವಾದ ಸಿನಿಮಾ. ಈಗ ವಾಮನ ಸಿನಿಮಾ ನೋಡುತ್ತೇವೆ. ನಾಲ್ಕು ಸಿನಿಮಾಗಳು ವಿಭಿನ್ನವಾಗಿವೆ. ವಾಮನ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಚನ್ನಾಗಿದೆ. ಅಮ್ಮನಿಗಾಗಿ, ಪ್ರೀತಿಗಾಗಿ ಹೇಗೆಲ್ಲಾ ಬದಲಾಗುತ್ತಾನೆ ಎನ್ನುವುದನ್ನು ಸಿನಿಮಾದಲ್ಲಿ ಚನ್ನಾಗಿ ತೋರಿಸಿದ್ದಾರೆ ಎಂದರು.

ಹೆಂಡತಿಯನ್ನು ಮುದ್ದು ರಾಕ್ಷಸಿ ಎನ್ನುತ್ತೇನೆ

ವಾಮನ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಹಾಡು ನನಗೆ ತುಂಬಾ ಇಷ್ಟ. ಇಂತಹ ಪದಗಳನ್ನು ಎಲ್ಲಿ ಹುಡುಕುತ್ತೀರಿ, ತುಂಬಾ ಚನ್ನಾಗಿದೆ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಮನೆಲಿ ನನ್ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ, ಮುದ್ದು ರಾಕ್ಷಸಿ ತರ ಇದ್ದೀಯ ಎನ್ನುತ್ತೇನೆ ಎಂದಿದ್ದಾರೆ.

ಎಲ್ಲರೂ ಎಲ್ಲಾ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಅಷ್ಟೇ ಕನ್ನಡ ಸಿನಿಮಾಗಳನ್ನು ಮಾತ್ರ ಮಾಡುತ್ತೇವೆ, ಕನ್ನಡ ಸಿನಿಮಾ ನೋಡಲಿಲ್ಲ ಎಂದರೂ ನಾನು ಇಲ್ಲಿಂದ ಬೇರೆ ಕಡೆ ಹೋಗಲ್ಲ. ನೀವು ಆಶೀರ್ವಾದ ಮಾಡಿದ್ದರಿಂದಲೇ ತೋಟ, ಹಸು ಮಾಡಿಕೊಂಡಿದ್ದೇವೆ, ಕನ್ನಡ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡಲ್ಲ, ನಮಗೆ ಬೇರೆ ಏನೂ ಗೊತ್ತಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+