Darshan Thoogudeepa: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್?

ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳುತ್ತಿದ್ದು, ಬಳ್ಳಾರಿ ಜೈಲಿನಲ್ಲಿ ಪ್ರತಿದಿನ ಟಾಯ್ಲೆಟ್ ತೊಳೆದು ಕಸ ಗುಡಿಸುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹಿಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಇವತ್ತು ರಿಲೀಸ್ ಆಗ್ತಾರೆ & ನಾಳೆ ರಿಲೀಸ್ ಆಗ್ತಾರೆ ಅಂತಾ ಕೋಟಿ, ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ರೇಣುಕಾಸ್ವಾಮಿ ಕೊಲೆಯ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ತಪ್ಪು ಇಲ್ಲ ಎಂಬ ವಿಚಾರ ಇದೀಗ ಬಯಲಾಗಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ನಾಳೆಯೇ ಬಳ್ಳಾರಿ ಜೈಲಿನಿಂದ ರಿಲೀಸ್?...

ಹೌದು, ನಟ ದರ್ಶನ್ ತೂಗುದೀಪ್ ಜೈಲಿನಿಂದ ಹೊರಗೆ ಬರಲು ಬಲವಾದ ಸಾಕ್ಷ್ಯ ಇದೀಗ ಸಿಗುತ್ತಿದೆ ಎಂಬ ಮಾತು ಕೇಳಿಬಂದಿದೆ. ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ವಿರುದ್ಧ ಕುತಂತ್ರ ನಡೆದಿದೆ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದರು. ಈ ಸಮಯದಲ್ಲಿ ಮುನಿರತ್ನಂ ನಾಯ್ಡು ಅವರ ಅಳಿಯನ ಹೆಸರು ಕೂಡ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ ಎಂಟ್ರಿ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಮಾಡಿರುವುದು ದರ್ಶನ್ ತೂಗುದೀಪ್ ಅಲ್ಲ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಅವರ ಅಳಿಯನ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ದರ್ಶನ್ ತೂಗುದೀಪ್ ನಾಳೆಯೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ...

Darshan Thoogudeepa May Get Relief In Renukaswamy Matter

ದರ್ಶನ್ ತೂಗುದೀಪ್ ನಾಳೆಯೇ ರಿಲೀಸ್?

ರೇಣುಕಾಸ್ವಾಮಿ ಒಬ್ಬ ಕಾಮುಕ, ಹೀಗಾಗಿ ದರ್ಶನ್ ತೂಗುದೀಪ್ ಮಾಡಿದ್ದು ಸರಿ ಅಂತಾ ಇಷ್ಟು ದಿನಗಳ ಕಾಲ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ತಾ ಇದ್ದರು. ಹೀಗಿದ್ದಾಗ ದಿಢೀರ್ ದರ್ಶನ್ ತೂಗುದೀಪ್ ಕೊಲೆ ಮಾಡಿಲ್ಲ, ಮೋಸ ಆಗುತ್ತಿದೆ ಎಂಬ ಮಾತನ್ನೂ ದರ್ಶನ್ ತೂಗುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗೆಲ್ಲ ಕೈಮೀರಿ ಹೋಗಿರುವ ಸಮಯದಲ್ಲೇ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಅವರ ಅಳಿಯ & ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಮೂಲದ ದೀಪಕ್ ಮನೋಹರ್ ನಾಯ್ಡು ಕೈವಾಡ ದೊಡ್ಡದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ, ದರ್ಶನ್ ತೂಗುದೀಪ್ ನಾಳೆಯೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ...

ಡಿ-ಬಾಸ್ ಜೀವನದಲ್ಲಿ ಹಿಂಗೆಲ್ಲಾ ಆಯ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ಎಂಬ ಬಿರುದು ಪಡೆದಿದ್ರು ನಟ ದರ್ಶನ್ ತೂಗುದೀಪ್. ಇಂತಿಪ್ಪ ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಕುರಿತು ಸಂಚಲನ ಸಷ್ಟಿ ಮಾಡುವ ಸುದ್ದಿ ಇದೀಗ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಬಗ್ಗೆ ಸುದ್ದಿ ಓಡಾಡುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜಾನಾ? ಎಂಬ ಪ್ರಶ್ನೆ ಇದೀಗ ಡಿ-ಬಾಸ್ ಅಲಿಯಾಸ್ ನಟ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಕಾಡುತ್ತಿದೆ.

ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಕೈವಾಡ ಇಲ್ಲವೆಂದರೆ ನಾಳೆಯೇ ರಿಲೀಸ್ ಆಗಿ ಬರಲಿದ್ದಾರೆ ಅಂತಾ ಕೆಲವರು ಸುಳ್ಳು ಸುದ್ದಿ ಹಾಕುತ್ತಿದ್ದಾರೆ. ಹೀಗೆ ದರ್ಶನ್ ತೂಗುದೀಪ್ ಅವರ ಪಾತ್ರ ಇಲ್ಲ ಅಂದರೂ ಕೋರ್ಟ್ ಆದೇಶ ಬರುವ ತನಕವೂ ಕಾಯಬೇಕಿದೆ. ಆದರೆ ಇದೇ ಸಮಯದಲ್ಲಿ ಆರ್‌ಆರ್ ನಗರ ಶಾಸಕ ಮುನಿರತ್ನಂ ನಾಯ್ಡು ತಂಗಿ ಮಗ ಈ ಕೊಲೆಯಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿಸಿದ್ದು, ಪೊಲೀಸರು ಈ ಬಗ್ಗೆ ಭಾರಿ ಗಂಭೀರ ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಟಿವಿ ಸಿಕ್ಕರೂ ದರ್ಶನ್ ಪರದಾಟ!

ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೋದ ನಂತರ ಸ್ಥಿತಿ ಕೈಮೀರಿ ಹೋಗಿದೆ. ಬಳ್ಳಾರಿ ಜೈಲಿನ ಬಿಸಿಲು, ಒಂಟಿತನ, ಬಳ್ಳಾರಿಯ ಊಟ ಈಗ ನಟ ದರ್ಶನ್ ತೂಗುದೀಪ್‌ಗೆ ಬಿಲ್‌ಕುಲ್ ಹಿಡಿಸುತ್ತಿಲ್ಲ. ಇಂತಹ ಸಮಯದಲ್ಲಿ ನನಗೆ ಟಿವಿ ಬೇಕು & ನ್ಯೂಸ್ ನೋಡಬೇಕು ಅಂತಾ ಹಠ ಹಿಡಿದಿದ್ದರಂತೆ ದರ್ಶನ್ ತೂಗುದೀಪ್. ಈ ವಿಚಾರಕ್ಕೆ ಮಾನ್ಯ ನ್ಯಾಯಾಲಯದ ಬಳಿ ಕೂಡ ದರ್ಶನ್ ತೂಗುದೀಪ ಮನವಿ ಮಾಡಿದ್ದರು. ಕೊನೆಗೂ ಟಿವಿ ಸಿಕ್ಕಿದ್ದು, ದರ್ಶನ್ ತೂಗುದೀಪ್ ಇರುವ ಬಳ್ಳಾರಿ ಜೈಲಿನ ಕೋಣೆಗೆ ಟಿವಿ ಫಿಕ್ಸ್ ಮಾಡಿ ಹೋಗಿದ್ದಾರೆ ಅಧಿಕಾರಿಗಳು. ಹೀಗಿದ್ದರೂ, 'ಲ್ಯಾಂಬೋರ್ಗಿನಿ ಉರುಸ್' ಇದ್ದರೂ ತನ್ನದೇ ಸಿನಿಮಾ ನೋಡಲು ಆಗಲ್ಲ ದರ್ಶನ್ ತೂಗುದೀಪ್! ಯಾಕೆ ಗೊತ್ತಾ?

ದರ್ಶನ್ ತೂಗುದೀಪ್ & 'ಕೆಜಿಎಫ್' ಫೈಟ್?

ಸಂಜನಾ ಗಲ್ರಾಣಿ ನೀಡಿರುವ ಅದೊಂದು ಹೇಳಿಕೆ ಇದೀಗ ದೊಡ್ಡ ಸಂಚಲನಕ್ಕೆ ಕಾರಣವೂ ಆಗಿದೆ, ಅಲ್ಲದೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂಜನಾ ಗಲ್ರಾಣಿ ಮಾತು ಕೇಳಿ ಕನ್ನಡಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ನಟಿ ಸಂಜನಾ ಗಲ್ರಾಣಿ ಇತ್ರೀಚೆಗೆ ದರ್ಶನ್ ತೂಗುದೀಪ್ ಬಗ್ಗೆ ಮಾತನಾಡುವ ಸಮಯದಲ್ಲಿ, ದರ್ಶನ್ ತೂಗುದೀಪ್ ಅವರು ಜೈಲಿನ ಸಂಕಷ್ಟದಿಂದ ಹೊರಗೆ ಬಂದು 'ಕೆಜಿಎಫ್' ಮೀರಿಸುವ ಸಿನಿಮಾ ಮಾಡಲಿದ್ದಾರೆ ಎಂದಿದ್ದರು ಸಂಜನಾ. ಇದೇ ಮಾತು ಇದೀಗ ಟ್ರೋಲ್ ಆಗುತ್ತಿದ್ದು, ಸಂಜನಾ ಗಲ್ರಾಣಿ ಮಾತಿಗೆ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ!

'ಕೆಜಿಎಫ್' ರೀತಿಯ ಮತ್ತೊಂದು...

ಕನ್ನಡದಲ್ಲಿ 'ಕೆಜಿಎಫ್' ರೀತಿಯ ಮತ್ತೊಂದು ಸಿನಿಮಾ ಬರೋದಕ್ಕೆ ಸಾಧ್ಯ ಇಲ್ಲ, ಆದರೆ ಇಲ್ಲಿ ಕೆಲವರು ಓಲೈಕೆ ಮಾತಿಗೆ 'ಕೆಜಿಎಫ್' ಸಿನಿಮಾ ಮುಂದೆ ತರುತ್ತಿದ್ದಾರೆ. ಆದರೆ ಇದು ಮಾತಿಗಷ್ಟೇ ಚಂದ ಅಂತಾ ಹೇಳ್ತಿದ್ದಾರೆ ನೆಟ್ಟಿಗರು. ಅಲ್ಲದೆ ಇಂತಹ ಸಿನಿಮಾ ಮಾಡೋಕೆ ಧಮ್ ಬೇಕೋಲೇ ಅಂತಾನೂ ರೇಗಿಸುತ್ತಿದ್ದಾರೆ. ಹೀಗಾಗಿ ಸಂಜನಾ ಗಲ್ರಾಣಿ ನೀಡಿರುವ ಆ ಹೇಳಿಕೆ ವೈರಲ್ ಆಗುತ್ತಿದ್ದು, ಕನ್ನಡ ನಾಡಿನ ಜನ ಯಶ್ ಪರ ಬ್ಯಾಟ್ ಬೀಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+