Darshan Thoogudeepa: ಬಳ್ಳಾರಿ ಜೈಲಲ್ಲಿ ನಿದ್ದೆ ಬಿಟ್ಟು ಒದ್ದಾಡಿದ ದರ್ಶನ್ ತೂಗುದೀಪ್: ಇದು ರೇಣುಕಾಸ್ವಾಮಿ ಆತ್ಮದ...
ಬಳ್ಳಾರಿ ಜೈಲಿನಲ್ಲಿ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ಜೀವನ ನಡೆಸಲು ಕಷ್ಟವಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ಕೊಡುತ್ತಿರುವ ಊಟ, ಬಳ್ಳಾರಿಯ ವಾತಾವರಣ, ಬಳ್ಳಾರಿಯ ಬಿಸಿಲು, ಬಳ್ಳಾರಿ ಜೈಲಿನಲ್ಲಿ ಎಸಿ ಇಲ್ಲದೆ ನರಳುತ್ತಿರುವ ದಾಸ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಆದರೆ ಇದೆಲ್ಲವನ್ನ ಮೀರಿ ದರ್ಶನ್ ತೂಗುದೀಪ್ ಅವರಿಗೆ ಇದೀಗ ಬಳ್ಳಾರಿ ಜೈಲಿನಲ್ಲಿ ದೊಡ್ಡ ಆಘಾತವೇ ಎದುರಾಗಿದ್ದು, ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಲ್ಲಿ ಇದೀಗ ನಿದ್ದೆ ಬಿಟ್ಟು ಒದ್ದಾಡಿ...
ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಪರದಾಡುತ್ತಿದ್ದ ಕಾರಣ ಹೇಗಾದ್ರೂ ಮಾಡಿ ಅವರಿಗೆ ಜಾಮೀನು ಕೊಡಿಸಿ ಹೊರಗೆ ಕರೆತರಬೇಕು ಎಂಬ ಪ್ರಯತ್ನ ನಡೆಯುತ್ತಿದ್ದವು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲೂ ನಡೆಯುತ್ತಿದ್ದು, ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗಲೇ ದರ್ಶನ್ ತೂಗುದೀಪ್‌ಗೆ ಈಗ ಜಾಮೀನು ಸಿಕ್ಕಿಲ್ಲ. ಇದರ ಜೊತೆಗೆ, ಬಳ್ಳಾರಿ ಜೈಲಲ್ಲಿ ನಿದ್ದೆ ಬಿಟ್ಟು ಒದ್ದಾಡಿದ ದರ್ಶನ್ ತೂಗುದೀಪ್ ಅವರಿಗೆ ರೇಣುಕಾಸ್ವಾಮಿ ಆತ್ಮದ...

ದರ್ಶನ್ ತೂಗುದೀಪ್ ಅವರಿಗೆ ಭಯ?
ಬಳ್ಳಾರಿ ಜೈಲು ಬೆಂಗಳೂರು ಜೈಲಿನ ರೀತಿ ದೊಡ್ಡದಾಗಿ ಇಲ್ಲ, ಹೀಗಾಗಿ ಬಳ್ಳಾರಿ ಜೈಲಿನಲ್ಲಿ ವಾಸ ಮಾಡುವುದು ದರ್ಶನ್ ತೂಗುದೀಪ್ ಅವರಿಗೆ ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ನಟ ದರ್ಶನ್ ಅವರಿಗೆ ಇದೀಗ, ಬಳ್ಳಾರಿ ಜೈಲಲ್ಲಿ ನಿದ್ದೆ ಬರುತ್ತಿಲ್ಲವಂತೆ. ಹೀಗಾಗಿ ಅವರು ನಿದ್ದೆ ಬರದೇ ಬಳ್ಳಾರಿ ಜೈಲಿನಲ್ಲಿ ಒದ್ದಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾಕೆ ಅಂದ್ರೆ ರಾತ್ರಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಮಲಗಿದ್ದಾಗ ರೇಣುಕಾಸ್ವಾಮಿ ಆತ್ಮ ಬಂದು ಕಾಟ ಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದರ್ಶನ್ ತೂಗುದೀಪ್ ಮಲಗಿರುವ ಜೈಲಿನ ಕೋಣೆಯ ಒಳಗೆ ಯಾರೋ ಬಂದು ಸದ್ದನ್ನು ಮಾಡುವಂತೆ ಆಗುತ್ತದೆ, ಹಾಗೇ ದಿಢೀರ್ ಯಾರೋ ಹಿಡಿದು ಎಳೆದಂತೆ ಆಗುತ್ತೆ. ಅಲ್ಲದೆ, ನಟ ದರ್ಶನ್ ತೂಗುದೀಪ್ ಅವರು ಅದೆಷ್ಟೇ ಮಲಗಲು ಪ್ರಯತ್ನ ಮಾಡಿದರೂ ಒಬ್ಬರೇ ಇರುವ ಜೈಲಿನ ಕೋಣೆಯ ಒಳಗಡೆ ನಿದ್ದೆ ಮಾಡುವುದು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ರಾತ್ರಿ ಹೊತ್ತಲ್ಲಿ ದರ್ಶನ್ ತೂಗುದೀಪ್ ಅವರು ನಿದ್ದೆಯನ್ನೇ ಮಾಡದೆ ಒದ್ದಾಡುತ್ತಿದ್ದು, ಬೆಳಗ್ಗೆ ಸಮಯದಲ್ಲಿ ನಿದ್ದೆ ಮಾಡುತ್ತಾರೆ ಎನ್ನಲಾಗಿದೆ.
ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ಫುಲ್ ವೈರಲ್ ಆಗಿತ್ತು. ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications