Darshan Thoogudeepa: ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ನೀಡಲು ಆದೇಶ...

ಕನ್ನಡ ಸಿನಿಮಾ ಇಂಡಸ್ಟ್ರಿ ನಡುಗಿ ಹೋಗುವಂತೆ ಮಾಡಿದ್ದ ರೇಣುಕಾಸ್ವಾಮಿ ಕೊಲೆ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿ, ಜೈಲು ಸೇರಿದ ನಂತರ 7 ತಿಂಗಳಿಂದ ನಿರಂತರ ಸಂಚಲನ ಸೃಷ್ಟಿ ಆಗುತ್ತಿದೆ. ಪರಪ್ಪನ ಅಗ್ರಹಾರ ಜೈಲು & ಬಳ್ಳಾರಿ ಜೈಲಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕಷ್ಟ ಅನುಭವಿಸಿದ್ದರು. ಹೀಗಾಗಿ, ಡಿ-ಬಾಸ್ ಅಭಿಮಾನಿಗಳು ರೇಣುಕಾಸ್ವಾಮಿ ಕೃತ್ಯಕ್ಕೆ ಶಿಕ್ಷೆ ಇಲ್ವಾ? ಕಾಮುಕ ರೇಣುಕಾಸ್ವಾಮಿ... ಅಂತೆಲ್ಲಾ ಆರೋಪ ಮಾಡುತ್ತಿದ್ದಾರೆ.

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸುತ್ತಾ, ತನ್ನ ಅಶ್ಲೀಲ ಫೋಟೋಗಳನ್ನ ಕಳುಹಿಸಿದ್ದ ಆರೋಪ ಕೂಡ ಇದೇ ರೇಣುಕಾಸ್ವಾಮಿ ವಿರುದ್ಧ ಕೇಳಿ ಬಂದಿತ್ತು. ಹೀಗೆ ರೇಣುಕಾಸ್ವಾಮಿ ಕಾಮುಕ ಅಂತಾ ನಿರ್ಧಾರ ಮಾಡಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ & ತಂಡ, ಚಿತ್ರದುರ್ಗದಿಂದ ಆತನನ್ನ ಕರೆಸಿ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ನೀಡಲು ಆದೇಶ...

Darshan Thoogudeepa Incident And Renukaswamy Family Demand

ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ....

ರೇಣುಕಾಸ್ವಾಮಿ ಕೊಲೆ ಕೇಸ್ ಇಂಡಿಯಾದಲ್ಲೇ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಒಬ್ಬ ದೊಡ್ಡ ನಟ ಕೊಲೆ ಕೇಸ್‌ನಲ್ಲಿ ಸಿಲುಕಿ ಜೈಲು ಸೇರಿದ್ದು ಈ ರೀತಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಮತ್ತೊಂದ್ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಕೂಡ ನಿಂತು ಹೋಗಿ ದೊಡ್ಡ ಸಮಸ್ಯೆ ಸೃಷ್ಟಿ ಆಗಿಬಿಟ್ಟಿದೆ. ಹೀಗಿದ್ದಾಗಲೇ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ನೀಡಲು ಆದೇಶ...

ರೇಣುಕಾಸ್ವಾಮಿ ಅವರ ತಂದೆಯಿಂದ ಮನವಿ...

ರೇಣುಕಾಸ್ವಾಮಿ ಕೊಲೆ ಕೇಸ್ ಹಳ್ಳಿಯಿಂದ ದಿಲ್ಲಿ ತನಕ ಸೌಂಡ್ ಮಾಡಿತ್ತು, ಹಾಗೇ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಈ ಕೊಲೆ ಕೇಸ್‌ನಲ್ಲಿ ಭಾಗಿ ಆಗಿರುವ ಆರೋಪದ ಬಗ್ಗೆ ಇಡೀ ಜಗತ್ತಿಗೇ ಗೊತ್ತಾಗಿ ಸಂಚಲನ ಸೃಷ್ಟಿ ಆಗಿತ್ತು.

ಕನ್ನಡ ಸಿನಿಮಾ ರಂಗದ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಈ ಘಟನೆಯಿಂದ ನೊಂದಿದ್ದರು. ಹೀಗಿದ್ದಾಗಲೇ ಈಗ ರೇಣುಕಾಸ್ವಾಮಿ ಅವರ ಅಪ್ಪ ಅರ್ಥಾತ್ ತಂದೆಯವರು, ನಮ್ಮ ಸೊಸೆಗೆ ಅಂದ್ರೆ ಭೀಕರವಾಗಿ ಕೊಲೆ ಆಗಿದ್ದ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿ ಅಂತಾ ಕರ್ನಾಟಕ ಸರ್ಕಾರದ ಎದುರು ಮನವಿ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫೈಟಿಂಗ್!

ಹೀಗೆ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ನೀಡಲು ಆದೇಶ ಕೊಡಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಎದುರು, ರೇಣುಕಾಸ್ವಾಮಿ ಅವರ ತಂದೆ ಮನವಿ ಮಾಡಿದ್ದಾರೆ. ಆದರೆ ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ರೊಚ್ಚಿಗೆದ್ದು, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ನೀಡಲು ಆದೇಶ ಕೊಡಬೇಡಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಯಾಕಂದ್ರೆ ಸರ್ಕಾರಿ ಕೆಲಸ ಕೊಡಲು ರೇಣುಕಾಸ್ವಾಮಿ ಏನು ದೊಡ್ಡ ಸಾಧನೆ ಮಾಡಿಲ್ಲ ಅಂತಾ ಕೂಡ ಹೇಳ್ತಾ ಇದ್ದಾರೆ. ಈ ಮೂಲಕ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಕೊಡಬೇಕು ಎಂಬ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫೈಟಿಂಗ್ ಶುರು ಆಗಿಬಿಟ್ಟಿದೆ. ಅಲ್ಲದೆ ಪರ & ವಿರೋಧದ ಚರ್ಚೆ ಕೂಡ ಶುರುವಾಗಿದ್ದು, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ಡಿ-ಬಾಸ್ ಅಭಿಮಾನಿಗಳ ಆಸೆ ಏನು?

ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ದಾಖಲೆ ಬರೆದು, ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ಅವರ ಜರ್ನಿ 'ಮೆಜೆಸ್ಟಿಕ್' ಮೂಲಕ ಶುರುವಾಗಿತ್ತು. ನಂತರ ಕರಿಯ, ಕಲಾಸಿಪಾಳ್ಯ, ದತ್ತ ಹೀಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿ ಮಿಂಚಿದರು. ಕಳೆದ ವರ್ಷ ಇದೇ ಸಮಯದಲ್ಲಿ ಬಂದ 'ಕಾಟೇರ' ಇಡೀ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಹೊಸ ದಾಖಲೆಯನ್ನ ಬರದಿತ್ತು. ಹೀಗಿದ್ದಾಗಲೇ ಮತ್ತೆ ಅದೇ ರೀತಿ ತಮ್ಮ ನೆಚ್ಚಿನ ನಟ ಮಿಂಚಲಿ, ಅದ್ಧೂರಿ ಸಿನಿಮಾಗಳನ್ನ ನೀಡಲಿ ಅನ್ನೋದೆ ಅಭಿಮಾನಿಗಳ ಆಸೆಯಾಗಿದೆ.

ಪವಿತ್ರಾ ಗೌಡಗೆ ಪರದಾಡುವ ಸ್ಥಿತಿ?

ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದೀಗ ಮತ್ತೊಂದು ಸಮಸ್ಯೆ ಸುಳಿಗೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸುಪ್ರೀಕೋರ್ಟ್‌ಗೆ ಕರ್ನಾಟಕ ಪೊಲೀಸರು ಅರ್ಜಿ ಹಾಕಿದ್ದು, ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಮಾಡಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಭಾರಿ ಗಮನ ಸೆಳೆದಿದೆ ರೇಣುಕಾಸ್ವಾಮಿ ಕೊಲೆ ಕೇಸ್. ಪವಿತ್ರಾ ಗೌಡ ಕನ್ನಡ ಸಿನಿಮಾ ರಂಗದಲ್ಲಿ ಸಾಲುಸಾಲು ಸೋಲು ಕಂಡಿದ್ದರು. ಹೀಗಿದ್ದಾಗಲೇ 2014ರ ಬುಲ್ ಬುಲ್ ಸಿನಿಮಾದಲ್ಲಿ ತನಗೆ ಹೀರೋಯಿನ್ ಆಗಿ ನಟಿಸಲು ಚಾನ್ಸ್ ಕೊಡಿ ಅಂತ ಪವಿತ್ರಾ ಗೌಡ, ಡಿ-ಬಾಸ್ ದರ್ಶನ್ ತೂಗುದೀಪ್‌ರ ಎದುರು ಮನವಿ ಮಾಡಿದ್ದರಂತೆ. ಹೀಗೆ ಶುರುವಾಗಿತ್ತು ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸ್ನೇಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+