Darshan Thoogudeepa: ನಗುನಗುತ್ತಾ ಪರಪ್ಪನ ಅಗ್ರಹಾರ ಜೈಲಿಂದ ಹೊರ ಬಂದ ಡಿ-ಬಾಸ್ ಗೆಳತಿ ಪವಿತ್ರಾ ಗೌಡ ಮಾಡಿದ್ದೇನು?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ, ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾ ಗೌಡ ಜೈಲು ಹಕ್ಕಿ ಎಂಬ ಪಟ್ಟ ಕಳಚಿದ್ದಾರೆ. ಈ ಮೂಲಕ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಹೀಗಿದ್ದಾಗಲೇ, ನಗುನಗುತ್ತಾ ಪರಪ್ಪನ ಅಗ್ರಹಾರ ಜೈಲಿಂದ ಹೊರ ಬಂದ ಡಿ-ಬಾಸ್ ಗೆಳತಿ ಪವಿತ್ರಾ ಗೌಡ ಮೊದಲಿಗೆ ಮಾಡಿದ್ದೇನು?
ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ವ್ಯಕ್ತಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್, ಅಶ್ಲೀಲ ಫೋಟೊ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ, ರೇಣುಕಾಸ್ವಾಮಿಗೆ ಬಲೆ ಬೀಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದು, ಎದೆಗೆ ಬರೆ ಹಾಕಿ & ತಲೆಗೆ ತೂತು ಮಾಡಿ ಬರ್ಬರವಾಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಆರೋಪಿ ನಂಬರ್-1 ಆಗಿದ್ದ ಪವಿತ್ರಾ ಗೌಡ ಜಾಮೀನು ಪಡೆದು ಹೊರಗೆ ಬಂದಿದ್ದು, ನಗುನಗುತ್ತಲೇ ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬಂದ ಡಿ-ಬಾಸ್ ಗೆಳತಿ ಪವಿತ್ರಾ ಗೌಡ ಮಾಡಿದ್ದೇನು?

ಪವಿತ್ರಾ ಗೌಡ ಸಖತ್ ಖುಷ್!
ಹೌದು, ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬಂದ ಡಿ-ಬಾಸ್ ಗೆಳತಿ ಪವಿತ್ರಾ ಗೌಡ ಸಖತ್ ನಗುತ್ತಿದ್ದರು. ನಗುನಗುತ್ತಲೇ ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬಂದ ಪವಿತ್ರಾ ಗೌಡ ಮಾಧ್ಯಮ ಸಿಬ್ಬಂದಿ ನೋಡಿ & ಕ್ಯಾಮರಾ ನೋಡಿ ಪಕಕ್ಕೆ ಹೋದರು. ಹೀಗೆ ಹೋದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಗೇಟ್ ದಾಟಿ ಹೊರಗೆ ಹೋಗಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದರು.
ಪವಿತ್ರಾ ಗೌಡ ಜೊತೆಯಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗೆಳೆಯ ಪ್ರದೋಶ್ ಕೂಡ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದು. ಪವಿತ್ರಾ ಗೌಡ & ಪ್ರದೋಶ್ ಈ ವೇಳೆ ಒಟ್ಟಿಗೆ ರಿಲೀಸ್ ಆಗಿ ಹೊರ ಬಂದರು. ಇನ್ನು ಪವಿತ್ರಾ ಗೌಡ ನೇರವಾಗಿ ರಾಜರಾಜೇಶ್ವರಿ ನಗರದ ತಮ್ಮ ಮನೆಗೆ ಹೋಗಲಿದ್ದು, ಭಾರಿ ಕುತೂಹಲ ಕೆರಳಿದೆ. ನಿನ್ನೆಯಷ್ಟೇ ಪವಿತ್ರಾ ಗೌಡ ತಮ್ಮ ಜಾಮೀನು ಪ್ರಕ್ರಿಯೆ ಮುಗಿಸಿದ್ದರು.
ಡಿ-ಬಾಸ್ & ಪವಿತ್ರಾ ಗೌಡಗೆ ರಿಲೀಫ್!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿರುವ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಆದರೆ ಈ ವಿಚಾರದಲ್ಲಿ ಪವಿತ್ರಾಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೆಲ್ಲಾ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.
ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಘಟ್ಟ ತಲುಪಿದಂತೆ ಆಗಿದೆ.












Click it and Unblock the Notifications