Darshan Thoogudeepa: ರೇಣುಕಾಸ್ವಾಮಿ ಹೆಂಡತಿಗೆ 10 ಕೋಟಿ ರೂಪಾಯಿ ಪರಿಹಾರ, ಸರ್ಕಾರಿ ಕೆಲಸ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡಿಲ್ಲ, ಸಮಾಜದಲ್ಲಿ ಇದ್ದ ಒಬ್ಬ ಕಾಮುಕ ಕ್ರಿಮಿಯನ್ನು ತೊಲಗಿಸಿದ್ದಾರೆ ಅಷ್ಟೇ.... ಅಂದಹಾಗೆ ಈ ರೀತಿ ರೇಣುಕಾಸ್ವಾಮಿ ಭೀಕರ ಕೊಲೆ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡ್ಕೊಂಡಿದ್ದಾರೆ. ರೇಣುಕಾಸ್ವಾಮಿ ಒಬ್ಬ ವಿಕೃತ ಕಾಮುಕ ಎಂಬ ಪಟ್ಟವನ್ನೂ ಕೊಟ್ಟಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಹೆಂಡತಿಗೆ 10 ಕೋಟಿ ರೂಪಾಯಿ ಪರಿಹಾರ, ಸರ್ಕಾರಿ ಕೆಲಸ....

ರೇಣುಕಾಸ್ವಾಮಿ ಕೊಲೆ ಕೇಸ್ ಹಳ್ಳಿಯಿಂದ ದಿಲ್ಲಿ ತನಕ ದೊಡ್ಡ ಸೌಂಡ್ ಮಾಡಿತ್ತು, ಹಾಗೇ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಕೊಲೆ ಕೇಸ್‌ನಲ್ಲಿ ಭಾಗಿ ಆಗಿದ್ದ ಆರೋಪದ ಬಗ್ಗೆ ಇಡೀ ಜಗತ್ತಿಗೇ ಗೊತ್ತಾಗಿ ಸಂಚಲನ ಸೃಷ್ಟಿ ಆಗಿತ್ತು. ಕನ್ನಡ ಸಿನಿಮಾ ರಂಗದ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ಘಟನೆಯಿಂದ ನೊಂದುಕೊಂಡು, ರೇಣುಕಾಸ್ವಾಮಿಗೆ ಹಿಡಿಶಾಪ ಹಾಕಿದ್ದರು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿಗೆ 10 ಕೋಟಿ ರೂಪಾಯಿ ಪರಿಹಾರ, ಸರ್ಕಾರಿ ಕೆಲಸ....

Darshan Thoogudeepa Fans Are Now Saying This About Helping To The Renukaswamy Family

ರೇಣುಕಾಸ್ವಾಮಿ ಹೆಂಡತಿಗೆ 10 ಕೋಟಿ ರೂಪಾಯಿ?

ಹೌದು, ರೇಣುಕಾಸ್ವಾಮಿ ತಂದೆ ಇತ್ತೀಚೆಗೆ ಒಂದು ಬೇಡಿಕೆ ಇಟ್ಟಿದ್ದರು. ಸಿದ್ದರಾಮಯ್ಯ ಅವರ ಸರ್ಕಾರದ ಎದುರು ಭರ್ಜರಿ ಡಿಮ್ಯಾಂಡ್ ಇಟ್ಟಿದ್ದರು ಕೊಲೆ ಆಗಿರುವ ರೇಣುಕಾಸ್ವಾಮಿ ಅಪ್ಪ. ನಮ್ಮ ಸೊಸೆಗೆ ಸರ್ಕಾರಿ ಕೆಲಸ ಮಾಡಿಸಿಕೊಡಿ ದಯವಿಟ್ಟು, ಅಂತಾ ಕಣ್ಣೀರು ಹಾಕಿದ್ದರು ಭೀಕರವಾಗಿ ಕೊಲೆ ಆಗಿರುವ ರೇಣುಕಾಸ್ವಾಮಿ ತಂದೆ. ಆದರೆ ಇದೇ ವಿಚಾರ ಬೆಂಕಿಯ ಕಿಡಿ ಹೊತ್ತಿಸಿ ಬಿಟ್ಟಿದೆ!

10 ಕೋಟಿ ರೂಪಾಯಿ ಜೊತೆ ಅರಮನೆ!

ರೇಣುಕಾಸ್ವಾಮಿಯ ತಂದೆ ಕರ್ನಾಟಕ ಸರ್ಕಾರದ ಎದುರು ತಮ್ಮ ಸೊಸೆಗೆ ಸರ್ಕಾರಿ ಕೆಲಸಕ್ಕೆ ಬೇಡಿಕೆ ಇಟ್ಟ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಕ್ರೋಶದ ಕಹಳೆ ಮೊಳಗಿಸಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸದ ಜೊತೆಗೆ 10 ಕೋಟಿ ರೂಪಾಯಿ ಪರಿಹಾರ ಮಾತ್ರವಲ್ಲ ಅರಮನೆ ವ್ಯವಸ್ಥೆ ಕೂಡ ಮಾಡಿ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್ & ಡಿ-ಬಾಸ್ ಫ್ಯಾನ್ಸ್ ಪೋಸ್ಟ್ ಹಾಕುತ್ತಾ, ತಮ್ಮ ಬೇಸರ ಹೊರ ಹಾಕುತ್ತಿದ್ದಾರೆ.

ಒಟ್ನಲ್ಲಿ ಹೀಗೆ ರೇಣುಕಾಸ್ವಾಮಿ ತಂದೆ & ಅವರ ಕುಟುಂಬ ಇದೀಗ ಅವರ ಮಗನ ಸಾವಿಗೆ, ಸೂಕ್ತ ಪರಿಹಾರ ಬೇಕು ಎಂಬ ಡಿಮ್ಯಾಂಡ್ ಇಡುತ್ತಿದೆ. ಆದರೆ ಈ ಡಿಮ್ಯಾಂಡ್ ನೆರವೇರುತ್ತಾ? ಭೀಕರವಾಗಿ ಕೊಲೆಯಾದ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಕೆಲಸ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ದರ್ಶನ್ ತೂಗುದೀಪ್ ಅವರ ಸಿನಿಮಾ ಯಾವಾಗ?

ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿಹೆಚ್ಚು ಬ್ಯುಸಿಯಾಗಿ ಇರುತ್ತಿದ್ದ ನಟ ಅಂದ್ರೆ ಅದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅನ್ನೋದು ದರ್ಶನ್ ಅವರ ಅಭಿಮಾನಿಗಳ ಮಾತು. ಯಾಕಂದ್ರೆ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗಾಗಿ ನಿರ್ಮಾಪರು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಇದೀಗ ತಾನೆ ಹೊರಗೆ ಬಂದಿರುವ ನಟ ದರ್ಶನ್ ಅವರು ಮತ್ತೆ ಸಿನಿಮಾ ಮಾಡೋದು ಯಾವಾಗ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡ್ತಿದೆ.

ಸಿನಿಮಾ ಶೂಟಿಂಗ್ ಶುರುವಾಗುವುದು ಯಾವಾಗ?

ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸಿನಿಮಾ ಶೂಟಿಂಗ್ ಶುರು ಮಾಡುವುದು ಯಾವಾಗ? ಅನ್ನೋ ಚರ್ಚೆ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎದುರಿಸಿ, ಇದೀಗ ಫ್ರೀ ಬರ್ಡ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮುಂದಿನ ಸಿನಿಮಾ ಶೂಟಿಂಗ್ ಶುರು ಮಾಡ್ತಾರೆ... ಶುರು ಮಾಡ್ತಾರೆ... ಅಂತಾ ಇದೀಗ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅತಿ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+