Munirathna Naidu: ನಾಯ್ಡು ಸಮುದಾಯದ ದರ್ಶನ್ ತೂಗುದೀಪ್ & ಮುನಿರತ್ನಂ ನಾಯ್ಡು ಸ್ನೇಹ ಬೆಳೆದಿದ್ದು ಹೇಗೆ?

ಮುನಿರತ್ನಂ ನಾಯ್ಡು ಜಾತಿ ನಿಂದನೆ ಕೇಸ್‌ನಲ್ಲಿ ಇದೀಗ ಜೈಲು ಸೇರಿದ್ದಾರೆ. ಇದೇ ವೇಳೆ, ದರ್ಶನ್ ತೂಗುದೀಪ್ ಅವರ ವಿಚಾರ ಕೂಡ ಪ್ರಸ್ತಾಪ ಆಗಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ದರ್ಶನ್ ತೂಗುದೀಪ್ ವಿರುದ್ಧ ಕುತಂತ್ರ ನಡೆದಿದೆ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದರು. ಈ ಸಮಯದಲ್ಲಿ ಮುನಿರತ್ನಂ ನಾಯ್ಡು ಅವರ ಅಳಿಯನ ಹೆಸರು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಂಟ್ರಿ ಆಗಿದೆ. ಹಾಗಾದ್ರೆ ನಾಯ್ಡು ಸಮುದಾಯಕ್ಕೆ ಸೇರಿದ ದರ್ಶನ್ ತೂಗುದೀಪ್ ಅವರು & ಮುನಿರತ್ನಂ ನಾಯ್ಡು ಮೊದಲು ಭೇಟಿ ಮಾಡಿದ್ದು ಹೇಗೆ?

ನಟ ದರ್ಶನ್ ತೂಗುದೀಪ್ ತಮ್ಮ ಜೀವನದಲ್ಲಿ ಮಾಡಿಕೊಂಡ ಎಡವಟ್ಟು ಈಗ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದೆ ಅಂತಾ ಅಭಿಮಾನಿಗಳು ಅಳುತ್ತಿದ್ದಾರೆ. ಹೀಗಿದ್ದಾಗ ಅತ್ತ ಮತ್ತೊಂದು ಚರ್ಚೆ ಶುರುವಾಗಿದ್ದು, ನಾಯ್ಡು ಸಮುದಾಯಕ್ಕೆ ಸೇರಿದ ದರ್ಶನ್ ತೂಗುದೀಪ್ ಅವರು & ಮುನಿರತ್ನಂ ನಾಯ್ಡು ಮೊದಲು ಭೇಟಿ ಮಾಡಿದ್ದು ಹೇಗೆ? ಈ ಇಬ್ಬರ ಸಂಬಂಧ ಇಷ್ಟು ಗಟ್ಟಿಯಾಗಿದ್ದು ಹೇಗೆ? ಅನ್ನೋ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಜನರು ಕೇಳುತ್ತಿದ್ದು, ಇಬ್ಬರೂ ಭೇಟಿ ಆಗಿದ್ದು...

Darshan Thoogudeepa And Munirathna Naidu Friendship

ದರ್ಶನ್ & ಮುನಿರತ್ನಂ ನಾಯ್ಡು...

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ಎಂಬ ಬಿರುದು ಪಡೆದಿದ್ರು ನಟ ದರ್ಶನ್ ತೂಗುದೀಪ್. ಇಂತಿಪ್ಪ ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಕುರಿತು ಸಂಚಲನ ಸಷ್ಟಿ ಮಾಡುವ ಸುದ್ದಿ ಇದೀಗ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ಬಗ್ಗೆ ಸುದ್ದಿ ಓಡಾಡುತ್ತಿದೆ. ಇದಕ್ಕೆಲ್ಲಾ ಕಾರಣ ಆಗಿರುವುದು ಮುನಿರತ್ನಂ ನಾಯ್ಡು ಅವರ ತಂಗಿ ಮಗನ ಹೆಸರು ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖವಾಗಿ ಓಡಾಡುತ್ತಿರುವುದು. ಹಾಗಾದರೆ ದರ್ಶನ್ ತೂಗುದೀಪ್ & ಮುನಿರತ್ನಂ ನಾಯ್ಡು ಸಂಬಂಧ ಹೇಗಿತ್ತು? ಇಬ್ಬರ ಸ್ನೇಹ ಬೆಳೆದಿದ್ದು ಹೇಗೆ? ಮುಂದೆ ಓದಿ.

'ಆಂಟಿ ಪ್ರೀತ್ಸೆ' ಸಿನಿಮಾ ಮೂಲಕ...

ಮೊದಲೇ ಹೇಳಿದಂತೆ ನಾಯ್ಡು ಸಮುದಾಯಕ್ಕೆ ಸೇರಿದ ದರ್ಶನ್ ತೂಗುದೀಪ್ & ಮುನಿರತ್ನಂ ನಾಯ್ಡು ಅವರು ಈ ಹಿಂದಿನಿಂದ ಪರಿಚಿತರೇನಲ್ಲ. ಆದರೆ 23 ವರ್ಷಗಳ ಹಿಂದೆ ಇಬ್ಬರೂ ಆತ್ಮೀಯ ಸ್ನೇಹಿತರಾದರು. ಅದು ಹೇಗೆ ಅಂದ್ರೆ 'ಆಂಟಿ ಪ್ರೀತ್ಸೆ' ಸಿನಿಮಾದಲ್ಲಿ ಅವಕಾಶನ ಕೊಡಿ ಅಂತಾ ದರ್ಶನ್ ತೂಗುದೀಪ್ ಕೇಳಿದ್ದರಂತೆ. ಆದರೆ ಆ ಸಮಯದಲ್ಲಿ 'ಆಂಟಿ ಪ್ರೀತ್ಸೆ' ಸಿನಿಮಾಗೆ ನಟರ ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಹೀಗಾಗಿ ದರ್ಶನ್ ತೂಗುದೀಪ್ ಅವರಿಗೆ ಆ ಸಮಯದಲ್ಲಿ ಮುನಿರತ್ನಂ ನಾಯ್ಡು ದುಡ್ಡು ಹಾಕಿದ್ದ ಸಿನಿಮಾದಲ್ಲಿ ಚಾನ್ಸ್ ಸಿಗಲಿಲ್ಲ ಎಂಬ ವಿಚಾರವನ್ನ ಖುದ್ದು ದರ್ಶನ್ ಹೇಳಿದ್ದರು.

'ಆಂಟಿ ಪ್ರೀತ್ಸೆ' ಸಿನಿಮಾದಲ್ಲಿ ಮಿಸ್ ಆಗಿದ್ದ ಚಾನ್ಸ್ ಮುಂದೆ ದೊಡ್ಡದಾಗಿ ಸಿಕ್ಕು ಬಿಟ್ಟಿತ್ತು. 'ಕುರುಕ್ಷೇತ್ರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ದರ್ಶನ್ ತೂಗುದೀಪ್ ಹಾಗೂ ನಿರ್ಮಾಪಕ ಮುನಿರತ್ನಂ ನಾಯ್ಡು ಒಟ್ಟಿಗೆ ಕೆಲಸ ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮುನಿರತ್ನಂ ನಾಯ್ಡು ಅವರ ಸಹೋದರಿ ಮಗನ ಹೆಸರು ಪ್ರಮುಖವಾಗಿ ಆರೋಪಿ ಸ್ಥಾನದಲ್ಲಿ ಈಗ ಓಡಾಡ್ತಿದ್ದು, ಸಂಚಲನ ಸೃಷ್ಟಿ ಮಾಡಿದೆ. ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆಯ ಶೆಡ್ ಜೊತೆ ಮುನಿರತ್ನಂ ನಾಯ್ಡು ಸಹೋದರಿ ಅವರ ಮಗನ ನಂಟು ಇತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ದರ್ಶನ್ ತೂಗುದೀಪ್‌ಗೆ ನ್ಯಾಯ ಸಿಗಬೇಕು ಅಂತಿದ್ದಾರೆ ದರ್ಶನ್ ತೂಗುದೀಪ್ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+