Darshan Thoogudeepa: ರೇಣುಕಾಸ್ವಾಮಿಯ ಆ ಕಲೆಗಳೇ.. ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟವಾಗ್ತಾವಾ.?
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಇಂದು ದೋಷಾರೋಪ ಪಟ್ಟಿಯನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದು, ಅದರಲ್ಲಿ ಉಲ್ಲೇಖಿಸಿದ ಆ ಕಲೆಗಳ ಸಾಕ್ಷಿಯೇ ದರ್ಶನ್‌ಗೆ ಸಂಕಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳನ್ನು ಜೈಲು ಪಾಲಾಗಿದ್ದು, ಇಂದು (ಸೆಪ್ಟೆಂಬರ್ 04) ಅವರ ವಿರುದ್ಧ ಪೊಲೀಸರು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ (ಚಾರ್ಜ್ ಶೀಟ್) ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3,991 ಪುಟಗಳುಳ್ಳ 07 ಸಂಪುಟಗಳ 10 ಕಡತಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಲಾಗಿದೆ.

ಸಾಕ್ಷಿಗಳ ವಿವರ
* ಪ್ರತ್ಯಕ್ಷ್ಯ ಸಾಕ್ಷಿಗಳು-3
* ಎಫ್‌ಎಸ್‌ಎಲ್/ಸಿಎಫ್‌ಎಸ್‌ಎಲ್ -8
* 161 & 164 - (27 ಜನ 164 ಸಿಆರ್‌ಡಿ ಅಡಿಯಲ್ಲಿನ ಸಾಕ್ಷಿದಾರರು ಸೇರಿದಂತೆ)
* ಪಂಚರು - 59
* ಇತರೆ ಸರ್ಕಾರಿ ಅಧಿಕಾರಿಗಳು (ತಹಶೀಲ್ದಾರ್, ವೈದ್ಯರು, ಆರ್‌ಟಿಓ, ಅಭಿಯಂತರರು)- 08
* ಪೊಲೀಸರು - 56
* ಒಟ್ಟು -231 ಸಾಕ್ಷಿಗಳು
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಬಟ್ಟೆ, ಶೂಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಕೂಡ ಬಂದಿದೆ. ದರ್ಶನ್ ಬಟ್ಟೆ & ಶೂಗಳ ಮೇಲಿರುವ ರಕ್ತದ ಕಲೆಗಳು ಕಂಡುಬಂದಿದ್ದು, ಇದು ರೇಣುಕಾಸ್ವಾಮಿ ರಕ್ತ ಆಗಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೀಖಿಸಲಾಗಿದೆ. ಇದರಿಂದ ನಟ ದರ್ಶನ್‌ಗೆ ಮತ ಮತ್ತಷ್ಟು ಸಂಕಷ್ಟ ಎದುರಾದರೂ ಆಗಬಹುದು ಎಂದು ಹೇಳಲಾಗುತ್ತಿದೆ.
ದರ್ಶನ್‌ಗೆ ಮೀಟರ್ ಆಫ್: ಇನ್ನು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ವಿಚಾರ ತಿಳಿದು ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಪರದಾಡಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಆಗುವ ವಿಚಾರ ತಿಳಿದು ನಿನ್ನೆ ರಾತ್ರಿಯಿಂದ ದರ್ಶನ್ ಊಟ ನಿದ್ದೆ ಬಿಟ್ಟಿದ್ದರಂತೆ. ಇಂದು ದೋಷಾರೋಪ ಪಟ್ಟಿ ಸಲ್ಲಿಕೆ ನಂತರ ಅದರಲ್ಲಿ ಏನಿದೆ ಎನ್ನುವುದನ್ನು ತಿಳಿಯಲು, ತಮ್ಮ ಸೆಲ್ ಬಳಿ ಬಂದ ಸಿಬ್ಬಂದಿಯನ್ನು ದರ್ಶನ್ ಪದೇ ಪದೇ ಮಾತನಾಡಿಸಿದ್ದಾರೆಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications