Bigg Boss: ಶೋಭಾ ಶೆಟ್ಟಿ ಹೊರ ಹೋಗಲು ಶಿಶಿರ್ ಕಾರಣ: ತ್ರಿವಿಕ್ರಮ್-ಗೌತಮಿ ಕೋಡ್ ವರ್ಡ್ ಮಾತಿಗೆ ಕಿಚ್ಚಾ ಕ್ಲಾಸ್
ಬಿಗ್‌ಬಾಸ್ ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಕೋಡ್ ವರ್ಡ್‌ಗಳಲ್ಲಿ ಗೌತಮಿ ಹಾಗೂ ತ್ರಿವಿಕ್ರಮ್ ಮಾತನಾಡಿದ್ದಾರೆ. ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಲು ಶಿಶಿರ್ ಕಾರಣ ಅನ್ನೋ ರೀತಿಯಲ್ಲಿ ಗೌತಮಿ ಹಾಗೂ ತ್ರಿವಿಕ್ರಮ್ ಮಾತನಾಡಿಕೊಂಡಿದ್ದಾರೆ. ಇವರಿಬ್ಬರು ಮಾತನಾಡಿಕೊಂಡ ರೀತಿ ಹೇಗಿತ್ತು ಅನ್ನೋದನ್ನು ನೀವು ಕೇಳಿದರೆ ಅಚ್ಚರಿ ಪಡುವುದು ಗ್ಯಾರಂಟಿ.
ಕಳೆದ ವಾರ ಶೋಭಾ ಶೆಟ್ಟಿ ತಮ್ಮ ಸ್ವಂತ ಇಚ್ಚೆಯಿಂದ ಬಿಗ್‌ಬಾಸ್ ಮನೆಯಿಂದ ಹೊರಗಡೆ ಬರುತ್ತಾರೆ. ಶಿಶಿರ್ ಹಾಗೂ ಐಶ್ವರ್ಯ ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗಬೇಕಿತ್ತು. ಆದರೆ ಶೋಭಾ ಶೆಟ್ಟಿ ಅವರು ಹೊರ ಬಂದಿದ್ದರಿಂದ ಇವರಿಬ್ಬರು ಸೇಫ್ ಆದರು. ಇದರಿಂದೆ ಯಾರಿದ್ದಾರೆ ಅನ್ನೋದನ್ನು ಗೌತಮಿ ಅವರು ತ್ರಿವಿಕ್ರಮ್ ಅವರಿಗೆ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಅದು ಹೇಗೆ ಗೊತ್ತಾ? ಕೋಡ್ ವರ್ಡ್ ಮೂಲಕ.

ಶೋಭಾ ಶಿಶಿರ್ ಮೊದಲಿನಿಂದಲೂ ಸ್ನೇಹಿತರು
ಶಿಶಿರ್ ಹಾಗೂ ಶೋಭಾ ಶೆಟ್ಟಿ ಮಧ್ಯ ಹಳೆಯ ಪರಿಚಯ ಹಾಗೂ ಸ್ನೇಹ ಕೂಡ ಇದೆ. ಶೋಭಾ ಶೆಟ್ಟಿ ಅವರು ಬಿಗ್‌ಬಾಸ್ ಮನೆಗೆ ಬಂದಾಗ ಶಿಶಿರ್ ಅವರು ತುಂಬಾ ಖುಷಿಯಿಂದ ಅವರನ್ನು ಸ್ವಾಗತ ಮಾಡಿಕೊಂಡರು. ಇನ್ನೂ ಶಿಶಿರ್ ಬಾಟಮ್ ಅಲ್ಲಿ ಇದ್ದರೂ ಅಂತ ಆಟ ಕ್ವಿಟ್ ಮಾಡಿದ್ರಾ ಶೋಭಾ? ಶಿಶಿರ್‌ನ ಸೇಫ್ ಮಾಡೋದಕ್ಕೆ ಶೋಭಾ ಶೆಟ್ಟಿ ಔಟ್ ಆದ್ರಾ? ಅನ್ನೋದನ್ನ ನೋಡೋದಾದ್ರೆ
ಕಳೆದ ಸೂಪರ್ ಸಂಡೆ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಸೇಫ್ ಆಗಿದ್ದರೂ ನಾನು ಮನೆಗೆ ಹೋಗಬೇಕು ಅಂತ ಶೋಭಾ ಶೆಟ್ಟಿ ಹಠ ಹಿಡಿಯುತ್ತಾರೆ. ತಾವು ಸೇಫ್ ಅಂತ ಗೊತ್ತಾದ ಮೇಲೆ ಖುಷಿಯಾದ ಶೋಭಾ ಶೆಟ್ಟಿ ಶಿಶಿರ್ ಹಾಗೂ ಐಶ್ವರ್ಯ ಬಾಟಮ್ ಅಲ್ಲಿ ಇರೋದ್ರಿಂದ ದಿಢೀರ್ ಅಂತ ಆಳಲು ಆರಂಭಿಸಿ ಆರೋಗ್ಯ ಸಮಸ್ಯೆಯಿಂದ ಎಂಬ ಕಾರಣ ಕೊಟ್ಟು ಆಚೆ ಹೋಗಬೇಕು ಅಂತ ಕೇಳಿಕೊಳ್ಳುತ್ತಾರೆ.
ಅನಾರೋಗ್ಯ ಕಾರಣ ಹೇಳಿ ಮನೆಯಿಂದ ಹೊರಬಂದಿದ್ದು ಶೋಭಾ
ಇದರಿಂದ ಕೋಪಗೊಂಡ ಕಿಚ್ಚ ಸುದೀಪ್ ಅವರು ಕೂಡ ಮೇನ್ ಡೋರ್ ಅನ್ನು ಓಪನ್ ಮಾಡಿಸಿದರು. ಓಟ್ ಮಾಡಿದ ವೀಕ್ಷಕರಿಗೆ ಕ್ಷಮೆ ಕೇಳಿ ಶೋಭಾ ಶೆಟ್ಟಿ ಮನೆಯಿಂದ ಹೊರ ಹೋಗುತ್ತಾರೆ. ಇನ್ನೂ ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋದ ಮೇಲೆ ಆಸ್ಪತ್ರೆಗೆ ಹೋಗಿ ಟ್ರೀಟ್‌ಮೆಂಟ್ ಕೂಡ ಪಡೆದುಕೊಳ್ತಾರೆ. ಈ ಫೋಟೋವನ್ನು ಶೋಭಾ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ.
ಇನ್ನೂ ಬಿಗ್‌ಬಾಸ್ ಶೋನಲ್ಲಿ ಖಡಕ್ ಕನ್ನಡತಿ ಆಗಿ ಸ್ಪರ್ಧಿಸಿ, ಹುಡುಕಿ ಬಂದ ಅವಕಾಶವನ್ನು ಇಷ್ಟೊಂದು ಸುಲಭವಾಗಿ ಬಿಟ್ಟು ಕೊಟ್ರಾ ಶೋಭಾ? ಬಿಗ್‌ಬಾಸ್ ಸೇಫ್ ಅಂದರೂ ಹೊರಹೋಗಲು ನಿರ್ಧಾರ ಮಾಡಿದ್ದು ಯಾಕೆ? ಫೈನಲ್ ಅಲ್ಲಿ ಐಶ್ವರ್ಯ ಹಾಗೂ ಶಿಶಿರ್ ಇದ್ದಿದ್ದಕ್ಕೆ ಹೀಗೆ ಮಾಡಿದ್ರಾ? ಒಂದು ವೇಳೆ ಶಿಶಿರ್ ಇಲ್ದೇ ಇದ್ದಿದ್ದರೆ ಈ ನಿರ್ಧಾರ ತೆಗೆದುಕೊಳ್ತಾಯಿದ್ರಾ?
ಶಿಶಿರ್ ಸೇವ್ ಮಾಡಿದರೆ ಶೋಭಾಗೆ ಸಿಗೋದೇನು?
ಶಿಶಿರ್ ಹಾಗೂ ಶೋಭಾ ಒಳ್ಳೆಯ ಸ್ನೇಹಿತರು. ಆದರೆ ಶಿಶಿರ್‌ನ ಸೇಫ್ ಮಾಡಿದರೆ ಶೋಭಾ ಶೆಟ್ಟಿಗೆ ಸಿಗೋದಾದ್ರು ಏನು? ಅನ್ನೋದನ್ನು ಗೌತಮಿ, ತ್ರಿವಿಕ್ರಮ್ ಅವರು ಕೋಡ್ ವರ್ಡ್ ಮೂಲಕ ಮಾತನಾಡಿಕೊಂಡಿದ್ದಾರೆ. ಇದನ್ನು ಸಾಮಾನ್ಯವಾಗಿ ನೋಡುವ ವೀಕ್ಷಕರಿಗೆ ಡಿ ಕೋಟ್ ಮಾಡೋದು ಸ್ವಲ್ಪ ಕಷ್ಟ. ಆದರೆ ಈ ಕೋರ್ಡ್ ವರ್ಡ್ ಮಾತುಕತೆಯನ್ನು ಇಂದು ಸುದೀಪ್ ಬಿಡ್ಸಿ ವಿವರಿಸುತ್ತಾರಾ ಅಂತ ನೋಡಬೇಕು.
ಹೀಗೆ ತುಂಬಾನೇ ಸ್ಟ್ರಾಂಟ್ ಸ್ಪರ್ಧಿಯಾಗಿದ್ದ ಶೋಭಾ ಶೆಟ್ಟಿ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಕಳೆದ ವಾರ ಅವರು ಸೇಫ್ ಆದರೂ ಕೂಡ ತಮ್ಮ ಸ್ವ ಇಚ್ಚೆಯಿಂದ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಅಂತ ತ್ರಿವಿಕ್ರಮ್ ಹಾಗೂ ಗೌತಮಿ ಅವರು ಮಾತನಾಡಿಕೊಂಡಿದ್ದಾರೆ. ಶಿಶಿರ್ ಅವರನ್ನು ಸೇವ್ ಮಾಡೋಕೆ ಅಂತಲೇ ಶೋಭಾ ಈ ನಿರ್ಧಾರ ತೆಗೆದುಕೊಂಡರು ಎಂದು ಅವರಿಬ್ಬರು ಕೋಡ್‌ವರ್ಡ್ ಅಲ್ಲಿ ಮಾತನಾಡಿಕೊಂಡಿದ್ದಾರೆ. ಇಂದು ಎದೆಲ್ಲವು ಕಿಚ್ಚನ ಪಂಚಾಯಿತಿ ಅಲ್ಲಿ ಚರ್ಚೆ ಆಗುತ್ತಾ ಕಾದು ನೋಡಬೇಕಿದೆ.












Click it and Unblock the Notifications