Bigg Boss: ಜಗದೀಶ್‌ಗೆ ಹೆದರಿ ನರಕದ ಮನೆಗೆ ಚಟ್ನಿ ಕಳಿಸಿದ ಬಿಗ್‌ಬಾಸ್...
ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್‌ಬಾಸ್ ಆರಂಭವಾಗಿ ಒಂದು ವಾರ ಪೂರ್ಣಗೊಂಡಿದೆ. ಮೊದಲನೇ ವಾರ ಯಮುನಾ ಶ್ರೀನಿಧಿ ಮನೆಯಿಂದ ಹೊರಬಂದಿದ್ದಾರೆ. ಎರಡನೇ ವಾರ ಆರಂಭವಾಗುತ್ತಿದ್ದಂತೆ ಲಾಯರ್ ಜಗದೀಶ್ ಅವರನ್ನು ಸ್ವರ್ಗದ ಮನೆಯಿಂದ ನರಕದ ಮನೆಗೆ ಕಳುಹಿಸಲಾಗಿದೆ. ನರಕದ ಮನೆಯಲ್ಲಾದರೂ ಜಗದೀಶ್ ಬುದ್ಧಿ ಕಲಿಯುತ್ತಾರೆ ಅಂದುಕೊಂಡಿದ್ದರೆ ಮತ್ತೆ ಅದೇ ಡ್ರಾಮಾ ಶುರುಮಾಡಿದ್ದಾರೆ.
ವಕೀಲ ಜಗದೀಶ್‌ಗೆ ಬಿಗ್‌ಬಾಸ್ ಹೆದರಿಕೊಂಡಿದ್ದಾರಂತೆ. ಹೀಗಂತ ನಾವು ಹೇಳ್ತಾಯಿಲ್ಲ, ಲಾಯರ್ ಜಗದೀಶ್ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಜಗದೀಶ್ ಹೀಗಂದಿದ್ದು ಯಾಕೆ ಗೊತ್ತಾ? ಭಾನುವಾರ ಸ್ವರ್ಗದ ಮನೆಯಿಂದ ಜಗದೀಶ್ ಅವರನ್ನು ನರಕದ ಮನೆಗೆ ಕ್ಯಾಪ್ಟನ್ ಹಂಸ ಕಳುಹಿಸಿದರು. ನರಕದ ಮನೆಯಿಂದ ರಂಜಿತ್ ಅವರನ್ನು ಸ್ವರ್ಗದ ಮನೆಗೆ ಬರಮಾಡಿಕೊಂಡರು.

ಇದರಿಂದಾಗಿ ಜಗದೀಶ್ ಕೋಪವನ್ನು ತಡೆಯೋರೇ ಇರಲಿಲ್ಲ. ನರಕದ ಮನೆಯಲ್ಲಿ ಮಾತ್ರೆ ಬೇಕು, ಅದು ಬೇಕು ಇದು ಬೇಕು ಅಂತ ಕೇಳುತ್ತಾ ಹಂಸ ಅವರನ್ನು ದಿನವಿಡೀ ಜಗದೀಶ್ ಸತಾಯಿಸಿಬಿಟ್ಟರು. ಇನ್ನೂ ನರಕದಲ್ಲಿ ಹಾಯಾಗಿದ್ದ ಸ್ಪರ್ಧಿಗಳು ಜಗದೀಶ್ ಕಾಲುಡುತ್ತಿದ್ದಂತೆ ಅಲರ್ಟ್ ಆಗಿರುವಂತೆ ಕಾಣಿಸುತ್ತಿದೆ.
ಇನ್ನೂ ಕಾಗೆ ಕೂರೋಕು ಟೊಂಗೆ ಮುರಿಯೋಕು ಒಂದೇ ಸಮಯ ಅಂತಾರಲ್ಲ.... ಹಾಗೆ ಜಗದೀಶ್ ನರಕದ ಮನೆಗೆ ಬಂದಾಗಲೇ ಊಟಕ್ಕೆ ಬಿಗ್‌ಬಾಸ್ ಚಟ್ನಿ ಕಳುಹಿಸಿದ್ದರು. ಇದಕ್ಕೆ ನರಕದ ಮನೆ ಸ್ಪರ್ಧಿಗಳು ಆಚ್ಚರಿಗೊಂಡರು. ಈ ವೇಳೆ ಜಗದೀಶ್ 'ಬಿಗ್‌ಬಾಸ್‌ಗೂ ನನ್ ಕಾಟ ತಡ್ಕೊಳೋಕ್ ಆಗಲ್ಲ. ನಾನ್ ಬಂದಿದ್ದಕ್ಕೆ ಹೆದರಿ ಬಿಗ್‌ಬಾಸ್ ಚಟ್ನಿ ಕಳುಹಿಸಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳಿ ನೀವು' ಅಂತ ಡ್ರಾಮಾ ಮಾಡಿದ್ದಾರೆ.

ಚಿಕ್ಕ ವಿಷಯವನ್ನು ದೊಡ್ಡದು ಮಾಡುವ ಜಗದೀಶ್ ಮನೆ ಮಂದಿಗೆಲ್ಲಾ ಬೇಸರವಾಗಿ ಹೋಗಿದ್ದಾರೆ. ಟಾಸ್ಕ್ ವಿಚಾರದಲ್ಲಿ ಮನೆಯ ಸದಸ್ಯರು ಜಗಳವಾಡುತ್ತಿದ್ದರೆ ಮಾತಿಗೆ ಮಾತು ನೀಡಿ ಅದನ್ನು ದೊಡ್ಡದು ಮಾಡಿ ಬಿಗ್‌ಬಾಸ್ ಮನೆಯನ್ನೇ ರಣರಂಗ ಮಾಡಿ ಬಿಟ್ಟಿದ್ದಾರೆ.
ಕೊಡುವ ಟಾಸ್ಕ್ ಅಲ್ಲೂ ಜಗಳ, ಸುಮ್ನಿದ್ದರೂ ಜಗಳ, ಮಾತಾಡಿದ್ರೂ ಜಗಳ, ಮಾತಾಡದೇ ಇದ್ದರೂ ಜಗಳ, ಹೀಗೆ ಎಲ್ಲಾ ವಿಷಯಕ್ಕೂ ಜಗದೀಶ್ ಜಗಳವಾಡುತ್ತಾ ಮನೆಯ ನೆಮ್ಮದಿಯನ್ನು ಹಾಳು ಮಾಡಿದ್ದು ಸುಳ್ಳಲ್ಲ. ಜಗದೀಶ್ ಅವರ ಮಾತಿಗೆ ಮನೆ ರಣರಂಗವಾಗಿದ್ದು, ಅವರಿಂದ ಇನ್ನೂ ಏನೆಲ್ಲಾ ಬಿಗ್‌ಬಾಸ್ ಮನೆಯಲ್ಲಿ ನೋಡಬೇಕಿದೆಯೋ ಏನೋ ಅಂತ ಸ್ಪರ್ಧಿಗಳು ಚಿಂತೆಗೀಡಾಗಿದ್ದಾರೆ.
'ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಿಸುತ್ತೇನೆ' ಜಗದೀಶ್
ಕಳೆದ ವಾರ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಲ್ಲಿಸಿಬಿಡುತ್ತೇನೆ ಅಂತ ಜಗದೀಶ್ ಕ್ಯಾಮರಾ ಮುಂದೆ ನಿಂತುಕೊಂಡು ಹೇಳಿದ್ದರು. ಅಷ್ಟೇ ಅಲ್ಲ, ಬಿಗ್‌ಬಾಸ್‌ನಲ್ಲಿ ಗೆದ್ದರೆ ಸಿಗುವಷ್ಟು ಹಣ ನಂಗೆ ಒಂದು ಕಾಲ್ ಮಾಡಿದರೆ ಸಿಗುತ್ತದೆ. ನಾನು ಮನಸ್ಸು ಮಾಡಿದರೆ ಹೆಲಿಕಾಪ್ಟರ್ ಬೇಕಾದರೂ ತರಿಸಿಕೊಳ್ಳಬಹುದು ಅಂತ ಬುರುಡೆ ಬಿಟ್ಟಿದ್ದರು.
ಈ ಬುರುಡೆ ಮಾತುಗಳಿಗೆ ವಾರದ ಕಾರ್ಯಕ್ರಮದಲ್ಲಿ ಕಿಚ್ಚಾ ಸುದೀಪ್ ಸರಿಯಾಗೇ ಉತ್ತರ ಕೊಟ್ಟರಿದ್ದರು. ಅಷ್ಟಾದರೂ ಧಿಮಾಕು ಕಡಿಮೆ ಮಾಡಿಕೊಳ್ಳದ ಜಗದೀಶ್ ನರಕದ ಮನೆಯಲ್ಲೂ ಮತ್ತೆ ಅದೇ ಡ್ರಾಮವನ್ನೇ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್‌ಗೆ ಬೆದರಿಕೆ ಹಾಕುವುದು, ಮನೆಯ ಇನ್ನಿತರ ಸ್ಪರ್ಧಿಗಳಿಗೆ ಹೆದರಿಸುವುದು ಇದೆಲ್ಲವೂ ಜಗದೀಶ್ ಮುಂದುವರೆಸಿದ್ದಾರೆ. ಇದು ಯಾವ ಹಂತಕ್ಕೆ ಕೊಂಡೊಯ್ಯುತ್ತೋ ಕಾದು ನೋಡಬೇಕಿದೆ.












Click it and Unblock the Notifications