Bigg Boss: ಲೇಯ್ ಗುಗ್ಗು- ರಜತ್ ಹೀಗಂದಿದ್ದು ಯಾರಿಗೆ? ಯಾಕೆ?
ಬಿಗ್‌ಬಾಸ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಇನ್‌ಟ್ರಸ್ಟಿಂಗ್ ಆಗಿದೆ. ಮನೆಯಲ್ಲಿ ಸ್ಪರ್ಧಿಗಳ ನಿಜವಾದ ಬಣ್ಣ ಕಳಚಿ ಬೀಳುತ್ತಿದೆ. ಸುದೀಪ್ ಅದೆಷ್ಟೇ ಬುದ್ಧಿ ಹೇಳಿದರು ಕೆಲ ಸ್ಪರ್ಧಿಗಳಿಗೆ ಅರ್ಥವಾಗುತ್ತಿರುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ದೊಡ್ಮನೆಯಲ್ಲಿ ನಾಮಿನೇಟ್ ಮಾಡಲು ಸ್ಪರ್ಧಿಗಳು ಕೊಡುವ ಕಾರಣಗಳು ಸಿಕ್ಕಾಪಟ್ಟೆ ಸಿಲ್ಲಿಯಾಗಿದ್ದು, ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ಕಳೆದ ದಿನ ಧನ್‌ರಾಜ್ ಅವರು ರಜತ್ ಅವರನ್ನ ನಾಮಿನೇಟ್ ಮಾಡಲು ಕೊಟ್ಟ ಕಾರಣವನ್ನು ಕೇಳಿ ರಜತ್ ರೇಗಾಡಿಬಿಟ್ಟಿದ್ದಾರೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಾದ ಕಾರ್ತಿಕ್, ನಮ್ರತಾ ಗೌಡ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ವಿಶೇಷ ಏನೆಂದರೆ ಒಂದು ಕಾಲದಲ್ಲಿ ಐಶ್ವರ್ಯ ಹಾಗೂ ನಮ್ರತಾ ತುಂಬಾ ತುಂಬಾ ಕ್ಲೋಸ್ ಫ್ರೆಂಡ್ಸ್. ಇದೇ ವೇಳೆ ಮನೆಯ ಸದಸ್ಯರು ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡುವ ಪ್ರಕ್ರಿಯೆ ನಡೆದಿದೆ.

ಐಶ್ವರ್ಯ ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿದರೆ, ಗೌತಮಿ ಮೋಕ್ಷಿತಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹಾಗೇ ಧನ್‌ರಾಜ್ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ನಾಮಿನೇಟ್ ಮಾಡಲು ಧನ್‌ರಾಜ್ ಕೊಟ್ಟ ಕಾರಣ ಕೇಳಿ ರಜತ್ ಮಾತ್ರ ಅಲ್ಲ ವೀಕ್ಷಕರೂ ಕೂಡ ಕೋಪಗೊಂಡಿದ್ದಾರೆ. ಅಷ್ಟಕ್ಕೂ ರಜತ್ ಅವರನ್ನು ನಾಮಿನೇಟ್ ಮಾಡಲು ಕೊಟ್ಟ ಕಾರಣ ಏನು ಗೊತ್ತಾ?
ಧನ್‌ರಾಜ್ ಟೀಂ ನನ್ನಿಂದ ಟಾಸ್ಕ್ ವಿನ್ ಆಯ್ತು ಎಂದು ತ್ರಿವಿಕ್ರಮ್‌ಗೆ ರಜತ್ ಹೇಳಿದರಂತೆ. ಅದನ್ನು ತ್ರಿವಿಕ್ರಮ್ ಧನ್‌ರಾಜ್ ಬಳಿ ಹೇಳಿದರಂತೆ. ಅದಕ್ಕೆ ರಜತ್ ಹಾಗೆ ಹೇಳಿದ್ದು ತಪ್ಪು ಅಂತ ಧನ್‌ರಾಜ್ ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ತ್ರಿವಿಕ್ರಮ್ ಏನೇ ಹೇಳಿರುಬಹುದು ಆದರೆ ಇಲ್ಲಿ ಧನ್‌ರಾಕ್ ಅವರ ಸ್ವಂತಿಕೆ ಎಲ್ಲಿದೆ. ಇನ್ನೊಬ್ಬರ ಮಾತು ಕೇಳಿ ನಾಮಿನೇಟ್ ಮಾಡುವುದಾದರೆ ಧನ್‌ರಾಜ್ ಅವರಿಗೆ ಸ್ವಂತ ಬುದ್ಧಿ ಇಲ್ವಾ? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುತ್ತದೆ. ಅದಕ್ಕಾಗಿ ರಜತ್ ಧನ್‌ರಾಜ್ ವಿರುದ್ಧ ರೇಗಾಡಿದ್ದಾರೆ.
ಯಾವನೋ ಹೇಳಿದ ರೀಸನ್ ಕೊಟ್ಟು ನನ್ನನ್ನ ನಾಮಿನೇಟ್ ಮಾಡಿದಿಯಾ ಗುಗ್ಗು ನನ್ ಮಗ ನೀನು ಎಂದು ರಜತ್ ಧನ್‌ರಾಜ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧನ್‌ರಾಜ್ 'ರಜತ್ ನಿನ್ ಲೆವೆಲ್ ಏನು ಅಂತ ನನಗೆ ಗೊತ್ತಿದೆ' ಎಂದು ಹೇಳುತ್ತಾರೆ. 'ಇದಕ್ಕೆ ನಿನಗೆ ಮಗು ಅಂತ ಹೇಳೋದು' ಎಂದು ರಜತ್ ಬೈಯ್ಯುತ್ತಾರೆ. ಪಾಪು ಅಂತ ಕರೆದಿದ್ದಕ್ಕೆ ಧನ್‌ರಾಜ್ ರಜತ್ ಬಳಿ ಹೋಗಿ ರಜತ್ ಕೆನ್ನೆ ತಟ್ಟುತ್ತಾ ಅಂಕಲ್ ಅಂಕಲ್ ಎಂದು ಕರೆಯುತ್ತಾರೆ.
ಅಲ್ಲಿಗೆ ಸುಮ್ಮನಾಗದೆ ಇಬ್ಬರು ಕೈ ಕೈ ಮಿಲಾಯಿಸುತ್ತಾರೆ. ರಜತ್ ಧನ್‌ರಾಜ್ ಅವರನ್ನು ಪಾಪು ಅಂತ ಕರೆದಿದ್ದಕ್ಕೆ ರಜತ್‌ನನ್ನು ಧನ್‌ರಾಜ್ ಅಂಕಲ್ ಅಂತ ಕರೆಯುವುದರಲ್ಲಿ ತಪ್ಪೇ ಇಲ್ಲ. ಆದರೆ ಧನ್‌ರಾಜ್ ರಜತ್ ಕೆನ್ನೆ ತಟ್ಟಿಕೊಂಡು ಅವರನ್ನು ಜಗಳಕ್ಕೆ ಪ್ರಚೋದನೆ ನೀಡಿದ್ದು ನಿಜಕ್ಕೂ ಸರಿಯಲ್ಲ. ಧನ್‌ರಾಜ್ ಇಂತಹ ಕೆಲಸಗಳನ್ನು ಈ ಹಿಂದೆ ಕೂಡ ಹಲವಾರು ಬಾರಿ ಮಾಡಿದ್ದಾರೆ.
ಹೀಗಾಗಿ ಬಿಗ್‌ಬಾಸ್ ವೀಕ್ಷಕರು ಧನ್‌ರಾಜ್ ನಾಮಿನೇಟ್ ಮಾಡಲು ಕೊಟ್ಟ ಕಾರಣ ಕೇಳಿ ಕೋಪಗೊಂಡಿದ್ದಾರೆ. ಇದಕ್ಕೆ ಸುದೀಪ್ ಅಂತ್ಯ ಹಾಡಲೇಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಜೈಲಿಗೆ ಹೋಗಿ ಬರುವವರು, ಸಿಲ್ಲಿ ಸಿಲ್ಲಿ ವಿಚಾರಕ್ಕೆ ಜಗಳ ಆಡೋದು, ನಾಮಿನೇಟ್ ಮಾಡೋದು ಟಾಸ್ಕ್ ಹಾಗೂ ನಾಮಿನೇಟ್ ಗಂಭೀರತೆಯನ್ನು ಹಾಳು ಮಾಡುತ್ತಿದೆ. ಇದಕ್ಕೆ ವಾರಾಂತ್ಯದಲ್ಲಿ ಸುದೀಪ್ ಅಂತ್ಯ ಹಾಡ್ತಾರಾ ಅನ್ನೋದನ್ನು ಕಾದು ನೊಡಬೇಕಿದೆ.












Click it and Unblock the Notifications