Bigg Boss: 'ನಿಮ್ಮ ಹೆಸರು ಗೊತ್ತಾಗಲಿಲ್ಲ'- ಗೌತಮಿಗೆ ಲಾಯರ್ ಜಗದೀಶ್ ಟಕ್ಕರ್
ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಕಳೆದ ವಾರ ಗೌತಮಿ ಜಾದವ್ ಹಾಗೂ ಧನ್‌ರಾಜ್ ಬಿಗ್‌ಬಾಸ್ ಮನೆಯಿಂದ ಎಲಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳಲ್ಲಿ 7 ಹಾಗೂ 8ನೇ ಸ್ಥಾನಕ್ಕೆ ಬಂದು ಮನೆಯಿಂದ ಹೊರಬಂದಿದ್ದಕ್ಕೆ ಗೌತಮಿ ಜಾದವ್ ಹಾಗೂ ಧನ್‌ರಾಜ್ ಅವರಿಗೆ ಭಾರೀ ದೊಡ್ಡ ಸ್ವಾಗತವೇ ಸಿಕ್ಕಿದೆ. ದೊಡ್ಮನೆಯಿಂದ ಹೊರಬಂದ ಬಳಿಕ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗುತ್ತಿರುವ ಗೌತಮಿಗೆ ಹಳೆಯ ಸ್ಪರ್ಧಿ ಲಾಯರ್ ಗಜದೀಶ್ ಲೈವ್ ಅಲ್ಲಿ ಟಕ್ಕರ್ ಕೊಟ್ಟಿದ್ದಾರೆ. ಹಾಗಾದರೆ ಲಾಯರ್ ಜಗದೀಶ್ ಹೇಳಿದ್ದೇನು?
ಸೋಮವಾರ ಖಾಸಗಿ ವಾಹಿನಿಯೊಂದರಲ್ಲಿ ಗೌತಮಿ ಹಾಗೂ ಧನ್‌ರಾಜ್ ಅವರ ಸಂದರ್ಶನ ನಡೆದಿತ್ತು. ಈ ವೇಳೆ ಕರೆ ಮಾಡಿ ಮಾತನಾಡಿದ ಲಾಯರ್ ಜಗದೀಶ್ ಗೌತಮಿಗೆ ಟಕ್ಕರ್ ಕೊಟ್ಟಿದ್ದಾರೆ. ಮೊದಲು ನಿರೂಪಕಿ ಜೊತೆಗೆ ಮಾತನಾಡಿದ ಜಗದೀಶ್ ನಂತರ ಧನ್‌ರಾಜ್ ಜೊತೆಗೆ ಮಾತನಾಡುತ್ತಾರೆ. 'ಗೆಳೆಯ ನೀನು ತುಂಬಾ ಚೆನ್ನಾಗಿ ಆಡಿದೆ. ಸ್ವಲ್ಪ ದಿನ ಇರಬೇಕಿತ್ತು. ನನಗೆ ತುಂಬಾ ಖುಷಿ ಆಯ್ತು' ಎಂದೆಲ್ಲಾ ಹೇಳುತ್ತಾರೆ.

ನಂತರ ಗೌತಮಿ ಜೊತೆಗೆ ಮಾತನಾಡಲು ಶುರುಮಾಡಿದಾಗ ಜಗದೀಶ್, 'ನಿಮ್ಮ ಹೆಸರು ನನಗೆ ನೆನಪಾಗಿಲ್ಲ. ತುಂಬಾ ದಿನ ಆಯ್ತು ಹೊರ ಬಂದು ಹೀಗಾಗಿ ನನಗೆ ನಿಮ್ಮ ಹೆಸರು ನೆನಪಾಗುತ್ತಿಲ್ಲ' ಎಂದಿದ್ದಾರೆ. ನೇರ ಪ್ರಸಾರದಲ್ಲಿ ಈ ರೀತಿ ಹೇಳುತ್ತಿದ್ದಂತೆ ಗೌತಮಿ ಅವರಿಗೆ ಮುಜುಗರವಾಗಿದೆ. ಹೀಗಾಗಿ ಜಗದೀಶ್ ಅವರೊಂದಿಗೆ ಗೌತಮಿ ಹೆಚ್ಚೇನು ಮಾತನಾಡಲಿಲ್ಲ.
ಹಾಗಾದರೆ ಲಾಯರ್ ಜಗದೀಶ್‌ಗೆ ಗೌತಮಿ ಹೆಸರು ನಿಜವಾಗಲೂ ನೆನಪು ಇರಲಿಲ್ಲವಾ? ನೆನಪಿದ್ದು ಕೂಡ ನೆನಪು ಇಲ್ಲದಂತೆ ನಟನೆ ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ. ಧನ್‌ರಾಜ್ ಜೊತೆಗೆ ಮಾತನಾಡುವಾಗ ಸರಿಯಾಗಿ ಮಾತನಾಡಿದ ಜಗದೀಶ್, ಗೌತಮಿ ಜೊತೆಗೆ ಮಾತನಾಡುವಾಗ ನಿಮ್ಮ ಹೆಸರು ನನಗೆ ನೆನಪಾಗುತ್ತಿಲ್ಲ ಎಂದಿದ್ದಾರೆ. ಇದು ಗೌತಮಿಗೆ ಭಾರೀ ಮುಜುಗರ ತಂದಿದೆ.
ಬಿಗ್‌ಬಾಸ್ ಆಂಟಿ ಅಂಕಲ್ ಲವ್ ಸ್ಟೋರಿ ಟ್ರೋಲ್
ಆಟದ ಉದ್ದಕ್ಕೂ ಗೌತಮಿ ಮಂಜು ಅವರ ಸಹಾಯದೊಂದಿಗೆ ಆಡಿಕೊಂಡು ಬಂದರು ಎನ್ನುವ ಆರೋಪವಿದೆ. ಇದು ಬಿಗ್‌ಬಾಸ್ ವೀಕ್ಷಕರಿಗೆ ತುಂಬಾ ಬೇಸರ ತಂದಿತ್ತು. ಗೌತಮಿ ಮಂಜು ಸಹಾಯ ಪಡೆದು ಆಡಿನೇ ಇಲ್ಲಿವರೆಗೂ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಇದರಿಂದಾಗಿ ಆಂಟಿ-ಅಂಕಲ್ ಲವ್ ಸ್ಟೋರಿ ಎನ್ನುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಗೌತಮಿ ಕೂಡ ನೇರವಾಗಿ ಉತ್ತರ ಕೊಟ್ಟಿದ್ದಾರೆ.
'ನಾನು ಹಾಗೂ ಮಂಜು ಅವರು ತುಂಬಾ ಒಳ್ಳೆಯ ಸ್ನೇಹಿತರು. ಬಿಗ್‌ಬಾಸ್ ಮನೆಯಲ್ಲಿ ಹೇಗೆ ಇದ್ವಿ ಅನ್ನೋದು ಅಲ್ಲಿರುವ ಕ್ಯಾಮರಾಗಳಿಗೆ ತುಂಬಾ ಚೆನ್ನಾಗಿ ಗೊತ್ತು. ಆ ರೀತಿ ಕಂಡು ಬಂದಿದ್ದರೆ ಇಷ್ಟೊತ್ತಿಗಾಗಲೇ ಅದೆಲ್ಲಾ ಹೊರಬರುತ್ತಿತ್ತು. ಇದು ಬಿಟ್ಟು ನನ್ನ ಹಾಗೂ ಅವರ ನಡುವೆ ಏನೂ ಇಲ್ಲ. ಧನ್‌ರಾಜ್ ಹಾಗೂ ಹನುಮಂತ ಹೇಗೆ ತುಂಬಾ ಒಳ್ಳಯ ಸ್ನೇಹಿತರೋ ಹಾಗೇ ನಾನು ಹಾಗೂ ಮಂಜು ಕೂಡ ಒಳ್ಳೆಯ ಸ್ನೇಹಿತರು' ಎಂದು ಹೇಳಿದ್ದಾರೆ.
ನನ್ನ ಮೇಲೆ ನಂಬಿಕೆ ಇದೆ- ಗೌತಮಿ
ನಮ್ಮ ಮನೆಯಲ್ಲಿ ನನ್ನ ಮೇಲೆ ನಂಬಿಕೆ ಇದೆ. ಅವರು ನನ್ನನ್ನು ನಂಬುತ್ತಾರೆ. ನಾನು ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಮುಂದೆ ಕೂಡ ಉಳಿಸಿಕೊಳ್ಳುತ್ತೇನೆ. ಜನ ಹೇಗಿದ್ದರೂ ಮಾತನಾಡುತ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲು ಆಗುವುದಿಲ್ಲ ಎಂದು ಗೌತಮಿ ನೇರವಾಗಿ ಹೇಳಿದ್ದಾರೆ.
ಅಲ್ಲದೆ ಬಿಗ್‌ಬಾಸ್ ಮನೆಯಿಂದ ಮಂಜು ಅವರು ಹೊರ ಬಂದ ಮೇಲೂ ನನ್ನ ಅವರ ನಡುವಿನ ಸ್ನೇಹ ಹೀಗೆ ಮುಂದುವರೆಯುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಯಾರೋ ಮಾತಿಗೆ ನಾನು ತಲೆ ಕಡೆಸಿಕೊಳ್ಳುವುದಿಲ್ಲ. ನನ್ನನ್ನು ನನ್ನ ಮನೆಯವರು ನಂಬುತ್ತಾರೆ, ನನ್ನ ಗಂಡ ನಂಬುತ್ತಾರೆ ನನಗೆ ಅಷ್ಟು ಸಾಕು ಎಂದು ಹೇಳಿದ್ದಾರೆ.












Click it and Unblock the Notifications