Bigg Boss: ರಜತ್ ಮೋಸದ ಆಟಕ್ಕೆ ಹನುಮಂತ ಸೋಲು- ಕೈತಪ್ಪಿತು ಫಿನಾಲೆ ಟಿಕೆಟ್
ಬಿಗ್‌ಬಾಸ್ ಮನೆಯಲ್ಲಿ ಫಿನಾಲೆ ಟಿಕೆಟ್‌ಗಾಗಿ ಆಟ ಆರಂಭವಾಗಿದೆ. ಇದನ್ನು ಗೆಲ್ಲೋಕೆ ಸ್ಪರ್ಧಿಗಳು ಹರಸಾಹಸವೇ ಪಡುತ್ತಿದ್ದಾರೆ. ತಂತ್ರ ಕುತಂತ್ರದಿಂದಾಗಿ ಕೆಲವರಿಗೆ ಫಿನಾಲೆ ಟಿಕೆಟ್ ಕೈ ತಪ್ಪಿದೆ. ಹಾಗಾದರೆ ಯಾರ ಕುತಂತ್ರಕ್ಕೆ ಫಿನಾಲೆ ಟಿಕೆಟ್ ಯಾರ ಕೈ ತಪ್ಪಿದೆ? ಯಾರಿಂದಾಗಿ ಯಾರಿಗೆ ಮೋಸ ಆಗಿದೆ ಎಲ್ಲದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ತಿಳಿಯೋಣ.
ಕಳೆದ ದಿನ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫೈನಲ್ ಟಿಕೆಟ್ ಪಡೆಯುವ ಟಾಸ್ಕ್ ಅನ್ನು ನೀಡಿರುತ್ತಾರೆ. ಈ ಟಾಸ್ಕ್‌ನಲ್ಲಿ ಹನುಮಂತ, ಭವ್ಯಾ, ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಗೂಟದ ಮೇಲೆ ನಿಂತುಕೊಳ್ಳಬೇಕು. ರಜತ್ ಈ ಆಟದ ಮೇಲ್ವಿಚಾರಕರಾಗಿದ್ದರು. ಈ ಆಟದಲ್ಲಿ ರಜತ್ ತ್ರಿವಿಕ್ರಮ್ ಪರವಾಗಿ ಇರುವುದು ಕಂಡು ಬಂದಿದೆ. ಮರಳಿನ ಮೂಟೆಯನ್ನು ಹನುಮಂತಗೆ ಹಾಕಿ ಹನುಮಂತ ಸೋಲಿಗೆ ಕಾರಣರಾಗಿದ್ದಾರೆ ರಜತ್.

ಆಟದ ನಿಯಮವೇನು?
ಗೂಟದ ಮೇಲೆ ನಿಂತುಕೊಳ್ಳುವ ಸ್ಪರ್ಧಿಗಳ ಕೈಯಲ್ಲಿ ಮರಳಿನ ಮೂಟೆಯನ್ನು ಹಾಕಬೇಕು. ಯಾರ ಕೈಗೆ ಮರಳಿನ ಮೂಟೆ ಹಾಕಬೇಕು ಅನ್ನೋದನ್ನು ಗೌತಮಿ, ಚೈತ್ರಾ, ಮಂಜು ಹಾಗೂ ಧನ್‌ರಾಜ್ ನಿರ್ಧಾರ ಮಾಡಬೇಕು. ಆದರೆ ಇವರು ನಿರ್ಧಾರ ಮಾಡಲು ವಿಫಲರಾದಾಗ ಬಿಗ್‌ಬಾಸ್ ಈ ಟಾಸ್ಕ್‌ನ ಮೇಲ್ವಿಚಾರಕರಾದ ರಜತ್ ಅವರಿಗೆ ಮೂಟೆ ಯಾರ ಕೈಗೆ ಹಾಕಬೇಕು ಅನ್ನೋದನ್ನು ನಿರ್ಧರಿಸಿ ಹಾಕಲು ತಿಳಿಸುತ್ತಾರೆ. ಇದಕ್ಕೆ ರಜತ್ ಹೆಚ್ಚು ಮೂಟೆಗಳನ್ನು ಹನುಮಂತ ಕೈಗೆ ಹಾಕುತ್ತಾರೆ. ಇದರಿಂದ ಹನುಮಂತ ಸೋಲುತ್ತಾರೆ.
ತ್ರಿವಿಕ್ರಮ್ ಪರ ರಜತ್ ಬ್ಯಾಟಿಂಗ್
ಮೊದಲಿನಿಂದಲೂ ರಜತ್ ತ್ರಿವಿಕ್ರಮ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಟಾಸ್ಕ್‌ನಲ್ಲೂ ರಜತ್ ಅದನ್ನೇ ಮಾಡಿ ಬಿಟ್ಟರು. ಮರಳಿನ ಮೂಟೆಯನ್ನು ತ್ರಿವಿಕ್ರಮ್ ಗೆ ರಜತ್ ಹಾಕಲಿಲ್ಲ. ಬದಲಾಗಿ ಅವರು ಹನುಮಂತಗೆ ಹಾಕಿದರು.
ಟಾಸ್ಕ್ ಆರಂಭವಾದಾಗಿನಿಂದಲೂ ಮರುಳು ಮೂಟೆ ಹಾಕಬೇಕಿದ್ದ ಮನೆಯ ಸದಸ್ಯರು (ಗೌತಮಿ, ಚೈತ್ರಾ, ಮಂಜು ಹಾಗೂ ಧನ್‌ರಾಜ್) ಹನುಮಂತ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರಿಗೆ (ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ) ಮರಳಿನ ಮೂಟೆ ಹಾಕುತ್ತಿದ್ದರು. ಇದನ್ನು ಸಹಿಸದ ರಜತ್ ಆಗಾಗ 'ಹನುಮಂತ ನಿನಗೆ ಯಾರೂ ಕೂಡ ಮರಳಿನ ಮೂಟೆ ಹಾಕುತ್ತಲೇ ಇಲ್ಲ. ನೀನು ಮನೆಯಲ್ಲಿ ಅಷ್ಟೊಂದು ಫೇವರೇಟ್ ವ್ಯಕ್ತಿನಾ' ಎಂದು ಪ್ರಶ್ನೆ ಮಾಡುತ್ತಲೇ ಇದ್ದರು. ಕೊನೆಗೆ ಬಿಗ್‌ಬಾಸ್ ಈ ಅವಕಾಶವನ್ನು ರಜತ್‌ಗೆ ನೀಡಿದಾಗ ರಜತ್ ಹನುಮಂತನ ಕೈಗೆ ಮರುಳಿನ ಚೀಲವನ್ನು ಹಾಕಿ ಅವರ ಸೋಲಿಗೆ ಕಾರಣರಾದರು.
ಈ ಟಾಸ್ಕ್‌ನಲ್ಲಿ ಮೊದಲು ಭವ್ಯಾ ಮರುಳಿನ ಮೂಟೆ ಹೋರಲಾಗದೆ ಕೆಳಗೆ ಬೀಳುತ್ತಾರೆ. ನಂತರ ಮೋಕ್ಷಿತಾ ಕೂಡ ಕೆಳಗೆ ಬೀಳುತ್ತಾರೆ. ಕೊನೆಯಲ್ಲಿ ಉಳಿದಿದ್ದು ಹನುಮಂತ ಹಾಗೂ ತ್ರಿವಿಕ್ರಮ್. ಇಲ್ಲಿ ಮಂಜು, ಧನ್‌ರಾಜ್ ಹನುಮಂತಗೆ ಸಪೋರ್ಟ್ ಮಾಡ್ತಾರೆ. ಆದರೆ ರಜತ್ ಮಾತ್ರ ಹನುಮಂತಗೆ ಹೆಚ್ಚಿನ ಮೂಟೆ ಹೋರಿಸಿ ಅವರಿಗೆ ಫಿನಾಲೆ ಟಿಕೆಟ್ ಕೈ ತಪ್ಪುವಂತೆ ಮಾಡುತ್ತಾರೆ. ಇಲ್ಲಿ ರಜತ್ ಹನುಮಂತನನ್ನು ಟಾರ್ಗೇಟ್ ಮಾಡಿದ್ರಾ ಅನ್ನೋ ಅನುಮಾನ ಬರೋದು ಮಾತ್ರ ಪಕ್ಕಾ.
ಯಾಕೆಂದರೆ ರಜತ್ ತ್ರಿವಿಕ್ರಮ್ ಅವರ ಕೈಗೆ ಮರುಳಿನ ಮೂಟೆ ಹಾಕುವುದೇ ಇಲ್ಲ. ಹೆಚ್ಚು ಮರುಳಿನ ಮೂಟೆಗಳನ್ನು ಹನುಮಂತಗೆ ಹಾಕುತ್ತಾರೆ. ಇದರ ಭಾರ ಹೋರಲಾಗದೆ ಹನುಮಂತ ಟಾಸ್ಕ್ ಸೋಲುತ್ತಾರೆ. ಇದರಿಂದಾಗಿ ತ್ರಿವಿಕ್ರಮ್ ಗೆದ್ದು ಫಿನಾಲೆ ಟಾಸ್ಕ್ ಆಡಲು ಆಯ್ಕೆ ಆಗುತ್ತಾರೆ. ರಜತ್ ಮಾಡಿದ ಕುತಂತ್ರಕ್ಕೆ ಇಲ್ಲಿ ಹನುಮಂತ ಸೋಲನ್ನು ಅನುಭವಿಸುವಂತಾಯಿತು.
ರಜತ್ ಯಾಕೆ ಹೀಗಾದರು?
ಇಲ್ಲಿ ರಜತ್ ಆಯ್ಕೆ ತ್ರಿವಿಕ್ರಮ್ ಆಗಿರಬೇಕಿತ್ತು ಅನ್ನೋ ಉದ್ದೇಶ ಅಲ್ಲ. ಆದರೆ ಆಟದ ಆರಂಭದಿಂದಲೂ ಹನುಮಂತ ಅವರ ಮೇಲೆ ರಜತ್‌ಗೆ ಕಣ್ಣಿತ್ತು. ಅವರಿಗೆ ಯಾರೂ ಕೂಡ ಮರಳು ಹಾಕದೇ ಇರುವುದನ್ನು ಕಂಡು ಆಗಾಗ ರಜತ್ ಅವರು ಅದನ್ನು ನೆನಪಿಸುತ್ತಲೇ ಇದ್ದರು. ಜೊತೆಗೆ ಅವರಿಗೆ ಈ ಅವಕಾಶವನ್ನು ಬಿಗ್‌ಬಾಸ್ ಕೊಡುತ್ತಾರೆ ಅನ್ನೋದನ್ನು ಅವರು ಊಹಿಸಿರಲಿಲ್ಲ. ಬಿಗ್‌ಬಾಸ್ ಮರುಳು ಚೀಲವನ್ನು ಹಾಕುವ ಪವರ್ ನೀಡಿದ ಕೂಡಲೆ ರಜತ್ ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಇನ್ನೂ ತ್ರಿವಿಕ್ರಮ್ ಅವರು ಫಿಸಿಕಲ್ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಹೆಚ್ಚಾಗಿ ಯಾರ ಬಗ್ಗೆ ಮಾತು, ಜಗಳ ತ್ರಿವಿಕ್ರಮ್ ಅವರಿಂದ ನಡೆದಿಲ್ಲ. ಹೀಗಾಗಿ ಆಟದಲ್ಲಿ ಮುಂದಿರುವ ತ್ರಿವಿಕ್ರಮ್ ಅವರಿಗೆ ರಜತ್ ಒಲವು ತೋರಿದ್ದಾರೆ. ಆದರೆ ಇಲ್ಲಿ ಹನುಮಂತ ಫಿಸಿಕಲ್ ಟಾಸ್ಕ್‌ನಲ್ಲಿ ಆಡಿದ್ದು ಅಷ್ಟಕಷ್ಟೆ. ಹಾಡು, ಅವರ ಮಾತು, ಅವರ ಸರಳತೆಯಿಂದ ಹನುಮಂತ ಬಿಗ್‌ಬಾಸ್ ವೀಕ್ಷಕರ ಮನ ಗೆದ್ದಿದ್ದಾರೆ. ಇಬ್ಬರಲ್ಲೂ ಹೋಲಿಸಿದರೆ ಒಬ್ಬರಲ್ಲಿ ಇಲ್ಲದ ಟ್ಯಾಲೆಂಟ್ ಅನ್ನು ಮತ್ತೊಬ್ಬರು ಹೊಂದಿದ್ದಾರೆ. ಹೀಗಿರುವಾಗ ರಜತ್ ತ್ರಿವಿಕ್ರಮ್ ಅವರನ್ನೇ ಯಾಕೆ ಆಯ್ಕೆ ಮಾಡಿದರು ಅನ್ನೋ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತದಲ್ಲಿ ನಿಯತ್ತಾಗಿ ಆಡಬೇಕಿದ್ದ ಸ್ಪರ್ಧಿಗಳು ಕೊಂಚ ಮೋಸದಿಂದ ಆಟ ಆಟಿ ಗೆಲ್ಲುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಬಿಗ್‌ಬಾಸ್ ವೀಕ್ಷಕರು ಖಂಡಿತವಾಗಿಯೂ ಮತದಾನದ ಮೂಲಕ ಉತ್ತರ ಕೊಡುವುದು ಮಾತ್ರ ಗ್ಯಾರಂಟಿ.












Click it and Unblock the Notifications