Bigg Boss: ಹನುಮಂತನಿಗೆ ಅವಮಾನ ಮಾಡಿ ಕ್ಷಮೆ ಕೇಳಿದ ಹಂಸ
ಬಿಗ್‌ಬಾಸ್ ಮನೆಯಲ್ಲಿ ಈ ಹಿಂದೆ ಯಾರೂ ಕೂಡ ಮಾಡದ ಸಾಧನೆಯನ್ನು ಗಾಯಕ ಹನುಮಂತ ಲಮಾಣಿ ಮಾಡಿದ್ದಾರೆ. 5 ಕೋಟಿಗೂ ಹೆಚ್ಚು ಮತಗಳನ್ನು ಗಳಿಸಿದ ಕುರಿಗಾಯಿ ಹನುಮಂತ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹನುಮಂತ ಟ್ರೋಫಿ ಪಡೆದು ಗೆದ್ದು ಬೀಗಿದ್ದಾರೆ. ಆದರೆ ಹನುಮಂತನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ಜನ ಈಗ ಸೈಲೆಂಟ್ ಆಗಿದ್ದಾರೆ. ಕ್ಷಮೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಹನುಮಂತ ಸಿಂಪತಿ ಕ್ರಿಯೇಟ್ ಮಾಡಿದ್ದಾರೆ, ಸರಳತೆ ನಾಟಕ ಆಡುತ್ತಿದ್ದಾರೆ, ದಲಿತಾ ಎನ್ನುವ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಇಂತೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಈಗ ಹನುಮಂತನ ಭರ್ಜರಿ ಗೆಲುವು ಅದಕ್ಕೆಲ್ಲ ಉತ್ತರ ಕೊಟ್ಟಿದೆ. ಹನುಮಂತನ ಬಗ್ಗೆ ನೆಗೆಟಿವ್ ಮಾತನಾಡಿದ ಮಂದಿ ಈಗ ಹನುಮಂತನಿಗೆ ಸಿಕ್ಕ ಮತಗಳನ್ನು ನೋಡಿ ಗಪ್‌ಚುಪ್ ಆಗಿದ್ದಾರೆ.

ಹೌದು.. ಹನುಮಂತನ ಬಗ್ಗೆ ಇಲ್ಲ ಸಲ್ಲದ ಮಾತು ಹೇಳಿದ್ದ ಹಂಸ ನಾರಾಯಣಸ್ವಾಮಿ ಈಗ ಹನುಮಂತ ಗೆಲುವಿನ ಬಳಿಕ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಹಂಸ ಕ್ಷಮೆ ಕೇಳಿದ್ದು ಯಾಕೆ? ಹಂಸ ಹನುಮಂತನ ಬಗ್ಗೆ ಹೇಳಿದ್ದೇನು? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.
ಹನುಮಂತನಿಗೆ ಬೆಂಬಲ: ಜಾತಿ ಪಟ್ಟ ಕಟ್ಟಿದ ಹಂಸ
ಬಿಗ್‌ಬಾಸ್ ಸ್ಪರ್ಧಿ ಹಂಸ, ಜಾತಿ ಮೀಸಲಾತಿ ಕಾರಣಕ್ಕೆ ಹನುಮಂತನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ 'ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ಜನರಲ್ ಕೆಟಗರಿಯವರು ಎಂದು ಎಷ್ಟೇ ಓದಿ ದಬಾಕಿದ್ರುನು ಕಡೆಗಣಿಸುತ್ತಾರೆ. ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ' ಎಂದು ಹಂಸ ಹೇಳಿದ್ದರು. ಹನುಮಂತ ಒಬ್ಬ ದಲಿತ ಹೀಗಾಗಿ ಆತನಿಗೆ ಬೆಂಬಲ ಹೆಚ್ಚಾಗಿದೆ ಪರೋಕ್ಷವಾಗಿ ಹೇಳಿದ್ದರು. ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಂಸ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು.
ಕ್ಷಮೆ ಕೇಳಿದ ಹಂಸ
ಪ್ರಸ್ತುತ ಹನುಮಂತ ಗೆಲುವಿನ ಬಳಿಕ ಹಂಸ ಅವರು ತಾವು ಮಾತನಾಡಿದ್ದಕ್ಕೆ ಕ್ಷಮೆಯನ್ನು ಕೇಳಿದ್ದಾರೆ. ಹಂಸ ಕ್ಷಮೆ ಕೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ನಾನು ಒಂದು ಚಾನೆಲ್‌ನಲ್ಲಿ ಕೊಟ್ಟ ಸ್ಟೇಟ್‌ಮೆಂಟ್ ತುಂಬಾ ವಿವಾದ ಸೃಷ್ಟಿ ಮಾಡಿದೆ. ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡುತ್ತಿದ್ದಾರೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ದರೆ ಅವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳನ್ನು ಮರೆತುಬಿಡಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ' ಎಂದು ಹಂಸ ಕ್ಷಮೆಯಾಚಿಸಿದ್ದಾರೆ.
ಗೆದ್ದರೂ ಅಹಂಕಾರ ಇಲ್ಲ, ಶೋಕಿ ಇಲ್ಲ
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಗೆದ್ದು ಟ್ರೋಫಿ ಪಡೆದುಕೊಂಡರು. ಹನುಮಂತನ ಸರಳತೆ ಟ್ರೋಫಿ ಪಡೆದುಕೊಂಡಾಗಲೂ ಬದಲಾಗಿರಲಿಲ್ಲ. ಅದೇ ಲುಂಗಿ ಅದೇ ಶರ್ಟು. ಇದು ಹನುಮಂತ ಎಷ್ಟೇ ಬೆಳದರೂ ಕೂಡ ಬದಲಾಗುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹನುಮಂತ ಬಿಗ್‌ಬಾಸ್ ಮನೆಗೆ ಆಗಮಿಸುವಾಗ ಹೇಗೆ ಬಂದರೋ ಟ್ರೋಫಿ ಪಡೆದು ಹೋಗುವಾಗಲೂ ಹಾಗೇ ಇದ್ದರು. ಇದು ಹನುಮಂತನ ಮೇಲಿನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹನುಮಂತನ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರಿಗೆ ಉತ್ತರ ಕೊಟ್ಟಿದೆ.












Click it and Unblock the Notifications