Bigg Boss: ಈ ಬಾರಿ ಬಿಗ್‌ಬಾಸ್ ವಿನ್ನರ್ ನನ್ ಅಳಿಯ ಎಂದ ಚಿನ್ನದ ಮನುಷ್ಯ
ಬಿಗ್‌ಬಾಸ್ ಮನೆಯಿಂದ ಕಳೆದ ವಾರ ಗೋಲ್ಡ್ ಸುರೇಶ್ ಹೊರಬಂದಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಯಾರಿಗೂ ಗೊತ್ತಾಗಿಲ್ಲ. ಇದೀಗ ಸ್ವತ: ಗೋಲ್ಡ್ ಸುರೇಶ್ ಅವರೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಗೋಲ್ಡ್ ಸುರೇಶ್ ಅವರು ತಾವು ಬಿಗ್‌ಬಾಸ್ ಮನೆಯಿಂದ ಏಕಾಏಕಿ ಹೊರಬರಲು ಕಾರಣ ಏನು ಎನ್ನುವುದನ್ನು ಹಂಚಿಕೊಂಡಿದ್ದಾರೆ.
ಗೋಲ್ಡ್ ಸುರೇಶ್ ಒಬ್ಬ ಬ್ಯುಸಿನೆಸ್ ಮ್ಯಾನ್. ಅವರನ್ನು ನಂಬಿಕೊಂಡು ಸುಮಾರು ಜನ ಕೆಲಸ ಮಾಡುತ್ತಿದ್ದಾರೆ. ಸುರೇಶ್ ಅವರು ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ತಮ್ಮ ಎಲ್ಲಾ ಕೆಲಸವನ್ನು ಅವರ ಪತ್ನಿಗೆ ವಹಿಸಿ ಹೋಗಿದ್ದರು. ಇಂಥಹ ಕೆಲಸಗಳನ್ನು ಯಾವುತ್ತೂ ಕೂಡ ಸುರೇಶ್ ಅವರ ಪತ್ನಿ ಮಾಡೇ ಇಲ್ಲ. ಹೀಗಾಗಿ ಇದನ್ನು ನಿಭಾಯಿಸುವುದು ಅವರ ಪತ್ನಿಗೆ ಕಷ್ಟವಾಗಿದೆ. ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರ ಪತ್ನಿಗೆ ಸಾಧ್ಯವಾಗಿಲ್ಲ. ಇದರಿಂದ ತುಂಬಾ ಒತ್ತಡವನ್ನು ಅನುಭವಿಸಿದ್ದಾರೆ ಸುರೇಶ್ ಪತ್ನಿ. ಹೀಗಾಗಿ ನನ್ನ ಪತ್ನಿ ಕುಗ್ಗಿ ಹೋಗಿದ್ದರಿಂದ ನಾನು ಹೊರಗಡೆ ಬರಬೇಕಾಯ್ತು ಎಂದು ಗೋಲ್ಡ್ ಸುರೇಶ್ ಅವರೇ ಹೇಳಿಕೊಂಡಿದ್ದಾರೆ.

ಗೋಲ್ಡ್ ಸುರೇಶ್ ಪ್ರಕಾರ ಬಿಗ್‌ಬಾಸ್ ವಿನ್ನರ್ ಇವರೇ
ಅಲ್ಲದೆ ಬಿಗ್‌ಬಾಸ್ ಮನೆಯ ಕೆಲ ವಿಚಾರಗಳನ್ನು ಗೋಲ್ಡ್ ಸುರೇಶ್ ಅವರು ಹಂಚಿಕೊಂಡಿದ್ದಾರೆ. ಈ ಬಾರಿ ವಿನ್ನರ್ ಯಾರಾಗಲಿದ್ದಾರೆ ಎನ್ನುವುದಕ್ಕೂ ಸುರೇಶ್ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸುರೇಶ್ ಅವರು, 'ಬಿಗ್‌ಬಾಸ್ ಮನೆಯಲ್ಲಿ ನಾವು ದಿನದ 24 ಗಂಟೆ ಇದ್ದು ಪ್ರತಿಯೊಬ್ಬ ಸ್ಪರ್ಧಿಯನ್ನೂ ಹತ್ತಿರದಿಂದ ನೋಡುತ್ತೇವೆ. ಆದರೆ ಹೊರಗಡೆ ಜನ ನೋಡುವುದು ಕೇವಲ ಒಂದುವರೆ ಗಂಟೆ ಮಾತ್ರ. ಹೊರಗಡೆ ಬಂದ ಮೇಲೆ ಜನರ ಒಲವು ಯಾರ ಕಡೆಗೆ ಇದೆ ಹಾಗೂ ಒಳಗಡೆ ನಾನು ನೋಡಿದಂತೆ ಹನುಮಂತ ವಿಜೇತರಾಗುತ್ತಾರೆ' ಎಂದಿದ್ದಾರೆ ಸುರೇಶ್.
ತ್ರಿವಿಕ್ರಮ್ ಹಾಗೂ ಮಂಜು ಬಗ್ಗೆ ಸುರೇಶ್ ಹೇಳಿದ್ದೇನು?
ಜೊತೆಗೆ ತ್ರಿವಿಕ್ರಮ್ ಹಾಗೂ ಮಂಜು ಅವರ ಬಗ್ಗೆ ಕೂಡ ಸುರೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 'ಮಂಜು ಅವರಿಗೆ ಜನರನ್ನು ನಿಭಾಯಿಸಲು ಆಗುವುದಿಲ್ಲ. ಅವರು ಎಲ್ಲರೂ ತಮ್ಮ ಮಾತು ಕೇಳಬೇಕು ಅನ್ನೋ ರೀತಿ ಆಡ್ತಾರೆ. ಆದರೆ ಅದನ್ನು ಸ್ಪರ್ಧಿಗಳು ಒಪ್ಪುವುದಿಲ್ಲ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಮಂಜು ಅವರ ಮಾತು ಅಷ್ಟಕಷ್ಟೆ' ಎಂದು ಸುರೇಶ್ ಹೇಳಿದರು.
ಇನ್ನೂ ತ್ರಿವಿಕ್ರಮ್ ಅವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಾಗೂ ಕೊಟ್ಟ ಮಾತನ್ನು ಉಳಿಸಕೊಳ್ಳುವುದರಲ್ಲೂ ಅಶಕ್ತರು ಎಂದು ಸುರೇಶ್ ಹೇಳಿದ್ದಾರೆ. ಹೀಗಾಗಿ ಇವರಿಬ್ಬರೂ ಕೂಡ ವಿನ್ನರ್ ರೇಸ್‌ನಲ್ಲಿ ಇರಬಹುದು. ಆದರೆ ವಿನ್ ಆಗುವುದು ಡೌಟ್ ಎಂದಿದ್ದಾರೆ ಸುರೇಶ್.
ಹನುಮಂತ ನನ್ನ ಅಳಿಯ- ಸುರೇಶ್
ಅಲ್ಲದೆ ಸುರೇಶ್ ಅವರು ತಮ್ಮ ಅಳಿಯ ಹನುಮಂತನ ಬಗ್ಗೆ ಕೆಲ ವಿಚಾರವನ್ನು ಹೇಳಿಕೊಂಡಿದ್ದಾರೆ. 'ಹನುಮಂತ ತುಂಬಾ ಒಳ್ಳೆಯ ಹುಡುಗ. ಯಾವುತ್ತೂ ಕೂಡ ನಾನು ಅವನ ಮೇಲೆ ರೇಗಾಡಿಲ್ಲ. ಯಾವಾಗಲೂ ಮಾವಾ... ಮಾವಾ... ಅಂತಲೇ ನನ್ನ ಪ್ರೀತಿಯಿಂದ ಮಾತನಾಡಿಸುತ್ತಿದ್ದ. ಕೆಲವೊಮ್ಮೆ ಕೋಪ ಬಂದು ಬೈಯೋಣ ಅನ್ಕೋಳೋ ಹೊತ್ತಲ್ಲಿ ಏನೋ ತರ್ಲೆ ಮಾಡಿ ಕೋಪಾನ ಮರೆಸಿ ಬಿಡುತ್ತಿದ್ದ' ಎಂದು ಸುರೇಶ್ ಹನುಮಂತು ಬಗ್ಗೆ ಸಂತೋಷದಿಂದ ಮಾತನಾಡಿದ್ದಾರೆ.
'ಊಟ ಮಾಡುವಾಗಲೂ ಕರೆಯುತ್ತಿದ್ದ, ಮಲಗುವಾಗಲೂ ಹನುಮಂತ ನನ್ನ ಕರೆಯುತ್ತಿದ್ದ. ಬಿಗ್‌ಬಾಸ್ ಮನೆಯಲ್ಲಿ ನನಗೆ ತುಂಬಾ ಹತ್ತಿರವಾದವರು ಹನುಮಂತ, ಧನ್‌ರಾಜ್ ಹಾಗೂ ಜಗದೀಶ್ ಅವರು' ಎಂದು ಸುರೇಶ್ ಹೇಳಿಕೊಂಡಿದ್ದಾರೆ. ಇನ್ನೂ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ನಾನು ಮೊದಲು ಜಗದೀಶ್ ಅವರಿಗೆ ಕರೆ ಮಾಡಿದ್ದೆ ಎಂದು ಸುರೇಶ್ ಹೇಳಿದ್ದಾರೆ.
ಜಗದೀಶ್ ಅವರಿಗೆ ಕರೆ ಮಾಡಿದಾಗ ನನಗೆ ಅವರು, 'ಹೇಯ್ ಗೋಲ್ಡು' ಅಂತ ಮಾತನಾಡಿದರು. ತಗುಡು ಅಂತ ನಾನು ನಿನಗೆ ಕರೆದೆ ಅಂತನೂ ಹೇಳಿದರು. ತಪ್ಪುಗಳು ಆಗುತ್ತವೆ. ಅವರಿಗೂ ನನ್ನ ಮೇಲೆ ಆರಂಭದಲ್ಲಿ ಕೋಪ ಇತ್ತು. ಗೆಳೆಯರ ನಡುವೆ ದ್ವೇಷ ಕೋಪ ಇರಲ್ಲ. ಏನೇ ಆದರೂ ಕೂಡ ಅದನ್ನು ಕ್ಷಮಿಸಿ ಮುಂದೆ ಒಟ್ಟಿಗೆ ಹೋಗುವುದೇ ಗೆಳೆತನ ಎಂದು ಸುರೇಶ್ ಗೆಳೆಯ ಜಗದೀಶ್ ಬಗ್ಗೆ ಮೆಚ್ಚುಗೆ ಮಾತನಾಡಿದರು.












Click it and Unblock the Notifications