ನಟಿ ಸುಧಾರಾಣಿ ಕೊಲೆಗೆ ಗಂಡನಿಂದಲೇ ಸ್ಕೆಚ್, ಜೀವ ಉಳಿಸಿದ್ದು ಈ ಮಹಾನ್ ನಿರ್ಮಾಪಕಿ! Actress Sudharani
ನಟಿ ಸುಧಾರಾಣಿ ಅವರನ್ನ ನೋಡಿದರೆ ಎಂತಹವರಿಗೂ ಹೊಟ್ಟೆ ಕಿಚ್ಚು ಆಗೇ ಆಗುತ್ತದೆ. ಯಾಕಂದ್ರೆ, ನಟಿ ಸುಧಾರಾಣಿ ಅವರಿಗೆ 50 ವರ್ಷ ವಯಸ್ಸು ದಾಟಿದರೂ ಅವರ ನಟನೆ & ಸೌಂದರ್ಯ ಯಾವುದೇ ಕಾರಣಕ್ಕೂ ಹಿಂದೆ ಉಳಿದಿಲ್ಲ. ಈಗಲೂ ಎಲ್ಲಾ ಪಾತ್ರ ಮಾಡುತ್ತಾ, ಹೊಸ ನಟಿಯರಿಗೆ ಕೂಡ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಆದರೆ, ನಟಿ ಸುಧಾರಾಣಿ ಕೊಲೆಗೆ ಗಂಡನಿಂದಲೇ ಸ್ಕೆಚ್, ಜೀವ ಉಳಿಸಿದ್ದು ಈ ಮಹಾನ್ ನಿರ್ಮಾಪಕಿ ಅನ್ನೋದು ನಿಮಗೆ ಗೊತ್ತೆ?
ನಟಿ ಸುಧಾರಾಣಿ ಅವರು ಈಗ ನಗುತ್ತಿರುವುದನ್ನು ಮಾತ್ರ ನಾವು ನೋಡುತ್ತಿದ್ದೇವೆ. ಆದರೆ ಅವರು ಕಣ್ಣೀರು ಹಾಕಿ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಹೋಗಿದ್ದು ಎಲ್ಲರಿಗೂ ಗೊತ್ತಿಲ್ಲ. ನಟಿ ಸುಧಾರಾಣಿ ಅವರು ಮೊದಲ ಗಂಡ ಕೊಲೆ ಮಾಡುವುದಕ್ಕೂ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ ದೂರದ ಅಮೆರಿಕದಲ್ಲಿ ಹೋಗಿ ಸಂಕಷ್ಟಕ್ಕೆ ಸಿಲುಕಿ ಪರದಾಡಿದ್ದ ನಟಿ ಸುಧಾರಾಣಿ ಅವರನ್ನು ಕನ್ನಡದ ಖ್ಯಾತ ನಿರ್ಮಾಪಕಿ ರಕ್ಷಣೆ ಮಾಡಿದ್ದರು!

ಸುಧಾರಾಣಿ ಸಾಯಿಸಲು ಗಂಡನ ಸ್ಕೆಚ್?
ಹೌದು, ನಟಿ ಸುಧಾರಾಣಿ 1996 ರಲ್ಲಿ ಡಾಕ್ಟರ್ ಒಬ್ಬರನ್ನ ಮದುವೆ ಆಗಿ ಅಮೆರಿಕಗೆ ಶಿಫ್ಟ್ ಆಗಿದ್ದರು. ಆದರೆ ಮೊದಲ ಗಂಡ ಸಿಕ್ಕಾಟಪಟ್ಟೆ ಟಾರ್ಚರ್ ಕೊಡುತ್ತಿದ್ದರಂತೆ. ಅಮೆರಿಕಗೆ ಶಿಫ್ಟ್ ಆದ ನಂತರ ನಟಿ ಸುಧಾರಾಣಿ ಅವರ ಗಂಡ ಈ ರೀತಿ ಟಾರ್ಚರ್ ಕೊಡುತ್ತಿದ್ದ ಕಾರಣ, ಗಂಡನಿಂದಲೇ ಸಾಯುವ ಹಂತಕ್ಕೆ ಹೋಗಿತ್ತಂತೆ ಅವರ ಪರಿಸ್ಥಿತಿ. ಖ್ಯಾತ ವೈದ್ಯನಾಗಿದ ನಟಿ ಸುಧಾರಾಣಿ ಅವರ ಮೊದಲ ಗಂಡ, ನಟಿ ಸುಧಾರಾಣಿ ಅವರಿಗೆ ಚುಚ್ಚಲು ವಿಷದ ಅಥವಾ ಕೆಮಿಕಲ್ ಇಂಜಕ್ಷನ್ ಕೂಡ ರೆಡಿ ಮಾಡಿದ್ದನಂತೆ...
ಪಾರ್ವತಮ್ಮ ರಾಜ್‌ಕುಮಾರ್ ಮಹತ್ವದ ಸಹಾಯ!
ನಟಿ ಸುಧಾರಾಣಿ ಅವರು ತಮ್ಮ ಮೊದಲ ಗಂಡನ ಟಾರ್ಚರ್ ತಡೆಯಲು ಆಗದೆ, ಅಮೆರಿಕದ ಮನೆಯಿಂದ ತಪ್ಪಿಸಿಕೊಂಡಿದ್ದರಂತೆ. ಹೀಗೆ ತಪ್ಪಿಸಿಕೊಂಡ ಅವರು ಪರಿಚಯ ಇದ್ದವರ ಮನೆಗೆ ಹೋಗಿ ಆಶ್ರಯ ಪಡೆದಿದ್ದರಂತೆ. ಆದ್ರೆ ನಟಿ ಸುಧಾರಾಣಿ ಅವರ ಪಾಸ್‌ಪೋರ್ಟ್ ಕಿತ್ತುಕೊಂಡು ಇಟ್ಟುಕೊಂಡಿದ್ದ ಮೊದಲ ಗಂಡ, ನಟಿ ಸುಧಾರಾಣಿ ಭಾರತಕ್ಕೆ ಹೋಗದಂತೆ ಕುತಂತ್ರ ಮಾಡಿ ಆಟ ಆಡಿದ್ದ. ಆದರೆ ಕೊನೆಗೆ ಕನ್ನಡದ ಹೆಮ್ಮೆ & ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ತಮಗೆ ಪರಿಚಯ ಇದ್ದವರ ಸಂಪರ್ಕ ಮಾಡಿ, ಕೊನೆಗೂ ನಟಿ ಸುಧಾರಾಣಿ ಅವರನ್ನ ಸೇಫ್ ಮಾಡಿದ್ದರು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿ ಸುಧಾರಾಣಿ ಅವರು ಭಾರತಕ್ಕೆ ಬರುವಂತೆ ಪಾಸ್‌ಪೋರ್ಟ್ ಸೇರಿ ಹಲವು ಸಹಾಯ ಮಾಡಿದ್ದರಂತೆ.
ಇಷ್ಟೆಲ್ಲಾ ಹಿಂಸೆ ಅನುಭವಿಸುತ್ತಿರುವ ವಿಚಾರ ತಿಳಿದು ಮರಳಿ ಭಾರತಕ್ಕೆ ಕರೆತಂದ ನಂತರ, ಇನ್ನೊಂದು ಮದುವೆ ಆಗಿ ಈಗ ಖುಷಿ ಖುಷಿಯಾಗೇ ಇದ್ದಾರೆ ಸುಧಾರಾಣಿ ಅವರು. 2000ನೇ ಇಸವಿಯಲ್ಲಿ ನಟಿ ಸುಧಾರಾಣಿ ಅವರು 2ನೇ ಮದುವೆ ಆದರು. ಅವರಿಗೆ ಒಬ್ಬರು ಪುತ್ರಿ ಇದ್ದು, 2ನೇ ಮದುವೆ ನಂತರ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಮಿಂಚು ಹರಿಸಿದ ಸುಧಾರಾಣಿ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಅಗಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications