Actress Harshika Poonacha: ನಾವೆಷ್ಟು ಸುರಕ್ಷಿತ? ಬೆಂಗಳೂರಿನ 'ಕರಾಳ ಘಟನೆ'ಯ ಅನುಭವ ಹಂಚಿಕೊಂಡ ನಟಿ
ಬೆಂಗಳೂರು, ಏಪ್ರಿಲ್ 19: ರಾಜಧಾನಿ ಬೆಂಗಳೂರು ಸೇರಿದಂತೆ ಇತ್ತಿಚೆಗೆ ನಡೆಯುತ್ತಿರುವ ಒಂದಷ್ಟು ಘಟನೆಗಳು ನಾಗರಿಕರಿಗೆ, ಮಹಿಳೆಯರಿಗೆ ನಾವೆಷ್ಟು ಸುರಕ್ಷಿತ ಎಂಬ ಬಾವನೆ ಮೂಡುವ ಜೊತೆಗೆ ಭಯವು ಉಂಟಾಗಿದೆ. ಕೊಲೆ, ಹಲ್ಲೆ, ದೌರ್ಜನ್ಯಗಳು ಬೆಳಕಿಗೆ ಬರುತ್ತಿವೆ. ಇದೀಗ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂರ್ಣಚ್ಚ (Harshika Poonacha) ಅವರು ಸಹ ನಾವೆಷ್ಟು ಸುರಕ್ಷಿತ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರೆಸ್ಟೋರೆಂಟ್ ನಲ್ಲಿ ತಮಗಾದ ಭಯಾನಕ ಅನುಭವವನ್ನು ನಟಿ ಹರ್ಷಿಕಾ ಅವರು ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ಪೋಸ್ಟ್‌ನಲ್ಲಿ ಏನಿದೆ?
''ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ ????
ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.
ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ. ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.
ಫ್ರೇಜರ್ ಟೌನ್ ನಲ್ಲಿ ನಡೆದ ಗಲಾಟೆ
ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ 'ಕರಾಮಾ' ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಹತ್ತಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡರು.

ಹರ್ಷಿಕಾ ದಂಪತಿಗೆ ನಿಂದಿಸಿದ ಕಿಡಿಗೇಡಿಗಳು
ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಅದು ಚಲಿಸಿದರೆ ನಮ್ಮನ್ನು ಮುಟ್ಟಬಹುದು (ತಾಕಬಹದು) ಎಂದು ವಾದಿಸಲು ಪ್ರಾರಂಭಿಸಿದರು. ಆದರೆ ನನ್ನ ಪತಿ ಇನ್ನು ಕಾರನ್ನು ಮೂವ್ ಮಾಡಿಲ್ವಲ್ಲ ಸೈಡು ಬಿಡಿ ಎಂದು ಹೇಳಿದರು. ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು.
ಕನ್ನಡಿಗರಿಗೆ ಪಾಠ: ಪತಿ ಮೇಲೆ ಹಲ್ಲೆ ಯತ್ನ
ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಗೆ ಹೊಡೆಯಲು, ಹಲ್ಲೆಗೆ ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು. ಪತಿ ಸಾಮಾನ್ಯವಾಗಿ ತುಂಬಾ ಸಿಟ್ಟಿನ ಸ್ವಭಾವದವರು, ಅವರೇ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು.
ನೋಡ ನೋಡುತ್ತಿದ್ದಂತೆ 2ರಿಂದ 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 - 30 ಸದಸ್ಯರ ಗುಂಪು ಸ್ಥಳದಲ್ಲಿ ಜಮಾಯಿಸಿತು. ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತು, ತಮ್ಮತ್ತ ಎಳೆದುಕೊಳ್ಳಲು ಯತ್ನಿಸಿದರು. ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು ಸರವನ್ನು ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು.
ಚಿನ್ನದ ಸರ ಕೈಗೆ ಸಿಗದಿದ್ದಕ್ಕೆ ಆಕ್ರೋಶ
ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ.
ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಅವರಿಗೆ ಸಮಸ್ಯೆ ಆಗಿತ್ತು. ಅವರು ನೀವು ನಮ್ಮ ಪ್ರದೇಶಕ್ಕೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. ನಾನು ನನ್ನ ಪತಿ ಕನ್ನಡದಲ್ಲಿ ಮಾತನಾಡಿದೆವು. ಅದಕ್ಕೆ ಅವರು 'ಯೇ ಲೋಕಲ್ ಕನ್ನಡ್ ವಾಲಾ ಹೇ' (ಈ ಸ್ಥಳೀಯ ವ್ಯಕ್ತಿಗಳು ಕನ್ನಡ ಜನರು) ಎಂದು ನಿಂದಿಸಿದರು.'' ಎಂದು ನಟಿ ಬರೆದುಕೊಂಡಿದ್ದಾರೆ.
ವಿಡಿಯೋ, ಫೋಟೋ ಪೋಸ್ಟ್
ಜೊತೆಗೆ ಕಳ್ಳತನಕ್ಕೆ ಮುಂದಾದ ವೇಳೆ ಯಾರೆಲ್ಲ ಇದ್ದರು ಎಂಬುವವರ ಫೋಟೋಗಳು, ವಿಡಿಯೋ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಮಹಿಳೆಯರು ಇದ್ದು, ನಾವು ಯಾರು ಬಗ್ಗೆ ಮಾತನಾಡಿಲ್ಲ. ಅವರೇ ಏಕಾಎಕಿ ಬಂದು ಗಲಾಟೆ ಮಾಡಿದ್ದಾರೆ. ಅವರ ಹೆಸರು ಕೇಳಿದರು ಯಾರು ಈ ಬಗ್ಗೆ ಮಾಹಿತಿ ನೀಡಿದಿರುವುದು ವಿಡಿಯೋದಲ್ಲಿ ರೇಕಾರ್ಡ್ ಆಗಿದೆ.
ಸಲೆಬ್ರೆಟಿಗಳಿಗೆ ಈ ರೀತಿ ದಾಳಿ, ಅವರ ಮೇಲೆ ಕಳ್ಳತನಕ್ಕೆ ಮುಂದಾದರೆ ಜನಸಾಮಾನ್ಯ ಗತಿ ಏನು ಎಂಬ ಪ್ರಶ್ನೆಯು ಉದ್ಬವಿಸಿದೆ. ಘಟನೆ ವಿಡಿಯೋ ಎಲ್ಲೆಡೆ ವರೈಲ್ ಆಗುತ್ತಿದೆ. ಹರ್ಷಿಕಾ ಪೂರ್ಣಚ್ಚ ಅವರ ಪೋಸ್ಟ್ ಅನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications