Rashmika Mandanna: ರಶ್ಮಿಕಾ ಮಂದಣ್ಣ ಸಹಾಯಕ್ಕೆ ನಟ ಜೂನಿಯರ್ ಎನ್‌ಟಿಆರ್ & ಹೃತಿಕ್ ರೋಷನ್!
Rashmika Mandanna: ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ವಿಶ್ವದಾದ್ಯಂತ ಅವರ ಅಭಿಮಾನಿಗಳು ಇದ್ದಾರೆ. ರಶ್ಮಿಕಾ ಮಂದಣ್ಣ ಅವರು ಇದೀಗ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಫೇಮಸ್ ಆಗಿದ್ದು ಅಲ್ಲೂ ಮಿಂಚುತ್ತಿದ್ದಾರೆ. ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಟ್ರೋಲ್‌ಗಳಾಗಲಿ ಅಥವಾ ಯಾರಾದರೂ ಟೀಕೆ ಮಾಡಲಿ ಆ ವಿಷಯಗಳ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಇಲ್ಲ. ರಶ್ಮಿಕಾ ಅವರು ಟ್ರೋಲ್‌ಗೆ ಒಳಗಾಗುತ್ತಿರುವ ನಡುವೆಯೇ ಅವರ ಸಹಾಯಕ್ಕೆ ಸ್ಟಾರ್ ನಟರಾದ ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅವರು ಸಹಾಯಕ್ಕೆ ಬಂದಿದ್ದಾರೆ. ಇದು ಯಾವ ರೀತಿಯ ಸಹಾಯ ಈ ಮೂರು ತಾರೆಯರು ಒಂದು ಕಡೆ ಸೇರುತ್ತಿರುವುದು ಯಾವ ಕಾರಣಕ್ಕೆ ಎನ್ನುವ ಮಾಹಿತಿ ಇಲ್ಲಿದೆ.
ರಶ್ಮಿಕಾ ಮಂದಣ್ಣ ಅವರು ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಮಿಂಚಿದ ನಂತರ ಅವರು ಉತ್ತರ ಭಾರತದಲ್ಲೂ ಧೂಳೆಬ್ಬಿಸುತ್ತಿದ್ದಾರೆ. ಅವರ ಸಿನಿಮಾಗಳು ಬಾಲಿವುಡ್‌ನಲ್ಲೂ ಹವಾ ಸೃಷ್ಟಿ ಮಾಡಿದೆ. ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಈಗ ಬಹು ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತೀಯ ಸಿನಿಮಾರಂಗ ಮತ್ತು ಬಾಲಿವುಡ್ ಎರಡೂ ಚಿತ್ರರಂಗಗಳಲ್ಲೂ ಏಕಕಾಲಕ್ಕೆ ಬ್ಯೂಸಿಯಾಗಿದ್ದಾರೆ. ದಿನೇಶ್ ವಿಜನ್ ನಿರ್ಮಾಣದ ಹಾರರ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಕೆರಿಯರ್‌ನಲ್ಲಿ ಇದು ಹೊಸ ಮಾದರಿಯ ಸಿನಿಮಾ ಅಂತಲೇ ಹೇಳಲಾಗುತ್ತಿದೆ.

ಈ ಸಿನಿಮಾದ ಹೀರೋ ಆಯುಷ್ಮಾನ್ ಖುರಾನಾ. ಸಿನಿಮಾದ ಹೆಸರು ಥಮಾ. ಇದು ಬಹು ನಿರೀಕ್ಷೆಯ ಸಿನಿಮಾ ಆಗಿದ್ದು. ರಶ್ಮಿಕಾ ಅವರ ಸಿನಿಮಾ ಕೆರಿಯರ್‌ಗೆ ಇದು ಹೊಸ ತಿರುವು ಕೊಡಲಿದೆ ಅಂತಲೇ ಹೇಳಲಾಗುತ್ತಿದೆ. ಸಿನಿಮಾವೊಂದರ ವಿಚಾರವಾಗಿ ರಶ್ಮಿಕಾ ಮಂದಣ್ಣ ಅವರ ಸಹಾಯಕ್ಕೆ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರು ಬಂದಿದ್ದಾರೆ. ಬಾಲಿವುಡ್‌ನಲ್ಲೇ ಇದು ಹೊಸ ಮಾದರಿಯ ಪ್ರಯೋಗ ಅಂತಲೇ ಹೇಳಲಾಗುತ್ತಿದೆ.
ರಶ್ಮಿಕಾ ಅವರ ಥಮಾ ಸಿನಿಮಾಕ್ಕಾಗಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರು ಒಂದಾಗಿದ್ದು. ಸಹಾಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ಇದು ಹೊಸ ಮಾದರಿಯ ಪ್ರಯೋಗ ಅಂತಲೇ ಹೇಳಲಾಗುತ್ತಿದೆ. ಈ ಸಿನಿಮಾ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರ ಕಾರ್ಯಕ್ಕೆ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರು ಒಂದಾಗಲಿದ್ದಾರೆ ಅಂತ ಹೇಳಲಾಗುತ್ತಿದೆ.
ಈ ಸಿನಿಮಾವನ್ನು ದಿನೇಶ್ ವಿಜನ್ ಅವರು ನಿರ್ಮಾಣ ಮಾಡಿದ್ದು. ಆಗಸ್ಟ್ 14ಕ್ಕೆ ರಿಲೀಸ್ ಆಗಲಿರುವ ಜೂ.ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರು ಅಭಿನಯಿಸಿರುವ ವಾರ್ 2 ಸಿನಿಮಾವನ್ನು ತಮ್ಮ ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ ಅಂತ ಹೇಳಲಾಗಿದೆ. ವಾರ್ 2 ಸಿನಿಮಾ ಥಿಯೇಟರ್ ಪ್ರಸಾರವಾಗುವ ಸಂದರ್ಭದಲ್ಲಿ ಈ ಚಿತ್ರದ ಟೀಸರ್ ಪ್ರಸಾರ ಕಾಣಿಸಿಕೊಳ್ಳಲಿದೆ. ಹಿಂದೆ ಈ ಮಾದರಿಯ ಸಿನಿಮಾಗಳು ಯಶಸ್ಸು ಕಂಡಿದ್ದು ರಶ್ಮಿಕಾ ಮಂದಣ್ಣ ಅವರಿಗೂ ಯಶಸ್ಸು ಪಕ್ಕಾ ಅಂತಲೇ ಹೇಳಲಾಗುತ್ತಿದೆ.












Click it and Unblock the Notifications