ನಟ ಯಶ್‌-ತಾಯಿ ನಡುವೆ ಬಿರುಕು? ಅಮ್ಮ ಬೇರೆ, ಮಗ ಬೇರೆ ಎಂದಿದ್ದೇಕೆ ಪುಷ್ಪ ಅರುಣ್ ಕುಮಾರ್

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಟಾಕ್ಸಿಕ್‌ ಹಾಗೂ ರಾಮಾಯಣ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಯಶ್‌ ತನ್ನ ಪತ್ನಿಯೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ಇತ್ತ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಯಶ್‌ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು ಎಂಟ್ರಿ ಕೊಟ್ಟಿದ್ದು, ಮೊದಲ ಸಿನಿಮಾ ಕೊತ್ತಲವಾಡಿ ರಿಲೀಸ್‌ಗೆ ರೆಡಿಯಾಗಿದೆ. ಈ ಹಿನ್ನೆಲೆ ಪುಷ್ಪ ಅವರು ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್‌ ಸ್ಮಾರಕಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳು ಯಶ್‌ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ತಾಯಿ ಪುಷ್ಪ ಅವರು ಗರಂ ಆಗಿದ್ದಾರೆ. 'ಯಶ್‌.. ಯಶ್‌.. ಅನ್ನೋದಾದ್ರೆ ಅವನ ಹತ್ತಿರವೇ ಹೋಗಿ' ಎಂದಿದ್ದಾರೆ.

'ಹೋಗಿ ಯಶ್‌ ಹತ್ರಾನೇ ಪ್ರಶ್ನೆ ಕೇಳಿ, ನಾನು ಯಶ್‌ ಬಗ್ಗೆ ಏನೂ ಹೇಳಲ್ಲ. ಯಶ್‌ ನಿಮಗೆ ಮಾತ್ರವಲ್ಲ, ನಮಗೂ ಸಿಗಲ್ಲ ಎಂದಿದ್ದಾರೆ. ಅಮ್ಮನ ಮೊದಲ ಸಿನಿಮಾ ಬರ್ತಿದೆ ಅನ್ನೋ ಸೆಂಟಿಮೆಂಟ್‌ ಎಲ್ಲ ನಮ್ಮ ಮನೇಲಿ ಇಟ್ಟುಕೊಂಡಿಲ್ಲ. ನಾವು ಮನೆ ಕಟ್ಟಿದ ಮೇಲೆ ಯಶ್‌ ಇಲ್ಲ ಅಂದ್ರೂ ಗೃಹಪ್ರವೇಶ ಮಾಡ್ತೀವಿ ಎಂದು ಖಡಕ್‌ ಆಗಿ ಹೇಳಿದ್ದಾರೆ. ನಮ್ಮ ಚೊಚ್ಚಲ ಕೊತ್ತಲವಾಡಿ ಸಿನಿಮಾವನ್ನು ಯಶ್‌, ರಾಧಿಕಾ ಯಾರಿಗೂ ತೋರಿಸುವುದಿಲ್ಲ. ಈ ಸಿನಿಮಾ ನೋಡ್ತಾರೋ ಬಿಡ್ತಾರೋ ಅನ್ನೋದನ್ನ ಅವರ ಬಳಿಯೇ ಕೇಳಿ. ಇಲ್ಲಿ ಮಗ ಬೇರೆ, ಅಮ್ಮ ಬೇರೆ, ಎಲ್ಲವೂ ಬೇರೆ ಬೇರೆ' ಎಂದು ಪುಷ್ಪ ಅವರು ಹೇಳಿದ್ದಾರೆ.

Actor Yash Mother Relationship Pushpa Arun Kumar Statement Controversy

ಯಶ್‌ ನೋಡಿದ್ರೆ ಸಿನಿಮಾ ಓಡುತ್ತಾ?

'ಯಶ್‌ ನಮ್ಮ ಸಿನಿಮಾ ನೋಡ್ತಾನೋ, ನೋಡಲ್ವೋ ನಾನು ನಿರೀಕ್ಷೆ ಮಾಡಲ್ಲ. ಪ್ರೇಕ್ಷಕರು ನೋಡಬೇಕು. ಯಶ್‌ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ಹಣ ವಾಪಸ್‌ ಬರುತ್ತಾ? ಇಲ್ಲಿ ನನಗೆ ಮಗನ ಅಭಿಪ್ರಾಯ ಬೇಕಾಗಿಲ್ಲ, ಪ್ರೇಕ್ಷಕರ ಅಭಿಪ್ರಾಯ ಮುಖ್ಯ. ಯಶ್‌ ಒಬ್ಬನಿಂದ ಸಿನಿಮಾ ಓಡಲ್ಲ, ನನ್ನ ಹಣ ಮತ್ತೆ ಬರಲ್ಲ ಎಂದು ಹೇಳಿದ್ದಾರೆ. ಮಗ ಎಂದಾಕ್ಷಣ ಅವನು ನನ್ನ ಮಾತು ಕೇಳಬೇಕು ಎಂದೇನಿಲ್ಲ. ಈಗ ಅವನೂ ಸಿನಿಮಾ ಮಾಡ್ತಿದ್ದಾನಲ್ಲ, ಅದನ್ನ ಮಾಡಲಿ. ಅಮ್ಮ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಅಂತ ಆ ಮೇಲೆ ಅವನಿಗೆ ಜನರೇ ಹೇಳ್ತಾರೆ. ಯಶ್‌ ಎಲ್ಲ ನಿಮಗಾಗಿ ಮಾಡುತ್ತಿದ್ದಾನೆ, ಯಶ್‌ ಸಿಕ್ಕಿರುವ ಅವಕಾಶ ಎಷ್ಟೋ ಜನಕ್ಕೆ ಸಿಕ್ಕಿದೆ, ಬೇರೆಯವರೂ ಬೆಳೆಯಲಿ ಬಿಡಿ' ಎಂದಿದ್ದಾರೆ.

'ಯಶ್‌ ಈಗ ಹಿಂದಿಯಲ್ಲಿ ಹೋಗಿ ಮಾಡ್ತಿದ್ದಾನೆ. ಕನ್ನಡದಲ್ಲೂ ಅಂತಹ ದೊಡ್ಡ ಬ್ಯಾನರ್‌ಗಳು ಬರಬೇಕು. ನಾನು ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ, ನಟರು ನಟನೆ ಮಾಡಬೇಕು. ನಿರ್ದೇಶಕರು ಡೈರೆಕ್ಟ್‌ ಮಾಡಬೇಕು. ನಾವು ಬರೀ ಸಿನಿಮಾಗೆ ಹಣ ಹಾಕೋದಷ್ಟೇ ಎಂದಿದ್ದಾರೆ. ಈ ಹಿಂದೆಯೂ ನನ್ನ ನಟಿಸಲು ತುಂಬಾ ಜನ ಕೇಳಿದ್ರು. ಆದರೆ ನಾನು ಒಪ್ಪಲಿಲ್ಲ. ರಾಧಿಕಾ ಈಗ ಅಮೇರಿಕಾದಲ್ಲಿದ್ದಾಳೆ, ರಾಮಾಯಣ ಟೀಸರ್‌ ನೋಡಿರುತ್ತಾಳೆ. ಅತ್ತೆ ನಮ್ಮ ಯಜಮಾನರಿಗಿಂತ ಫಾಸ್ಟ್‌ ಎಂದು ಹೇಳಿದ್ದಳು' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+