Rakshak Bullet: ಕಾಲು ಮುರಿತ ಕೇಸ್: ರಕ್ಷಕ್ ಬುಲೆಟ್ ವಿರುದ್ಧ FIR ದಾಖಲು

ಬೆಂಗಳೂರು, ಆಗಸ್ಟ್‌ 02: ಬಿಗ್ಬಾಸ್ ಖ್ಯಾತಿಯ ರಕ್ಷಕ್‌ ಬುಲೆಟ್ ಅವರು ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ರಕ್ಷಕ್ ಬುಲೆಟ್ ಅವರು ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನ ಎಡಗಾಲು ಮುರಿತವಾಗಿದೆ. ಈ ಪ್ರಕರಣ ಸಂಬಂಧ ಹೆಣ್ಣೂರು ಸಂಚಾರ ಠಾಣೆಯಲ್ಲಿ ರಕ್ಷಕ್ ಬುಲೆಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಯ ಗಾಯಗೊಂಡಿರುವ ವೇಣುಗೋಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಅಜಾಗರೂಕವಾಗಿ ಜೀಪು ಚಾಲನೆ ಮಾಡಿ ಬೈಕ್‌ ಡಿಕ್ಕಿ ಹೊಡೆಸಿ ಬೈಕ್‌ ಸವಾರನ ಕಾಲುಮುರಿತಕ್ಕೆ ಕಾರಣವಾಗಿದೆ. ನಟ ರಕ್ಷಕ್‌ ಎಸಗಿದ ಅಪಘಾತದಿಂದ ಕಾಲು ಮುರಿದುಕೊಂಡಿರುವ ಖಾಸಗಿ ಕಂಪನಿ ಉದ್ಯೋಗಿ ವೇಣುಗೋಪಾಲ್‌ (27) ಎಂಬುವವರು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

Actor Rakshak Bullet Thar Car Accident Bike Rider Leg Fracture

ತನ್ನ ಸ್ನೇಹಿತೆಯನ್ನು ಬೈಕ್‌ ಹಿಂಬದಿ ಕೂರಿಸಿಕೊಂಡು ವೇಣುಗೋಪಾಲ್‌ ಥಣಿಸಂದ್ರದ ಮಾನ್ಯತಾ ಟೆಕ್‌ಪಾರ್ಕ್ ಬಳಿ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಥಾರ್‌ ಜೀಪಿನಲ್ಲಿ ಬಂದ ರಕ್ಷಕ್‌ ಬುಲೆಟ್ , ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ವೇಣುಗೋಪಾಲ್‌ ಹಾಗೂ ಸ್ನೇಹಿತೆ ಇಬ್ಬರೂ ಕೆಳಗೆ ಉರುಳಿದ್ದಾರೆ. ಈ ವೇಳೆ ಅಪಘಾತದಲ್ಲಿ ವೇಣುಗೋಪಾಲ್‌ ಎಡಕಾಲು ಮುರಿದಿದೆ. ಇನ್ನೂ ವೇಣುಗೋಪಾಲ್‌ ಅವರ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಬಂಧ ಶುಕ್ರವಾರ ಗಾಯಾಳು ದೂರು ನೀಡಿದ್ದಾರೆ. ಇನ್ನೂ ರಕ್ಷಕ್‌ ಬುಲೆಟ್‌ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಅಪಘಾತದ ಬಳಿಕ ರಕ್ಷಕ್‌ ಬುಲೆಟ್‌ ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಬಿಗ್‌ ಬಾಸ್‌ ಸ್ಪರ್ಧಿ ಪ್ರಥಮ್‌ ಮೇಲೆ ಹಲ್ಲೆ ಪ್ರಕರಣದಲ್ಲಿ ರಕ್ಷಕ್‌ ಬುಲೆಟ್‌ ಹೆಸರು ಕೇಳಿ ಬಂದಿತ್ತು. ಸ್ವತಃ ರಕ್ಷಕ್‌ ಬುಲೆಟ್‌ ಪ್ರಥಮ್‌ನನ್ನು ದೊಡ್ಡಬಳ್ಳಾಪುರಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿತ್ತು. ಕೊನೆಗೆ ಸ್ವತಃ ಪ್ರಥಮ್‌,ದೊಡ್ಡಬಳ್ಳಾಪುರದಲ್ಲಿ ನನ್ನ ಮೇಲೆ ದರ್ಶನ್‌ ಅಭಿಮಾನಿಗಳು ಹಲ್ಲೆ ಮಾಡಿರುವುದಕ್ಕೂ ರಕ್ಷಕ್‌ ಬುಲೆಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+